Kalicharan Maharaj: ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಳಿಚರಣ್ ಮಹಾರಾಜ್ ಬಂಧನ
Kalicharan Maharaj arrested: ಡಿಸೆಂಬರ್ 26ರಂದು ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್ರನ್ನು ಪೊಲೀಸರು ಬಂಧಿಸಿದ್ದಾರೆ.
ಖಜರಾಹೊ: ರಾಯ್‌ಪುರದಲ್ಲಿ ಮಹಾತ್ಮಾ ಗಾಂಧಿ (Mahatma Gandhi) ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಜಾಳಿಚರಣ್ ಮಹಾರಾಜ್ರನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಖಜರಾಹೋದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಡಿಸೆಂಬರ್ 26 ರಂದು ಕಾಳಿಚರಣ್ ಮಹಾರಾಜ್ ಮಹಾತ್ಮ ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಿ ಹೇಳಿಕೆ ನೀಡಿದ್ದರು. ಧರ್ಮವನ್ನು ರಕ್ಷಿಸಲು ಜನರು ಹಿಂದೂ ನಾಯಕನನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬೇಕು ಎಂದೂ ಅವರು ಹೇಳಿದ್ದರು. ಕಾಳಿಚರಣ್ ಮಹಾರಾಜ್ ಮಧ್ಯಪ್ರದೇಶದ ಖಜುರಾಹೊದಿಂದ 25 ಕಿಮೀ ದೂರದಲ್ಲಿರುವ ಬಾಗೇಶ್ವರ ಧಾಮದ ಬಳಿ ವಸತಿಗೃಹದಲ್ಲಿ ತಂಗಿದ್ದರು. ಇಂದು ಮುಂಜಾನೆ 4 ಗಂಟೆಗೆ ರಾಯ್‌ಪುರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸಂಜೆಯ ವೇಳೆಗೆ, ಪೊಲೀಸ್ ತಂಡವು ರಾಯ್‌ಪುರವನ್ನು ತಲುಪಲಿದೆ ಎಂದು ರಾಯ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರ್ವಾಲ್ ಎಎನ್‌ಐಗೆ ತಿಳಿಸಿದ್ದಾರೆ.
ಕಾಳಿಚರಣ್ ಅವರನ್ನು ಬಂಧಿಸುತ್ತಿರುವ ಪೊಲೀಸರು:
#WATCH Raipur Police arrests Kalicharan Maharaj from Madhya Pradesh’s Khajuraho for alleged inflammatory speech derogating Mahatma Gandhi
(Video source: Police) pic.twitter.com/xP8oaQaR7G
— ANI (@ANI) December 30, 2021
ರಾಯ್‌ಪುರದಲ್ಲಿ ಆಯೋಜಿಸಿದ್ದ ಧರ್ಮ ಸಂಸದ್‌ನಲ್ಲಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್, ಗಾಂಧೀಜಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹಾಗೆಯೇ ‘‘ನಮ್ಮ ಪ್ರಧಾನ ಕರ್ತವ್ಯ ಧರ್ಮವನ್ನು ಉಳಿಸುವುದು. ಯಾವುದೇ ಪಕ್ಷ ಸೇರಿದರೂ ಸರ್ಕಾರದಲ್ಲಿ ನಾವು ಕಟ್ಟಾ ಹಿಂದೂ ನಾಯಕನನ್ನು ಆಯ್ಕೆ ಮಾಡಬೇಕು’’ ಎಂದು ಅವರು ಹೇಳಿದ್ದರು.
‘‘ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂ ಧರ್ಮದ ಗುರಿಯಾಗಿದೆ. ಅವರು ನಮ್ಮ ಕಣ್ಣ ಮುಂದೆ 1947 ರಲ್ಲಿ(ವಿಭಜನೆಯನ್ನು ಉಲ್ಲೇಖಿಸಿ) ವಶಪಡಿಸಿಕೊಂಡರು . ಅವರು ಮೊದಲು ಇರಾನ್, ಇರಾಕ್ ಮತ್ತು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರು, ರಾಜಕೀಯದ ಮೂಲಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಶಪಡಿಸಿಕೊಂಡರು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ’’ ಎಂದು ಕಾಳಿಚರಣ್ ಹೇಳಿಕೆ ನೀಡಿದ್ದರು.
ಕಾಳಿಚರಣ್ ಮಹಾರಾಜ್ ಬಂಧನದ ಕುರಿತು ಎಎನ್ಐ ಹಂಚಿಕೊಂಡ ಟ್ವೀಟ್:
#WATCH Raipur Police arrests Kalicharan Maharaj from Madhya Pradesh’s Khajuraho for alleged inflammatory speech derogating Mahatma Gandhi
(Video source: Police) pic.twitter.com/xP8oaQaR7G
— ANI (@ANI) December 30, 2021
ಕಾಳಿಚರಣ್ ಹೇಳಿಕೆಗಳಿಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಛತ್ತೀಸ್‌ಗಢದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಮಹಾತ್ಮ ಗಾಂಧಿಯವರ ವಿರುದ್ಧ ಇಂತಹ ಪದಗಳನ್ನು ಬಳಸಿರುವುದು ಅತ್ಯಂತ ಆಕ್ಷೇಪಾರ್ಹ ಎಂದು ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಹೇಳಿದ್ದರು.
ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಡಿಸೆಂಬರ್ 26 ರಂದು ಕಾಳಿಚರಣ್ ಮಹಾರಾಜ್ ವಿರುದ್ಧ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಕಾಳಿಚರಣ್ ಪ್ರಚೋದನಕಾರಿ ಭಾಷಣ ಮಾಡುತ್ತಿರುವುದು ಇದೇ ಮೊದಲೇನಲ್ಲ. ಪುಣೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ವಿರೋಧ ಎದುರಿಸಿದ್ದರು.
ಇದನ್ನೂ ಓದಿ:
ಮುಂಬೈನಲ್ಲಿ ಹೊಸ ವರ್ಷಾಚರಣೆಗೆ ಫುಲ್ ಬ್ರೇಕ್; ನಗರಾದ್ಯಂತ ಇಂದಿನಿಂದಲೇ ಸೆಕ್ಷನ್ 144 ಜಾರಿ
EPFO e-nomination: ಇಪಿಎಫ್ಒ ಇ-ನಾಮಿನೇಷನ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ಮಾಹಿತಿ ಇಲ್ಲಿದೆ