ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮೀಯರ ಏಕತೆ ಎಂಬ ಪರಿಕಲ್ಪನೆ ನಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುವಂತಿದೆ. ಏಕೆಂದರೆ ನಮ್ಮಲ್ಲಿ ಹಿಂದೂ ಮುಸ್ಲಿಮರು ಯಾವತ್ತೂ ಪ್ರತ್ಯೇಕವಾಗಿ ಬದುಕಿಲ್ಲ. ಹೀಗಾಗಿ ಮತ್ತೆ ಒಂದಾಗುವುದು ಎಂಬ ಕಲ್ಪನೆಯೇ ಸರಿಯಾದುದದಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಾಖ್ಯಾನಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಭಾರತದಲ್ಲಿ ಹಿಂದೂಗಳ ಪ್ರಾಬಲ್ಯವಿದೆಯೇ ಅಥವಾ ಮುಸ್ಲಿಮರ ಪ್ರಾಬಲ್ಯವಿದೆಯೇ ಎಂಬ ಸಂಗತಿಯೇ ಬರುವುದಿಲ್ಲ. ಏಕೆಂದರೆ ಇಲ್ಲಿ ಭಾರತೀಯರ ಪ್ರಾಬಲ್ಯ ಮಾತ್ರ ಇರಬಲ್ಲದು ಎಂದು ಅವರು ಕಾರ್ಯಕ್ರಮದಲ್ಲಿ ವ್ಯಾಖ್ಯಾನಿಸಿದರು.
ನಮ್ಮ ಇತಿಹಾಸದ ಪ್ರಕಾರ ಸುಮಾರು 40 ಸಾವಿರ ವರ್ಷಗಳ ಹಿಂದಿನಿಂದ ನಾವೆಲ್ಲರೂ ಒಂದೇ ಮೂಲದಿಂದ ಬಂದವರು. ನಮ್ಮೆಲ್ಲರ ಡಿಎನ್ಎ ಒಂದೇ ಆಗಿದ್ದು ನಾವೆಲ್ಲರೂ ಒಂದೇ ಪೂರ್ವಜರಿಂದ ಉಗಮವಾಗಿದ್ದೇವೆ. ರಾಜಕಿಯ ಜನರನ್ನು ಒಗ್ಗೂಡಿಸುತ್ತದೆ ಎಂಬುದನ್ನು ನಾನು ಒಪ್ಪಲಾರೆ. ಅದು ನಮ್ಮನ್ನು ವಿಚ್ಛಿದ್ರಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಮುಸ್ಲಿಮರು ಅಪಾಯದಲ್ಲಿ ಇದ್ದಾರೆ ಎಂಬ ವಾದವನ್ನು ಒಪ್ಪಲು ಸಿದ್ಧವಿಲ್ಲ ಎಂದ ಅವರು, ದೇಶ ಯಾವುದೇ ಒಂದು ಸಮುದಾಯವನ್ನು ಬಿಟ್ಟು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಅಭಿವೃದ್ಧಿ ಸಾಧಿಸಲು ಕುಳಿತು ಸಂವಾದ ನಡೆಸಬೇಕೇ ಹೊರತು, ಎಲ್ಲದಕ್ಕೂ ಅಪಸ್ವರ ಎತ್ತುವುದಲ್ಲ. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಕೃತಕ ಕಂದಕಕ್ಕೆ ಯಾರೂ ಬೀಳಬೇಡಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಆರ್ಎಸ್ಎಸ್ ದೇಶ ಕಟ್ಟುವಲ್ಲಿ ತನ್ನನ್ನು ಸದಾ ತೊಡಗಿಸಿಕೊಂಡಿರುತ್ತದೆ ಎಂದು ಸಹ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಚ್ಛರಿಸಿದರು.
ಇದನ್ನೂ ಓದಿ:
Pregnancy Care: ಕೊವಿಡ್ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ
(RSS chief Mohan Bhagwat says Hindu and Muslim have never lived separately in India dont believe mislead)
Published On - 9:46 pm, Sun, 4 July 21