Omicron: ದೇಶದಲ್ಲಿ 961ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ; ಗುಣಮುಖರಾದವರೆಷ್ಟು? ಇಲ್ಲಿದೆ ಮಾಹಿತಿ

Omicron: ದೇಶದಲ್ಲಿ 961ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ; ಗುಣಮುಖರಾದವರೆಷ್ಟು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ

Covid 19: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,154 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ 961ಕ್ಕೇರಿದೆ. ದೇಶದಲ್ಲಿ ಗುಣಮುಖರಾದವರ ಪ್ರಮಾಣ ಎಷ್ಟಿದೆ? ಇಲ್ಲಿದೆ ಮಾಹಿತಿ.

TV9kannada Web Team

| Edited By: shivaprasad.hs

Dec 30, 2021 | 2:34 PM

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಭಾರತದಲ್ಲಿ ಒಮಿಕ್ರಾನ್ (Omicron) ಪ್ರಕರಣಗಳ ಸಂಖ್ಯೆ 961ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 13,154 ಹೊಸ ಕರೋನ ಪ್ರಕರಣಗಳು (Corona Cases) ವರದಿಯಾಗಿದ್ದು, ದೇಶದಲ್ಲಿ ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 34.8 ಮಿಲಿಯನ್‌ಗೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. ಅಲ್ಲದೆ, ಕಳೆದ 24 ಗಂಟೆಗಳ ಅವಧಿಯಲ್ಲಿ 268 ಜನರು ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 480,860 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಒಮಿಕ್ರಾನ್ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು? ಗುಣಮುಖರಾದವರೆಷ್ಟು? ದೆಹಲಿಯಲ್ಲಿ 263 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದರೆ ಮಹಾರಾಷ್ಟ್ರದಲ್ಲಿ 252 ಮತ್ತು ಗುಜರಾತ್​ನಲ್ಲಿ 97 ಪ್ರಕರಣಗಳು ವರದಿಯಾಗಿವೆ. ಗುಜರಾತ್​ನಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಶೇ.170ರಷ್ಟು ಒಮಿಕ್ರಾನ್ ಪ್ರಕರಣಗಳಾಗಿವೆ. ಒಮಿಕ್ರಾನ್ ಪ್ರಕರಣಗಳು ಪ್ರಸ್ತುತ ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ರೂಪಾಂತರ ಕಂಡುಬಂದಿದೆ. ಇದೇ ವೇಳೆ 961 ಒಮಿಕ್ರಾನ್ ಸೋಂಕಿತರಲ್ಲಿ 320 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಸಚಿವಾಲಯದ ಅಂಕಿಅಂಶಗಳಲ್ಲಿ ತಿಳಿಸಲಾಗಿದೆ.

ರಾಜಸ್ಥಾನ ಮತ್ತು ಕೇರಳದಲ್ಲಿ ಕ್ರಮವಾಗಿ 69 ಮತ್ತು 65 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ತೆಲಂಗಾಣದಲ್ಲಿ 62 ಜನರಿಗೆ, ತಮಿಳುನಾಡಿನಲ್ಲಿ 45 ಜನರಿಗೆ ಒಮಿಕ್ರಾನ್ ಸೋಂಕು ತಗುಲಿದೆ. ಕರ್ನಾಟಕದಲ್ಲಿ 34 ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶ (16 ಪ್ರಕರಣಗಳು), ಹರಿಯಾಣ (12 ಪ್ರಕರಣಗಳು) ಮತ್ತು ಪಶ್ಚಿಮ ಬಂಗಾಳಗಳಲ್ಲಿ (11 ಪ್ರಕರಣಗಳು) ಇದುವರೆಗೆ 20 ಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬಂದಿವೆ.

ಮಧ್ಯಪ್ರದೇಶ (9 ಪ್ರಕರಣಗಳು), ಒಡಿಶಾ (9 ಪ್ರಕರಣಗಳು), ಉತ್ತರಾಖಂಡ (4 ಪ್ರಕರಣಗಳು), ಚಂಡೀಗಢ (3 ಪ್ರಕರಣಗಳು), ಜಮ್ಮು ಮತ್ತು ಕಾಶ್ಮೀರ (3 ಪ್ರಕರಣಗಳು), ಉತ್ತರ ಪ್ರದೇಶ (2 ಪ್ರಕರಣಗಳು), ಗೋವಾ, ಹಿಮಾಚಲ ಪ್ರದೇಶ, ಲಡಾಖ್, ಮಣಿಪುರ ಮತ್ತು ಪಂಜಾಬ್​ಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಗುಣಮುಖರಾದವರೆಷ್ಟು? ಕಳೆದ 24 ಗಂಟೆಗಳಲ್ಲಿ 7,486 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ದೇಶದಲ್ಲಿ ಒಟ್ಟು 34,258,778 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಗುಣಮುಖರಾದವರ ಪ್ರಮಾಣ 98.38 ಪ್ರತಿಶತದಷ್ಟಿದೆ. ಒಟ್ಟು 67.64 ಕೋಟಿ ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಲಸಿಕೆಯ ವಿಚಾರಕ್ಕೆ ಬಂದರೆ, ಕಳೆದ 24 ಗಂಟೆಯಲ್ಲಿ 63,91,282 ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಇದುವರೆಗೆ ಒಟ್ಟು 143.83 ಕೋಟಿ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ ಎಂದು ಸಚಿವಾಲಯದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

US Covid cases: ಅಮೇರಿಕಾ, ಫ್ರಾನ್ಸ್​ನಲ್ಲಿ ತೀವ್ರಗತಿಯಲ್ಲಿ ಏರುತ್ತಿವೆ ಕೊರೊನಾ ಪ್ರಕರಣಗಳು; ಇಲ್ಲಿದೆ ಅಂಕಿಅಂಶ

Kalicharan Maharaj: ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಳಿಚರಣ್ ಮಹಾರಾಜ್ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada