ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ರ ಭವಿಷ್ಯ್ ಕಾ ಭಾರತ್ ಪುಸ್ತಕದ ಉರ್ದು ಆವೃತ್ತಿ ಇಂದು ಬಿಡುಗಡೆ; ಮುಸ್ಲಿಮರು ತಪ್ಪದೆ ಓದಿ ಎಂದ ಡಾ. ಅಕ್ವಿಲ್
ಮುಸ್ಲಿಮರನ್ನು ಹೊರತುಪಡಿಸಿದ ಹಿಂದುತ್ವದ ಕಲ್ಪನೆ ಅಪರಿಪೂರ್ಣ. ಇದನ್ನೇ ಮೋಹನ್ ಭಾಗವತ್ ಜೀ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಹಿಂದುತ್ವ ಎಂದರೆ ಹಿಂದು ಧರ್ಮವಲ್ಲ.. ಇದು ಇಡೀ ದೇಶದ ಸಂಸ್ಕೃತಿ ಎಂದು ಡಾ. ಅಕ್ವಿಲ್ ಹೇಳಿದ್ದಾರೆ.
ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬರೆದ ಭವಿಷ್ಯ್ ಕಾ ಭಾರತ್ ಪುಸ್ತಕದ ಉರ್ದು ಭಾಷೆಯ ಆವೃತ್ತಿ ಇಂದಿನಿಂದ ಲಭ್ಯವಾಗಲಿದೆ. ಮುಸ್ತಕಬಿಲ್ ಕಾ ಭಾರತ್ ಹೆಸರಿನ ಪುಸ್ತಕವನ್ನು ಇಂದು ಉರ್ದು ಭಾಷಾ ಪ್ರಚಾರ ಮಂಡಳಿ (ಎನ್ಸಿಪಿಯುಎಲ್) ಬಿಡುಗಡೆ ಮಾಡಲಿದೆ. ಭವಿಷ್ಯ್ ಕಾ ಭಾರತ್ ಪುಸ್ತಕ, 2018ರಲ್ಲಿ ಮೋಹನ್ ಭಾಗವತ್ ಅವರು ನೀಡಿದ ಉಪನ್ಯಾಸಗಳ ಮಾಲಿಕೆಯಾಗಿದ್ದು, ಭಾರತದ ಹಲವು ಭಾಷೆಗಳಿಗೆ ತರ್ಜುಮೆಗೊಂಡಿದೆ. ಉರ್ದುವಿನಲ್ಲೂ ಬಿಡುಗಡೆಯಾಗಿದ್ದು ವಿಶೇಷ.
ಮೋಹನ್ ಭಾಗವತ್ ಅವರು ಹಿಂದಿಯಲ್ಲಿ ಬರೆದಿದ್ದ ಭವಿಷ್ಯ್ ಕಾ ಭಾರತ್ ಪುಸ್ತಕವನ್ನು ಉರ್ದು ಭಾಷಾ ಪ್ರಚಾರ ಮಂಡಳಿ ನಿರ್ದೇಶಕ ಡಾ. ಅಕ್ವಿಲ್ ಅಹ್ಮದ್ ಉರ್ದು ಭಾಷೆಗೆ ತರ್ಜುಮೆ ಮಾಡಿದ್ದಾರೆ. ಮುಸ್ಲಿಮರು ಆರ್ಎಸ್ಎಸ್ ಬಗ್ಗೆ ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಇಸ್ಲಾಮಿಕ್ ವಿದ್ವಾಂಸರು, ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳಿಗೆ ಆರ್ಎಸ್ಎಸ್ ಸಂಘಟನೆಯನ್ನು ಅರ್ಥ ಮಾಡಿಕೊಳ್ಳಲು ಪುಸ್ತಕ ಸಹಾಯ ಮಾಡುತ್ತದೆ ಎಂದು ಡಾ. ಅಕ್ವಿಲ್ ತಿಳಿಸಿದ್ದಾರೆ.
ಮುಸ್ಲಿಮರನ್ನು ಹೊರತುಪಡಿಸಿದ ಹಿಂದುತ್ವದ ಕಲ್ಪನೆ ಅಪರಿಪೂರ್ಣ. ಇದನ್ನೇ ಮೋಹನ್ ಭಾಗವತ್ ಜೀ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಹಿಂದುತ್ವ ಎಂದರೆ ಹಿಂದು ಧರ್ಮವಲ್ಲ.. ಇದು ಇಡೀ ದೇಶದ ಸಂಸ್ಕೃತಿ ಎಂದು ಹೇಳಿರುವ ಡಾ. ಅಕ್ವಿಲ್, ಮುಸ್ಲಿಮರು ಈ ಪುಸ್ತಕವನ್ನು ಓದಬೇಕು. ಆರ್ಎಸ್ಎಸ್ ಶಾಖೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಮುಸ್ಲಿಂ ಬುದ್ಧಿಜೀವಿಗಳು ಆರ್ಎಸ್ಎಸ್ ಬಗ್ಗೆ ಅಪಾರ ಕುತೂಹಲ ಹೊಂದಿದ್ದಾರೆ. ಅದೇ ಕಾರಣಕ್ಕೆ ಈ ಪುಸ್ತಕವನ್ನು ಉರ್ದುವಿಗೂ ತರ್ಜುಮೆಗೊಳಿಸಲಾಗಿದೆ. ಇದರಲ್ಲಿ ಭಾರತದ ಪರಿಕಲ್ಪನೆ, ಭವಿಷ್ಯದ ಭಾರತ ನಿರ್ಮಾಣದಲ್ಲಿ ನಮ್ಮ ಪಾತ್ರ ಏನಿರಬೇಕು ಎಂಬುದನ್ನು ವಿವರಿಸಲಾಗಿದೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬರೆದಿರುವ ಭವಿಷ್ಯ್ ಕಾ ಭಾರತ್ ಪುಸ್ತಕದ ಉರ್ದು ಆವೃತ್ತಿಯ ಪುಸ್ತಕ ಬಿಡುಗಡೆಗೆ ಇಸ್ಲಾಂನ ಅನೇಕ ವಿದ್ವಾಂಸರು, ಪಂಡಿತರು, ವಿಮರ್ಶಕರಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರೂ ಕೂಡ ಹಾಜರಿರಲಿದ್ದಾರೆ ಎಂದು ಡಾ. ಅಕ್ವಿಲ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್, ಭಾರತದ ಸದೃಢ ಭವಿಷ್ಯಕ್ಕಾಗಿ ಮುಸ್ಲಿಮರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದಲೇ ಪುಸ್ತಕವನ್ನು ಅನುವಾದ ಮಾಡಲಾಗಿದೆ. ಉರ್ದು ಭಾಷೆಗೆ ಹಿಂದುಸ್ತಾನ ಮನೆ. ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಭಾರತದ ಭವಿಷ್ಯವನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್ಡೇ ಗಿಫ್ಟ್
Karnataka ByElection 2021: ಕಾಂಗ್ರೆಸ್ಗೆ ಬೈ ಬೈ, ಬಿಜೆಪಿಗೆ ಜೈಜೈ ಎಂದ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ