ಮುಂಬೈನಲ್ಲಿ ಹೊಸ ವರ್ಷಾಚರಣೆಗೆ ಫುಲ್​ ಬ್ರೇಕ್​; ನಗರಾದ್ಯಂತ ಇಂದಿನಿಂದಲೇ ಸೆಕ್ಷನ್​ 144 ಜಾರಿ

ಮುಂಬೈನಲ್ಲಿ ಹೊಸ ವರ್ಷಾಚರಣೆಗೆ ಫುಲ್​ ಬ್ರೇಕ್​; ನಗರಾದ್ಯಂತ ಇಂದಿನಿಂದಲೇ ಸೆಕ್ಷನ್​ 144 ಜಾರಿ
ಸಾಂಕೇತಿಕ ಚಿತ್ರ

ಮುಂಬೈನಲ್ಲಿ ಬುಧವಾರ ಒಂದೇ ದಿನ 2510 ಕೊರೊನಾ ಕೇಸ್​ಗಳು ದಾಖಲಾಗಿವೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.  ಸದ್ಯ ಮುಂಬೈನಲ್ಲಿ 8060 ಕೊರೊನಾ ಸಕ್ರಿಯ ಪ್ರಕರಣಗಳಿವೆ.

TV9kannada Web Team

| Edited By: Lakshmi Hegde

Dec 30, 2021 | 10:46 AM

ಕೊವಿಡ್​ 19 ಪ್ರಕರಣಗಳು (Covid 19 Cases) ಮತ್ತೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಂಬೈ ಪೊಲೀಸರು ಇಂದು ನಗರದಲ್ಲಿ ಸೆಕ್ಷನ್​ 144 (Section 144 in Mumbai)ಹೇರಿದ್ದಾರೆ. ಇಂದಿನಿಂದ ಜನವರಿ 7ರವರೆಗೆ ಈ ಸೆಕ್ಷನ್​ 144 ಜಾರಿಯಲ್ಲಿ ಇರಲಿದೆ.  ಈ ಹೊಸ ಕೊವಿಡ್​ 19 ನಿಯಂತ್ರಣ ಕ್ರಮದ ಅನ್ವಯ, ಹೊಸವರ್ಷದ ಆಚರಣೆಯನ್ನು ನಿರ್ಬಂಧಿಸಲಾಗಿದೆ. ಡಿ.30ರಿಂದ ಜನವರಿ 7ರವರೆಗೆ ಮುಂಬೈನ ಯಾವುದೇ ಹೋಟೆಲ್​, ರೆಸ್ಟೋರೆಂಟ್​, ಬಾರ್​, ಪಬ್​, ರೆಸಾರ್ಟ್​ ಮತ್ತು ಕ್ಲಬ್​​ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ತೆರೆದ ಅಥವಾ ಮುಚ್ಚಿದ ಪ್ರದೇಶಗಳಲ್ಲಿ ನ್ಯೂ ಇಯರ್​ ಪಾರ್ಟಿ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.  ನಗರ ಪೊಲೀಸ್​ ಆಯುಕ್ತರು ಸೆಕ್ಷನ್​ 144 ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಜನವರಿ 7ರವರೆಗೂ ಇದು ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಈ ಆದೇಶವನ್ನು ಉಲ್ಲಂಘಿಸಿದವರಿಗೆ, ಭಾರತೀಯ ದಂಡ ಸಂಹಿತೆ 1860ರ, ಸೆಕ್ಷನ್​ 188ರಡಿಯಲ್ಲಿ ಶಿಕ್ಷೆ ಕಟ್ಟಿಟ್ಟಬುತ್ತಿ.  ಅಷ್ಟೇ ಅಲ್ಲ, ಉಲ್ಲಂಘಿಸುವ ವ್ಯಕ್ತಿಯ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಅನ್ವಯ ಆಗುವ ಇತರ ಕಾನೂನುಗಳಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡೆಪ್ಯೂಟಿ ಕಮಿಷನರ್​ ಪೊಲೀಸ್​ ಚೈತನ್ಯ ತಿಳಿಸಿದ್ದಾರೆ. ಹೆಚ್ಚುತ್ತಿರುವ ಒಮಿಕ್ರಾನ್ ಮತ್ತು ಕೊವಿಡ್​ 19 ಸೋಂಕಿನ ಮಧ್ಯೆ ಈ ಹೊಸವರ್ಷವೂ ಬಂದಿದೆ. ಹಾಗಾಗಿ ಹೊಸವರ್ಷದಂದು ಸಾಧ್ಯವಾದಷ್ಟು ಆಚರಣೆಯನ್ನು ತಡೆಯಬೇಕು. ಈ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಯಲು ಆಯಾ ಆಡಳಿತಗಳು ಮುಂದಾಗಿವೆ. ಬರೀ ಮುಂಬೈ ಅಷ್ಟೇ ಅಲ್ಲ, ರಾಷ್ಟ್ರ ರಾಜಧಾನಿ ದೆಹಲಿ ಕಠಿಣ ನಿಯಮಗಳನ್ನು ಹೇರಿದೆ. ಅಲ್ಲಿ ಶಾಲಾ-ಕಾಲೇಜು, ಜಿಮ್​, ಸಿನಿಮಾ ಹಾಲ್​ಗಳೆಲ್ಲ ಮತ್ತೆ ಬಂದ್​ ಆಗಿವೆ.

ಇನ್ನು ಮುಂಬೈನಲ್ಲಿ ಬುಧವಾರ ಒಂದೇ ದಿನ 2510 ಕೊರೊನಾ ಕೇಸ್​ಗಳು ದಾಖಲಾಗಿವೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.  ಸದ್ಯ ಮುಂಬೈನಲ್ಲಿ 8060 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣ ಶೇ.97ರಷ್ಟಿದೆ. ಒಟ್ಟು 45 ಕಟ್ಟಗಳನ್ನು ಸೀಲ್​ಡೌನ್ ಮಾಡಲಾಗಿದೆ. ಒಮಿಕ್ರಾನ್​ ಸೋಂಕಿತರ ಸಂಖ್ಯೆಯೂ ಜಾಸ್ತಿಯಿದೆ. ಇನ್ನು ಕೊವಿಡ್​ 19 ಸೋಂಕಿನ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಬೃಹ್ಮನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಶನ್​ (ಬಿಎಂಸಿ) ಅಧಿಕಾರಿಗಳ ಜತೆ ಸಭೆ ಕೂಡ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ: ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ ಎಂದ ಸುರ್ಜೇವಾಲ

Follow us on

Related Stories

Most Read Stories

Click on your DTH Provider to Add TV9 Kannada