Robotic Elephant: ಕೇರಳದ ಕೃಷ್ಣ ದೇಗುಲಕ್ಕೆ ರೋಬೋಟಿಕ್ ಆನೆ, ಜೀವಂತ ಆನೆಗಳಿಂದ ದೂರ ಉಳಿದಿದ್ದೇಕೆ?

|

Updated on: Mar 01, 2023 | 2:54 PM

ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ರಾಮನ್ ರೋಬೋಟಿಕ್ ಆನೆ ಸೇರ್ಪಡೆಯಾಗಲಿದೆ. ಆದರೆ ಇದು ಸಾಮಾನ್ಯ ಆನೆ ಅಲ್ಲ, ರಾಮನ್ ರೋಬೋಟಿಕ್ ಆನೆ, ಇದನ್ನು ಇನ್ನು ಮುಂದೆ ದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ.

ತಿರುವನಂತಪುರಂ: ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ (Sri Krishna Temple) ರಾಮನ್ ರೋಬೋಟಿಕ್ (Robotic Elephant) ಆನೆ ಸೇರ್ಪಡೆಯಾಗಲಿದೆ. ಆದರೆ ಇದು ಸಾಮಾನ್ಯ ಆನೆ ಅಲ್ಲ, ರಾಮನ್ ರೋಬೋಟಿಕ್ ಆನೆ, ಇದನ್ನು ಇನ್ನು ಮುಂದೆ ದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ ಎಂದು ಕಲ್ಲೆತ್ತುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಸ್ಥಾನ, ತ್ರಿಶೂರ್ ದೇವಸ್ಥಾನದ ಅಧ್ಯಕ್ಷ ರಾಜ್‌ಕುಮಾರ್ ತಿಳಿಸಿದ್ದಾರೆ.

ಪ್ರಸ್ತುತ ಇದು ಸುಮಾರು 11 ಅಡಿ ಎತ್ತರವಿದೆ. ಇದರ ಮೇಲೆ ನಾಲ್ಕು ಜನರು ಮೇಲೆ ಕುಳಿತು ಮೆರವಣಿಗೆಯನ್ನು ನಡೆಸಬಹುದು. ಇದು ಸುರಕ್ಷಿತ ಮತ್ತು ಅತ್ಯಂತ ದುಬಾರಿ ಆನೆಯಾಗಿದೆ. ಈ ರೋಬೋಟಿಕ್ ಆನೆ ತರುವ ಯೋಜನೆಯು ಈ ದೇವಾಲಯದ ಆಚರಣೆಗಳ ಮೂಲಭೂತ ಅಂಶವಾಗಿರುವುದರಿಂದ ತಾಂತ್ರಿಕ ಆನೆಯನ್ನು ಇಲ್ಲಿಗೆ ತರಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಇಲ್ಲಿನ ಆಚರಣೆಗೆ ಆನೆ ಪ್ರಮುಖವಾಗಿರುವುದರಿಂದ ಈ ತಂತ್ರವನ್ನು ಬಳಸಲಾಗಿದೆ. ಇಲ್ಲಿ ಜೀವಂತ ಆನೆಗಳನ್ನು ಬಳಸಬೇಕಿಂದಲ್ಲ ಆದರೆ ಇದು ಅಲಂಕಾರಿತ ಆನೆಯಾಗಿದೆ.

ಇದನ್ನೂ ಓದಿ: Baby elephant: ಆಹಾರ ಅರಸಿ ಗುಂಡಿಗೆ ಬಿದ್ದ ಮರಿ ಆನೆ ಹೊರಬಂದಿದ್ದು ಹೇಗೆ?

ದೇವರ ಮೆರವಣಿಗೆಯ ಭಾಗವಾಗಿ ಈ ಆನೆಗಳನ್ನು ಬಳಸಲಾಗುತ್ತದೆ. ಆನೆಯು ದೇವರ ವಾಹನ, ಆನೆಗಳನ್ನು ಮುಖ್ಯವಾಗಿ ದೇವರ ಕೆಲಸಕ್ಕೆ ಉಪಯೋಗಿಸಲಾಗುವುದು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ. ಎರ್ನಾಕುಲಂ ಮತ್ತು ಪಾಲಕ್ಕಾಡ್‌ನಂತಹ ಪ್ರದೇಶಗಳಲ್ಲಿ ರಾಜರು ಆನೆಗಳನ್ನು ಆಡಂಬರಕ್ಕಾಗಿ ಮತ್ತು ತಮ್ಮ ಗೌರವಕ್ಕಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಆನೆಗಳಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಆನೆಗಳನ್ನು ಬಾಡಿಗೆ ಪಡೆದರೆ ಬೆಲೆಗಳು ಹೆಚ್ಚು. ಈ ಕಾರಣಕ್ಕೆ ಈಗ ರೋಬೋಟಿಕ್ ಆನೆಗಳನ್ನು ಬಳಸಲಾಗುವುದು. ಇನ್ನೂ ಮುಂದಕ್ಕೆ ದೇವಾಲಯಗಳು ಜೀವಂತ ಆನೆಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ.