AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಬ್ಯಾಂಕ್​ ರಾಬರಿ, ಓರ್ವ ಉದ್ಯೋಗಿ ಹತ್ಯೆ, ಕ್ಯಾಮರಾದಲ್ಲಿ ಘಟನೆ ಸೆರೆ

ಇಬ್ಬರು ಮುಸುಕುಧಾರಿ ಆಗುಂತಕರು ಒಳ ಪ್ರವೇಶಿಸಿದ್ದರು. ಒಬ್ಬ ದರೋಡೆ ಮಾಡುತ್ತಿದ್ದರೆ ಮತ್ತೊಬ್ಬ ಗನ್​ ಝಳಪಿಸುತ್ತಾ ಬ್ಯಾಂಕ್​ ಸಿಬ್ಬಂದಿಯನ್ನು ಬೆದರಿಸುತ್ತಿರುವುದು ಕಂಡುಬಂದಿದೆ. ದರೋಡೆಯ ಬಳಿಕ ಸುದ್ದಿ ತಲುಪುತ್ತಿದ್ದಂತೆ ಉನ್ನತ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

TV9 Web
| Updated By: ಸಾಧು ಶ್ರೀನಾಥ್​|

Updated on:Dec 30, 2021 | 11:09 AM

Share

ಮುಂಬೈ: ಆಘಾತಕಾರಿ ಘಟನೆಯಲ್ಲಿ ಮುಂಬೈನ ಸ್ಟೇಟ್​ ಬ್ಯಾಂಕ್​​ ಆಫ್​ ಇಂಡಿಯಾದ ದಹಿಸರ್​ ಶಾಖೆಯಲ್ಲಿ ದರೋಡೆ ನಡೆದಿದ್ದು, ಘಟನೆಯ ವೇಳೆ ಓರ್ವ ಉದ್ಯೋಗಿ ಹತ್ಯೆಗೀಡಾಗಿದ್ದು, ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಸಾಯಂಕಾಲ ಈ ಘಟನೆ ನಡೆದಿದೆ. ಬ್ಯಾಂಕ್​ನ ಸರ್ವೈಲೆನ್ಸ್ ಕ್ಯಾಮರಾಗಳಲ್ಲಿ ಇಡೀ ವೃತ್ತಾಂತ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಯ ಬಳಿಕ ಇಬ್ಬರೂ ಆಗುಂತಕರು ಪರಾರಿಯಾಗಿದ್ದಾರೆ. ಮೃತ ಉದ್ಯೋಗಿ ಎಸ್​ಬಿಐನ ಹೊರಗುತ್ತಿಗೆ ನೌಕರ ಎಂದು ತಿಳಿದುಬಂದಿದೆ.

ಇಬ್ಬರು ಮುಸುಕುಧಾರಿ ಆಗುಂತಕರು ಒಳ ಪ್ರವೇಶಿಸಿದ್ದರು. ಒಬ್ಬ ದರೋಡೆ ಮಾಡುತ್ತಿದ್ದರೆ ಮತ್ತೊಬ್ಬ ಗನ್​ ಝಳಪಿಸುತ್ತಾ ಬ್ಯಾಂಕ್​ ಸಿಬ್ಬಂದಿಯನ್ನು ಬೆದರಿಸುತ್ತಿರುವುದು ಕಂಡುಬಂದಿದೆ. ದರೋಡೆಯ ಬಳಿಕ ಸುದ್ದಿ ತಲುಪುತ್ತಿದ್ದಂತೆ ಉನ್ನತ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

ಸ್ಟೇಟ್​ ಬ್ಯಾಂಕ್​​ ಆಫ್​ ಇಂಡಿಯಾದ ದಹಿಸರ್​ ಶಾಖೆಯಲ್ಲಿ ದರೋಡೆ ನಡೆಸುವಾಗ ಗುಂಡು ಹಾರಿಸಿ, ಒಬ್ಬ ಸಿಬ್ಬಂದಿಯನ್ನು ಸಾಯಿಸಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ಸುಮಾರು 2.5 ಲಕ್ಷ ರೂಪಾಯಿ ಹಣ ಮತ್ತು ಆಯುಧಗಳನ್ನ ವಶಪಡಿಸಿಕೊಂಡಿದ್ದಾರೆ. ಒಟ್ಟು 8 ಪೊಲೀಸ್​ ತಂಡಗಳು ದರೋಡೆಕೋರರ ಬೆನ್ನುಹತ್ತಿದ್ದವು.

Published On - 11:03 am, Thu, 30 December 21

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು

ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!

ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ

ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ

ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ

ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ

ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ

ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ