ಮುಂಬೈ: ಆಘಾತಕಾರಿ ಘಟನೆಯಲ್ಲಿ ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಹಿಸರ್ ಶಾಖೆಯಲ್ಲಿ ದರೋಡೆ ನಡೆದಿದ್ದು, ಘಟನೆಯ ವೇಳೆ ಓರ್ವ ಉದ್ಯೋಗಿ ಹತ್ಯೆಗೀಡಾಗಿದ್ದು, ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಸಾಯಂಕಾಲ ಈ ಘಟನೆ ನಡೆದಿದೆ. ಬ್ಯಾಂಕ್ನ ಸರ್ವೈಲೆನ್ಸ್ ಕ್ಯಾಮರಾಗಳಲ್ಲಿ ಇಡೀ ವೃತ್ತಾಂತ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಯ ಬಳಿಕ ಇಬ್ಬರೂ ಆಗುಂತಕರು ಪರಾರಿಯಾಗಿದ್ದಾರೆ. ಮೃತ ಉದ್ಯೋಗಿ ಎಸ್ಬಿಐನ ಹೊರಗುತ್ತಿಗೆ ನೌಕರ ಎಂದು ತಿಳಿದುಬಂದಿದೆ.
ಇಬ್ಬರು ಮುಸುಕುಧಾರಿ ಆಗುಂತಕರು ಒಳ ಪ್ರವೇಶಿಸಿದ್ದರು. ಒಬ್ಬ ದರೋಡೆ ಮಾಡುತ್ತಿದ್ದರೆ ಮತ್ತೊಬ್ಬ ಗನ್ ಝಳಪಿಸುತ್ತಾ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸುತ್ತಿರುವುದು ಕಂಡುಬಂದಿದೆ. ದರೋಡೆಯ ಬಳಿಕ ಸುದ್ದಿ ತಲುಪುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಹಿಸರ್ ಶಾಖೆಯಲ್ಲಿ ದರೋಡೆ ನಡೆಸುವಾಗ ಗುಂಡು ಹಾರಿಸಿ, ಒಬ್ಬ ಸಿಬ್ಬಂದಿಯನ್ನು ಸಾಯಿಸಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ಸುಮಾರು 2.5 ಲಕ್ಷ ರೂಪಾಯಿ ಹಣ ಮತ್ತು ಆಯುಧಗಳನ್ನ ವಶಪಡಿಸಿಕೊಂಡಿದ್ದಾರೆ. ಒಟ್ಟು 8 ಪೊಲೀಸ್ ತಂಡಗಳು ದರೋಡೆಕೋರರ ಬೆನ್ನುಹತ್ತಿದ್ದವು.
Mumbai | One SBI contract employee died after being shot by 2 unknown persons at bank's Dahisar branch. One of them opened fire at the employee. They collected about Rs 2.5 lakhs from cashier, & fled; 8 teams placed for search: Pravind Padwal, Additional CP, North Region (29.12) pic.twitter.com/83jBYJjNPB
— ANI (@ANI) December 29, 2021
Published On - 11:03 am, Thu, 30 December 21