ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರ ಮಗ ಅಧಿಕೃತ ಸಭೆಯಲ್ಲಿ ಹಾಜರಾಗಿದ್ದು ಪಂಜಾಬಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಸಭೆಯ ಅಧ್ಯಕ್ಷತೆಯನ್ನು ಡಿಜಿಪಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ವಹಿಸಿದ್ದರು, ಅದರಲ್ಲಿ ಮುಖ್ಯಮಂತ್ರಿ ಕೂಡಾ ಹಾಜರಿದ್ದರು. ಲೈವ್ ಹಿಂದೂಸ್ತಾನ್ ವರದಿ ಪ್ರಕಾರ, ಡಿಜಿಪಿ ಸಹೋತಾ ಅವರು ಇತ್ತೀಚೆಗೆ ಉನ್ನತ ಹುದ್ದೆಗೆ ಏರಿದ್ದು, ಗುರುವಾರ ಗಡಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಸಭೆನಡೆಸುತ್ತಿದ್ದರು. ಚನ್ನಿ ಅವರು ಈ ಸಭೆಯಲ್ಲಿ ಭಾಗಿಯಾಗಿದ್ದು ಅವರ ಮಗ ರಿದಂಜಿತ್ ಸಿಂಗ್ ಕೂಡ ಅಲ್ಲಿದ್ದರು. ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ರಾಜ್ಯ ಪೊಲೀಸ್ ಮುಖ್ಯಸ್ಥರ ಹಿಂದೆ ರಿದಂಜಿತ್ ಸಿಂಗ್ ಕುಳಿತುಕೊಂಡಿರುವುದು ಕಾಣಿಸುತ್ತದೆ.
ಈ ಬಗ್ಗೆ ಪತ್ರಕರ್ತ ಅಮನ್ ಸಿಂಗ್ ಛಿನಾ “ಸಿಎಂ ಚನ್ನಿಯ ಮಗ ಕಾನೂನು ಮತ್ತು ಸುವ್ಯವಸ್ಥೆ ಸಭೆಯಲ್ಲಿ ಕುಳಿತು ಡಿಜಿಪಿ ಮತ್ತು ಇತರ ಅಧಿಕಾರಿಗಳು ಮತ್ತು ಸಚಿವರನ್ನು ಭೇಟಿಯಾಗುವುದನ್ನು ಬಿಜೆಪಿ ವಿರೋಧಿಸಿದೆ. ಅವನು ಹಿಂದೆ ಕುಳಿತಿರುವುದನ್ನು ಕಾಣಬಹುದು. , ಈ ಚಿತ್ರಗಳನ್ನು ಪಂಜಾಬ್ ಸರ್ಕಾರದ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ಬಿಡುಗಡೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
BJP has objected to Chief Minister Charanjeet Singh Channi’s son sitting in a law and order meeting with DGP and other officers and ministers. He can be seen in these pics sitting in the back.
Interestingly these pics were released by Punjab Govt Directorate of Public Relations. pic.twitter.com/R8pBK5gmCE— Man Aman Singh Chhina (@manaman_chhina) October 3, 2021
ಸಿಎಂ ಮೇಲೆ ಟೀಕಾ ಪ್ರಹಾರ ಮಾಡಿದ ಪ್ರತಿಪಕ್ಷ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಂಜಾಬ್ ಘಟಕದ ಅಧ್ಯಕ್ಷ ಅಶ್ವಿನಿ ಶರ್ಮಾ, ಮೂರು ಅವಧಿಯ ಶಾಸಕರಾಗಿ ಚನ್ನಿ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ತಿಳಿದಿರಬೇಕು ಎಂದು ಹೇಳಿದರು. ಹಿರಿಯ ಅಧಿಕಾರಿಗಳಿಗೆ ನಿಯಮಗಳ ಬಗ್ಗೆ ತಿಳಿದಿದ್ದರೂ ಸಹ ಇದನ್ನು ಅನುಮತಿಸಿದ್ದು ದುರದೃಷ್ಟಕರ ಎಂದು ಶರ್ಮಾ ಹೇಳಿರುವುದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಕ್ರೀಡಾ ಖಾತೆ ಹೊಂದಿರುವ ಕ್ಯಾಬಿನೆಟ್ ಸಚಿವ ಪರ್ಗತ್ ಸಿಂಗ್ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಯ ಕುಟುಂಬದ ಸದಸ್ಯರು ಅಥವಾ ಯಾವುದೇ ಸಚಿವರ ಉಪಸ್ಥಿತಿಯು ರಾಜ್ಯ ಸರ್ಕಾರದ ವ್ಯವಹಾರದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನಿವೃತ್ತ ಅಧಿಕಾರಿ ಮತ್ತು ಕಾನೂನು ತಜ್ಞರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ..ಅವರ ಪ್ರಕಾರ, ಇಂತಹ ಸನ್ನಿವೇಶವು ಅಧಿಕೃತ ರಹಸ್ಯ ಕಾಯ್ದೆಯನ್ನು ಸಹ ಉಲ್ಲಂಘಿಸುತ್ತದೆ. ಸಿಎಂ ಮತ್ತು ಮಂತ್ರಿಗಳು ಸರ್ಕಾರಿ ವಿಷಯಗಳನ್ನು ಗೌಪ್ಯವಾಗಿ ಇಡುವುದಾಗಿ ಪ್ರಮಾಣ ವಚನ ವೇಳೆ ಪ್ರತಿಜ್ಞೆ ಕೈಗೊಳ್ಳುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: RCB Playing XI: ಪಂಜಾಬ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಒಂದು ಬದಲಾವಣೆ ಖಚಿತ
ಇದನ್ನೂ ಓದಿ: ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ