ಮದುವೆಯಾಗಲೆಂದೇ ಮತಾಂತರಗೊಳ್ಳುವುದು ತಪ್ಪು: ಮೋಹನ್ ಭಾಗವತ್
RSS Chief Mohan Bhagwat: OTT ಪ್ಲಾಟ್‌ಫಾರ್ಮ್‌ಗಳು ಎಲ್ಲಾ ರೀತಿಯ ವಿಷಯಗಳನ್ನು ತೋರಿಸುತ್ತವೆ. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ನೋಡಬೇಕು ಮತ್ತು ಏನನ್ನು ನೊಡಬಾರದು ಎಂಬುದನ್ನು ಕಲಿಸಬೇಕು ಎಂದು ಭಾಗವತ್ ಹೇಳಿದರು.
ದೇಶದೆಲ್ಲೆಡೆ ಈಗ ಮತಾಂತರದ್ದೇ ಸುದ್ದಿ. ಎಲ್ಲ ಪಕ್ಷಗಳೂ, ನಾಯಕರೂ ಮತಾಂತರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸರದಿ. ಮತಾಂತರದ ಕುರಿತು ಖಾರದ ಮಾತನ್ನಾಡಿರುವ ಮೋಹನ್ ಭಾಗವತ್ ಮಹಿಳೆಯರು ಮದುವೆಯಾಗಲೆಂದೇ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದು ತಪ್ಪು ಎಂದಿದ್ದಾರೆ. ತಾಯಂದಿರು ಮಕ್ಕಳಿಗೆ ಹಿಂದೂ ಧರ್ಮದ ಪರಂಪರೆ ಮತ್ತು ಉದಾತ್ತತೆಯನ್ನು ಬಾಲ್ಯದಿಂದಲೇ ಕಲಿಸುತ್ತಿಲ್ಲ. ಹೀಗಾಗಿ ಚಿಕ್ಕ ಪುಟ್ಟ ಸ್ವಹಿತದ ಕಾರಣಗಳಿಗಾಗಿ ಮತಾಂತರ ನಡೆಯುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
OTT ಪ್ಲಾಟ್‌ಫಾರ್ಮ್‌ಗಳು ಎಲ್ಲಾ ರೀತಿಯ ವಿಷಯಗಳನ್ನು ತೋರಿಸುತ್ತವೆ. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ನೋಡಬೇಕು ಮತ್ತು ಏನನ್ನು ನೊಡಬಾರದು ಎಂಬುದನ್ನು ಕಲಿಸಬೇಕು ಎಂದು ಭಾಗವತ್ ಹೇಳಿದರು.
ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಅವರ ಕುಟುಂಬಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮತಾಂತರ ಹೇಗೆ ನಡೆಯುತ್ತದೆ? ಎಂದು ಪ್ರಶ್ನಿಸಿರುವ ಅವರು, ಹಿಂದೂ ಹುಡುಗಿಯರು ಮತ್ತು ಹುಡುಗರು ಇತರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ? ಮದುವೆಯೆಂಬ ಸಣ್ಣ ಸ್ವಾರ್ಥಕ್ಕಾಗಿ. ನಾವು ಮಕ್ಕಳಿಗೆ ಮನೆಯಲ್ಲಿ ನಮ್ಮ ಧರ್ಮದ ಮೌಲ್ಯಗಳನ್ನು ಕಲಿಸಬೇಕಾಗಿದೆ. ನಮ್ಮ ಸ್ವಭಾವ, ನಮ್ಮ ಧರ್ಮ ಮತ್ತು ನಮ್ಮ ಪ್ರಾರ್ಥನಾ ಸಂಪ್ರದಾಯಗಳಲ್ಲಿ ಗೌರವವನ್ನು ಬೆಳೆಸಬೇಕಿದೆ ಎಂದು ಕರೆ ನೀಡಿದ್ದಾರೆ.
ಆರ್‌ಎಸ್‌ಎಸ್‌ನ ಗುರಿ ಹಿಂದೂ ಸಮಾಜವನ್ನು ಸಂಘಟಿಸುವುದು. ಆದರೆ ನಾವು ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಪುರುಷರನ್ನು ಮಾತ್ರ ಈಗ ನಾವು ಇಡೀ ಸಮಾಜವನ್ನು ಸಂಘಟಿಸಲು ಬಯಸಿದರೆ ಅದು ಶೇ 50ರಷ್ಟು ಮಹಿಳೆಯರನ್ನು ಹೊಂದಬೇಕಾಗುತ್ತದೆ ಎಂದು ಅವರು ಹೇಳಿದರು. ಭಾರತದ ಜನರು ಬಹಳಷ್ಟು ಸಂಪತ್ತನ್ನು ಹೊಂದಿದ್ದರು, ಆದರೆ ಮೊಘಲರ ಆಳ್ವಿಕೆಗೂ ಮುನ್ನವಷ್ಟೇ ಎಂದು ಅವರು ವ್ಯಾಖ್ಯಾನಿಸಿದರು.
ಇದನ್ನೂ ಓದಿ: