ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ: ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ ಎಂದ ಸುರ್ಜೇವಾಲ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ: ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ ಎಂದ ಸುರ್ಜೇವಾಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ: ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಾಡಿಕೆಯಂತೆ ಈ ಬಾರಿಯೂ ಇಟಲಿ ಪ್ರವಾಸಕ್ಕೆ ತೆರಳಿದ್ದು, ಈ ಬಗ್ಗೆ ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

TV9kannada Web Team

| Edited By: sadhu srinath

Dec 30, 2021 | 10:26 AM

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಾಡಿಕೆಯಂತೆ ಈ ಬಾರಿಯೂ ಇಟಲಿ ಪ್ರವಾಸಕ್ಕೆ ತೆರಳಿದ್ದು, ಈ ಬಗ್ಗೆ ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುವುದು ಬೇಡ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ರಾಹುಲ್ ಪ್ರವಾಸ ಬಗ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಅಲ್ಪಾವಧಿಗೆ ವೈಯಕ್ತಿಕ ವಿದೇಶ ಪ್ರವಾಸ ಕೈಗೊಂಡಿದ್ದು, ಇಟಲಿಗೆ ತೆರಳಿದ್ದಾರೆ. ಇತ್ತೀಚೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಮಾರು 1 ತಿಂಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದರು.

ಹೊಸ ವರ್ಷದ ಹೊಸ್ತಿಲಲ್ಲಿ ಜೊತೆಗೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಬುಧವಾರ ಬೆಳಗ್ಗೆ ವಿದೇಶ ಪ್ರವಾಸ ಕೈಗೊಂಡಿರುವುದು ಹಲವರ ಹುಬ್ಬೇರಿಸಿದೆ.

ಈ ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಯಾವ ದೇಶಕ್ಕೆ ತೆರಳಿದ್ದಾರೆ, ಯಾವಾಗ ವಾಪಸಾಗುತ್ತಾರೆ ಎಂಬುದನ್ನು ಪಕ್ಷದ ಮೂಲಗಳು ಬಹಿರಂಗಪಡಿಸಿಲ್ಲ. ಆದರೆ ಅವರು ಇಟಲಿಗೆ ತೆರಳಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ರಾಹುಲ್​ ಗಾಂಧಿ ಪಂಜಾಬ್​​ನ ಮೋಗಾ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ಸಮಾವೇಶವನ್ನು ಜನವರಿ 3 ರಂದು ಉದ್ಘಾಟಿಸಿಬೇಕಿತ್ತು. ಆದರೆ ಅದೀಗ ಮುಂದೂಡುವ ಸಾಧ್ಯತೆಗಳಿವೆ. ಅಂದಹಾಗೆ ಪಂಜಾಬ್​​ನಲ್ಲಿ ಕಾಂಗ್ರೆಸ್​​ ಆಡಳಿತಾರೂಢ ಪಕ್ಷವಾಗಿದೆ.ಗಮನಾರ್ಹವೆಂದರೆ ಜನವರಿ 4 ರಂದು ಬಿಜೆಪಿ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್​ನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada