AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯೋಚಿಸಬೇಕಾಗಿರುವುದು ಮುಸ್ಲಿಂ ಪ್ರಭುತ್ವದ ಬಗ್ಗೆ ಅಲ್ಲ..ಈ ದೇಶದ ಪ್ರಾಬಲ್ಯದ ಬಗ್ಗೆ’-ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

Mohan Bhagwat: ನಾವು ಹಿಂದು ಶಬ್ದದ ಅರ್ಥವನ್ನು ತಾಯ್ನಾಡು ಎಂದೇ ಪರಿಗಣಿಸುತ್ತೇವೆ. ಪ್ರಾಚೀನ ಕಾಲದಲ್ಲಿದ್ದ ಸಂಸ್ಕೃತಿಯನ್ನೇ ನಾವು ಅಳವಡಿಸಿಕೊಂಡಿದ್ದೇವೆ ಎಂದು ಆರ್​ಎಸ್ಎಸ್ ಮುಖ್ಯಸ್ಥ ಮೋಹನ್​ ಭಾಗವತ್ ಹೇಳಿದ್ದಾರೆ.

‘ಯೋಚಿಸಬೇಕಾಗಿರುವುದು ಮುಸ್ಲಿಂ ಪ್ರಭುತ್ವದ ಬಗ್ಗೆ ಅಲ್ಲ..ಈ ದೇಶದ ಪ್ರಾಬಲ್ಯದ ಬಗ್ಗೆ’-ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​
ಮೋಹನ್​ ಭಾಗವತ್​
TV9 Web
| Edited By: |

Updated on: Sep 07, 2021 | 5:32 PM

Share

ಮೂಲಭೂತವಾದ (Fundamentalism)ದ ವಿರುದ್ಧ ಒಂದು ದೃಢವಾದ ನಿಲುವು ಕೈಗೊಳ್ಳಿ ಎಂದು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್ (Mohan Bhagwat)​ ಇಂದು ಮುಸ್ಲಿಂ ಪ್ರಮುಖ ನಾಯಕ (Muslim Leaders)ರಿಗೆ ಕರೆ ನೀಡಿದರು. ಪುಣೆ ಮೂಲದ ಗ್ಲೋಬಲ್​ ಸ್ಟ್ರಾಟೆಜಿಕ್​ ಪಾಲಿಸಿ ಫೌಂಡೇಶನ್​ ಎಂಬ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ಈ ಮಾತುಗಳನ್ನಾಡಿದರು. ಇದರಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು, ನಿವೃತ್ತ ರಕ್ಷಣಾ ಸಿಬ್ಬಂದಿ ಮತ್ತು ಆರ್​ಎಸ್​ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. 

‘ಇಸ್ಲಾಂ ಎಂಬುದು ಭಾರತಕ್ಕೆ ಕಾಲಿಟ್ಟಿದ್ದು, ಆಕ್ರಮಣಕಾರರೊಂದಿಗೆ. ಇದು ಐತಿಹಾಸಿಕವಾದ ಸತ್ಯ ಮತ್ತು ಅದನ್ನು ಹಾಗೇ ಉಲ್ಲೇಖಿಸಬೇಕು ಕೂಡ. ಇನ್ನಾದರೂ  ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರು ಉಗ್ರಗಾಮಿತ್ವ, ಪ್ರತ್ಯೇಕತಾವಾದವನ್ನು ವಿರೋಧಿಸಬೇಕು. ಮತಾಂಧರ ವಿರುದ್ಧ ಕಠಿಣ, ದೃಢ ನಿಲುವು ತೆಗೆದುಕೊಳ್ಳಬೇಕು. ಹಾಗಂತ ಇದು ಒಮ್ಮೆಲೇ ಆಗುವಂಥದ್ದಲ್ಲ. ಇದಕ್ಕೆ ದೀರ್ಘ ಪ್ರಯತ್ನ ಮತ್ತು ಅಪಾರ ತಾಳ್ಮೆ ಬೇಕು. ಹಾಗೇ, ಈ ಪ್ರಯತ್ನ ನಮ್ಮೆಲ್ಲರಿಗೂ ಕಠಿಣ ಪರೀಕ್ಷೆಯಾಗಲಿದೆ. ಆದರೂ ಛಲಬಿಡದೆ ಎಷ್ಟು ಬೇಗ ಕಾರ್ಯ ಪ್ರಾರಂಭ ಮಾಡುತ್ತೇವೆಯೋ ಅಷ್ಟು ಕಡಿಮೆ ಹಾನಿ ಸಮಾಜಕ್ಕೆ ಆಗುತ್ತದೆ’ ಎಂದು ಮೋಹನ್ ಭಾಗವತ್​ ಹೇಳಿದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾಗುತ್ತಿದೆ. ಅದರ ಬೆನ್ನಲ್ಲೇ ಭಾರತದಲ್ಲಿ ಒಂದು ಚರ್ಚೆ ಶುರುವಾಗಿದೆ. ಅದೂ ಕೂಡ ಇಲ್ಲಿನ ಮುಸ್ಲಿಮರಲ್ಲೇ ಹೆಚ್ಚಾಗಿ ನಡೆಯುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶ ಪಡೆದುಕೊಂಡಿದ್ದಕ್ಕೆ ಭಾರತೀಯ ಮುಸ್ಲಿಮರು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ಈ ಚರ್ಚೆಯ ವಿಷಯ. ಆ ವಿಷಯವನ್ನೇ ಮುಖ್ಯವಾಗಿಟ್ಟುಕೊಂಡು ಸಭೆ ನಡೆಸಲಾಗಿತ್ತು. ಅಂದ ಹಾಗೇ, ಸಭೆಯ ಥೀಮ್​..‘ರಾಷ್ಟ್ರ ಮೊದಲು..ಎಲ್ಲಕ್ಕಿಂತಲೂ ರಾಷ್ಟ್ರವೇ ಮೇಲು..(Nation First, Nation Above All)’

‘ನಾವು ಹಿಂದು ಶಬ್ದದ ಅರ್ಥವನ್ನು ತಾಯ್ನಾಡು ಎಂದೇ ಪರಿಗಣಿಸುತ್ತೇವೆ. ಪ್ರಾಚೀನ ಕಾಲದಲ್ಲಿದ್ದ ಸಂಸ್ಕೃತಿಯನ್ನೇ ನಾವು ಅಳವಡಿಸಿಕೊಂಡಿದ್ದೇವೆ. ಹಿಂದು ಪದವು ಪ್ರತಿಯೊಬ್ಬ ವ್ಯಕ್ತಿಯನ್ನು(ಆತನ ಭಾಷೆ, ಸಮುದಾಯ ಅಥವಾ ಧರ್ಮವನ್ನು ಲೆಕ್ಕಿಸದೆ) ಒಳಗೊಂಡಿದೆ. ಪ್ರತಿಯೊಬ್ಬ ಭಾರತೀಯನನ್ನೂ ನಾವು ಹಿಂದುಗಳೆಂದೇ ನೋಡುತ್ತೇವೆ. ಹಾಗಂತ ಇನ್ನೊಬ್ಬರ ನಂಬಿಕೆಯನ್ನು ನಾವು ಅಗೌರವಿಸುವುದಿಲ್ಲ’ ಎಂದು ಹೇಳಿದ ಮೋಹನ್ ಭಾಗವತ್​, ‘ಯೋಚಿಸಬೇಕಾಗಿದ್ದು ಮುಸ್ಲಿಮರ ಪ್ರಾಬಲ್ಯದ ಬಗ್ಗೆಯಲ್ಲ. ಭಾರತದ ಪ್ರಾಬಲ್ಯದ ಬಗ್ಗೆ. ದೇಶದ ಏಳ್ಗೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು’ಎಂದು ತಿಳಿಸಿದರು.

ಇದನ್ನೂ ಓದಿ: ಆಫ್ಘನ್ ಜನ ಬೇರೆ ದೇಶಗಳಿಗೆ ಸುರಕ್ಷಿತವಾಗಿ ಹೋಗಲು ತಾಲಿಬಾನ್ ಕೊಟ್ಟ ಮಾತಿನಂತೆ ಅಡ್ಡಿಪಡಿಸಬಾರದು: ಅಮೇರಿಕ

Virender Sehwag: ಭಾರತದ ಗೆಲುವಿನ ಬೆನ್ನಲ್ಲೇ ಪ್ರಧಾನಿ ಮೋದಿ ಫೋಟೋ ಹಂಚಿಕೊಂಡು ಕಾಲೆಳೆದ ಸೆಹ್ವಾಗ್

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು