ಆಫ್ಘನ್ ಜನ ಬೇರೆ ದೇಶಗಳಿಗೆ ಸುರಕ್ಷಿತವಾಗಿ ಹೋಗಲು ತಾಲಿಬಾನ್ ಕೊಟ್ಟ ಮಾತಿನಂತೆ ಅಡ್ಡಿಪಡಿಸಬಾರದು: ಅಮೇರಿಕ
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಇಡೀ ಅಂತರರಾಷ್ಟ್ರೀಯ ಸಮುದಾಯ ತಾಲಿಬಾನ್ ತನ್ನ ಮಾತು ಉಳಿಸಿಕೊಳ್ಳಲು ಎದುರು ನೋಡುತ್ತಿವೆ ಎಂದು ಬ್ಲಿಂಕನ್ ಹೇಳಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಹ ಅಫ್ಘಾನಿಸ್ತಾನದಿಂದ ವಿದೇಶಿಯರ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದೆ.
ಬೇರೆ ದೇಶಗಳಿಗೆ ವಲಸೆ ಹೋಗಲು ಇಚ್ಛಿಸುವ ಅಫ್ಘಾನಿಸ್ತಾನಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಅಂತ ತಾಲಿಬಾನ್ ವಾಗ್ದಾನ ಮಾಡಿದೆಯೆಂದು ಕತಾರ್ ಅಧಿಕಾರಿಗಳೊಂದಿಗೆ ವಲಸೆ ಹೋಗುವ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಬಗ್ಗೆ ಚರ್ಚೆ ನಡೆಸಿದ ನಂತರ ಆಂಟನಿ ಬ್ಲಿಂಕನ್ ಮಂಗಳವಾರ ಹೇಳಿದರು. ಹಲವಾರು ಅಮೇರಿಕನ್ನರು ಸೇರಿದಂತೆ ಜನರು ಅಫ್ಘಾನಿಸ್ತಾನದಿಂದ ಆಚೆ ಬರುವ ಅವಕಾಶವನ್ನು ತಾಲಿಬಾನ್ ಕಳೆದ ಒಂದು ವಾರದಿಂದ ಕಲ್ಪಿಸದಿರುವ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ.
ಸೂಕ್ತವಾದ ಡಾಕ್ಯುಮೆಂಟ್ ಉಳ್ಳವರಿಗೆ ಅಫ್ಘಾನಿಸ್ತಾನದಿಂದ ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಡುವುದಾಗಿ ತಾಲಿಬಾನ್ ಅಮೇರಿಕಾಗೆ ಹೇಳಿದೆ ಎಂದು ಬ್ಲಿಂಕನ್ ದೋಹಾದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಹೇಳಿದರು. ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಮಂಗಳವಾರ ಕತಾರಿನ ವಿದೇಶಾಂಗೆ ಮತ್ತು ರಕ್ಷಣಾ ಸಚಿವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತಾಡಿದರು.
‘ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ನಾವು ತಾಲಿಬಾನ್ ನಾಯಕರಿಗೆ ಹೇಳಿದ್ದೇವೆ,’ ಎಂದು ಬ್ಲಿಂಕನ್ ಹೇಳಿದರು.
ಅಮೇರಿಕ ಮತ್ತು ಅದರ ಮಿತ್ರಕೂಟದ ಸೇನೆಗಳು ಅವಸರದಲ್ಲಿ ಅಫ್ಘಾನಿಸ್ತಾನವನ್ನು ಆಗಸ್ಟ್ನಲ್ಲಿ ತೆರವುಗೊಳಿಸಿದ ನಂತರ ಕಾಬೂಲ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಆಮೇರಿಕಾಗೆ ಹೇಳಿರುವ ಕತಾರ್, ಆದಷ್ಟು ಬೇಗ ವಿಮಾನ ನಿಲ್ದಾಣ ಕಾರ್ಯಾರಂಭಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಅಂತ ತಿಳಿಸಿದೆ. ಹಾಗಾದಲ್ಲಿ ಅಫ್ಘಾನಿಸ್ತಾನವನ್ನು ತೊರೆಯುವ ಉದ್ದೇಶ ಹೊಂದಿರುವ ಜನಕ್ಕೆ ಪ್ರಯಾಣ ಬೆಳಸಲು ಸುಲಭವಾಗಲಿದೆ ಎಂದು ಕತಾರ್ ಸಚಿವರು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಇಡೀ ಅಂತರರಾಷ್ಟ್ರೀಯ ಸಮುದಾಯ ತಾಲಿಬಾನ್ ತನ್ನ ಮಾತು ಉಳಿಸಿಕೊಳ್ಳಲು ಎದುರು ನೋಡುತ್ತಿವೆ ಎಂದು ಬ್ಲಿಂಕನ್ ಹೇಳಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಹ ಅಫ್ಘಾನಿಸ್ತಾನದಿಂದ ವಿದೇಶಿಯರ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದೆ.
ಸೋಮವಾರದಂದು ದೋಹಾ ತಲುಪಿದ ನಂತರ ಕತಾರ್ನ ಸುಲ್ತಾನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಬಿನ್ ಅಲ್-ಥನಿ ಅವರು ಆಯೋಜಿಸಿದ ಡಿನ್ನರ್ ನಲ್ಲಿ ಭಾಗವಹಿಸಿದ ಅಮೇರಿಕ ಸರ್ಕಾರದ ಪ್ರತಿನಿಧಿಗಳಿ, ಜನರು ಮತ್ತು ಸೇನೆಗಳನ್ನು ಕಾಬೂಲ್ ನಿಂದ ಏರ್ಲಿಫ್ಟ್ ಮಾಡಲು ಸಹಾಯ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಕಾಲ ನೆಲೆಗೊಂಡಿದ್ದ ಸುಮಾರು 1.20 ಸೈನಿಕರು ಮತ್ತು ಇತರ ವಿದೇಶಿಯರನ್ನು ಅಫ್ಘಾನಿಸ್ತಾನದಿಂದ ಹೊರಗೆ ಸಾಗಿಸುವ ಕಾರ್ಯದಲ್ಲಿ ಕತಾರ್ ಅಕ್ಷರಶಃ ಸಾರಿಗೆ ಕೇಂದ್ರವಾಗಿ ಮಾರ್ಪಟ್ಟಿತ್ತು.
ಕತಾರ್ ರಾಜಧಾನಿ ದೋಹಾ, ತಾಲಿಬಾನ್ನ ಅಂತರರಾಷ್ಟ್ರೀಯ ರಾಜತಾಂತ್ರಿಕ ನೆಲೆಯಾಗಿದೆ. ಆದರೆ, ತಾಲಬಾನಿ ಪ್ರತಿನಿಧಿಗಳನ್ನು ಭೇಟಿ ಮಾಡುವ ಇಚ್ಛೆಯನ್ನು ಬ್ಲಿಂಕನ್ ಇಷ್ಟಪಡಲಿಲ್ಲ. ಆದರೆ, ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಹೇಗೆ ಸರ್ಕಾರ ನಡೆಸಲಿದ್ದಾರೆ ಅನ್ನವುದನ್ನು ವಾಷಿಂಗ್ಟನ್ ಗಮನಿಸಲಿದೆ ಎಂದು ಅವರು ಹೇಳಿದರು.
ಅಫ್ಘಾನಿಸ್ತಾನದಿಂದ ಸೇನೆಯನ್ನು ವಾಪಸ್ಸು ಕರೆಸಿಕೊಂಡ ನಂತರ ಮೊದಲ ಬಾರಿಗೆ ಅ ದೇಶದಿಂದ ಹೊರಬಂದ ಒಂದೇ ಕುಟುಂಬದ ನಾಲ್ವರನ್ನು ಅಮೇರಿಕ ಸೋಮವಾರ ಸನ್ಮಾನಿಸಿತು. ಅವರನ್ನು ಅಲ್ಲಿಂದ ಪಾರು ಮಾಡುವ ಕಾರ್ಯಾಚರಣೆ ಬಗ್ಗೆ ತಾಲಿಬಾನಿಗಳಿಗೆ ಅರಿವಿದ್ದುದ್ದರಿಂದ ಅವರು ಹಸ್ತಕ್ಷೇಪ ಮಾಡುವ ಗೊಡವೆಗೆ ಹೋಗಲಿಲ್ಲ ಎಂದು ಯುಎಸ್ ವಿದೇಶಾಂಗ ಕಾರ್ಯಾಲಯ ತಿಳಿಸಿದೆ.
ಅದರೆ ನಂಬಲರ್ಹ ಮೂಲಗಳ ಪ್ರಕಾರ ಅಮೆರಿಕದ ನಾಗರಿಕರು ಮತ್ತು ಯುವತಿಯರು ಸೇರಿದಂತೆ 600 ರಿಂದ 1,300 ರಷ್ಟು ಜನ ಅಫ್ಘಾನಿಸ್ತಾನದ ಉತ್ತರಕ್ಕಿರುವ ಮಜರ್-ಎ ಶಹರ್ ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಹೇಳಲಾಗಿದೆ.
ಇದನ್ನೂ ಓದಿ: ಪಂಜಶಿರ್ ಹೋರಾಟ ಪಡೆಯ ವಕ್ತಾರ ಫಾಹಿಮ್ ದಷ್ಟಿ ಸಾವು; ಮೂವರು ಪ್ರಮುಖ ನಾಯಕರನ್ನು ಕೊಂದ ತಾಲಿಬಾನ್