
ಮೋತಿಹಾರಿ, ಜೂನ್ 17: ಬಿಹಾರದ (Bihar) ಮೋತಿಹಾರಿಯಲ್ಲಿ ಒಂದು ದೊಡ್ಡ ಅಪಘಾತ ತಪ್ಪಿದೆ. ಆ ರೈಲ್ವೆ ನಿಲ್ದಾಣದಲ್ಲಿದ್ದ ಆರ್‌ಪಿಎಫ್ ಜವಾನ ತಮ್ಮ ಸಮಯಪ್ರಜ್ಞೆಯಿಂದ ಮಹಿಳೆಯ ಪ್ರಾಣ ಕಾಪಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಜವಾನರ ಧೈರ್ಯದಿಂದಾಗಿ ಮಹಿಳಾ ಪ್ರಯಾಣಿಕರೊಬ್ಬರ ಜೀವ ಉಳಿದಿದೆ. ಈ ಘಟನೆ ಸೋಮವಾರ ಸುಮಾರು ಸಂಜೆ 6.30ಕ್ಕೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಮಹಿಳೆಯೊಬ್ಬರು ರೈಲು ಹತ್ತಲು ಪ್ರಯತ್ನಿಸುತ್ತಿದ್ದರು. ಆದರೆ ಕಿಕ್ಕಿರಿದ ಚಲಿಸುವ ರೈಲಿನಿಂದ ಅವರಿಗೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಕೈ ಜಾರಿ ಅವರು ರೈಲಿನ ಗೇಟ್‌ನ ಹಿಡಿತವನ್ನು ಕಳೆದುಕೊಂಡು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಜಾರಿಬೀಳುವುದನ್ನು ಆರ್‌ಪಿಎಫ್ ಜವಾನ ನೋಡಿದರು. ತಕ್ಷಣ ಅವರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ತನ್ನ ಕೈಯಲ್ಲಿದ್ದ ಪ್ಯಾಕೆಟ್ ಅನ್ನು ಎಸೆದು, ಮಹಿಳೆಯನ್ನು ರೈಲಿನ ಚಕ್ರದಡಿ ಸಿಲುಕದಂತೆ ಕಾಪಾಡಿದರು. ಬಳಿಕ ಆಕೆಯನ್ನು ಪ್ಲಾಟ್‌ಫಾರ್ಮ್‌ಗೆ ಕರೆತಂದರು.
Life saved in seconds!
A woman slipped while boarding the #Bapudham Motihari–Patliputra MEMU Intercity at #Chakia station—RPF’s Jay Prakash Yadav rushed and rescued her just in time.
Owing to his quick reflexes, the passenger remained safe.#OperationJeevanRaksha#HeroesInUniform… pic.twitter.com/N2eJYQxPvX— RPF INDIA (@RPF_INDIA) June 17, 2025
ಇದನ್ನೂ ಓದಿ: ತಂದೆ ಅರ್ಧ ಸೇದಿ ಎಸೆದ ಬೀಡಿ ನುಂಗಿ ಕಂದಮ್ಮ ಸಾವು, ಪತಿಯ ವಿರುದ್ಧ ಪತ್ನಿ ದೂರು
ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. “ಕೆಲವೇ ಸೆಕೆಂಡುಗಳಲ್ಲಿ ಜೀವ ಉಳಿಸಲಾಗಿದೆ! ಚಾಕಿಯಾ ನಿಲ್ದಾಣದಲ್ಲಿ ಬಾಪುಧಾಮ್ ಮೋತಿಹರಿ–ಪತ್ಲಿಪುತ್ರ MEMU ಇಂಟರ್‌ಸಿಟಿ ಹತ್ತುವಾಗ ಮಹಿಳೆಯೊಬ್ಬರು ಜಾರಿಬಿದ್ದರು. ಆಗ ಆರ್‌ಪಿಎಫ್‌ನ ಜೈ ಪ್ರಕಾಶ್ ಯಾದವ್ ಧಾವಿಸಿ ಸಕಾಲದಲ್ಲಿ ಅವರನ್ನು ರಕ್ಷಿಸಿದರು. ಅವರ ಸಮಯಪ್ರಜ್ಞೆಯಿಂದಾಗಿ ಆ ಮಹಿಳೆ ಸುರಕ್ಷಿತವಾಗಿದ್ದಾರೆ” ಎಂದು ಆರ್‌ಪಿಎಫ್ ಇಂಡಿಯಾ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಜವಾನನನ್ನು ಜೈಪ್ರಕಾಶ್ ಯಾದವ್ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಅವರು ಮಹಿಳೆಯನ್ನು ರಕ್ಷಿಸಿದ್ದಲ್ಲದೆ, ರೈಲು ಹತ್ತಲು ಸಹಾಯ ಮಾಡಿದರು. ಅವರ ವರ್ತನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ