AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಿಂದ ತರಬೇತಿ ಪಡೆದ ಅಫ್ಘಾನ್ ಸೈನಿಕರನ್ನು ಕೆಲಸಕ್ಕೆ ಕರೆದ ತಾಲಿಬಾನ್

ನಮ್ಮ ವಿರುದ್ಧ ಯಾರೇ ಶಸ್ತ್ರ ಝಳಪಿಸಿದರೂ ಅಂಥವರನ್ನು ನಾವು ನಮ್ಮ ವಿರೋಧಿಗಳು ಎಂದೇ ಪರಿಗಣಿಸುತ್ತೇವೆ. ಅದಕ್ಕೆ ತಕ್ಕಂತೆ ದಂಡಿಸುತ್ತೇವೆ ಎಂದು ತಾಲಿಬಾನ್ ಎಚ್ಚರಿಸಿದೆ.

ಅಮೆರಿಕದಿಂದ ತರಬೇತಿ ಪಡೆದ ಅಫ್ಘಾನ್ ಸೈನಿಕರನ್ನು ಕೆಲಸಕ್ಕೆ ಕರೆದ ತಾಲಿಬಾನ್
ಜಬೀವುಲ್ಲಾ ಮುಜಾಹಿದ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 06, 2021 | 6:08 PM

Share

ಕಾಬೂಲ್: ಈ ಹಿಂದೆ ಅಫ್ಘಾನ್ ಸರ್ಕಾರದ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದ, ಅಮೆರಿಕ ಸೇನೆಯಿಂದ ತರಬೇತಿ ಪಡೆದಿರುವ ಸೈನಿಕರನ್ನು ತಾಲಿಬಾನ್ ಕೆಲಸಕ್ಕೆ ಕರೆದಿದೆ. ‘ಕಳೆದ 20 ವರ್ಷಗಳಿಂದ ತರಬೇತಿ ಪಡೆದಿರುವ ಅಫ್ಘಾನಿ ಯೋಧರು ತಾಲಿಬಾನ್ ಹೋರಾಟಗಾರರೊಂದಿಗೆ ಕರ್ತವ್ಯ ನಿರ್ವಹಿಸಬಹುದಾಗಿದೆ’ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪಂಜ್​ಶಿರ್ ಕಣಿವೆಯಲ್ಲಿ ಪ್ರತಿರೋಧವನ್ನು ಹತ್ತಿಕ್ಕಲಾಗಿದೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ಆಡಳಿತದ ವಿರುದ್ಧ ಯಾರೇ ದನಿಎತ್ತಿದರೂ ಹತ್ತಿಕ್ಕಲಾಗುವುದು. ಅಂಥವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು. ‘ಅಫ್ಘಾನಿಸ್ತಾನದೊಳಗೆ ಹಿಂಸಾಚಾರ ನಡೆಸುವವರನ್ನು ಇಸ್ಲಾಮಿಕ್ ಎಮಿರೇಟ್ ಉಗ್ರವಾಗಿ ಶಿಕ್ಷಿಸುತ್ತದೆ. ಮತ್ತೊಮ್ಮೆ ಇಂಥ ಕೃತ್ಯಗಳು ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಅವರು ಎಚ್ಚರಿಸಿದರು.

ನಮ್ಮ ವಿರುದ್ಧ ಯಾರೇ ಶಸ್ತ್ರ ಝಳಪಿಸಿದರೂ ಅಂಥವರನ್ನು ನಾವು ನಮ್ಮ ವಿರೋಧಿಗಳು ಎಂದೇ ಪರಿಗಣಿಸುತ್ತೇವೆ. ಅದಕ್ಕೆ ತಕ್ಕಂತೆ ದಂಡಿಸುತ್ತೇವೆ. ಅಫ್ಘಾನಿಸ್ತಾನದಲ್ಲಿ ಈಗ ಸಂಘರ್ಷ ಮುಗಿದಿದೆ. ಶೂನ್ಯದಿಂದ ಹೊಸ ದೇಶ ಕಟ್ಟಲು ನಾವು ಪ್ರಯತ್ನಿಸುತ್ತಿದ್ದೇವೆ. ಆತ್ಮಾವಲೋಕನಕ್ಕೆ ಹಾಗೂ ದೇಶಕಟ್ಟುವ ಕೆಲಸಕ್ಕೆ ಇದು ಸಕಾಲ. ಜನರು ನಮ್ಮ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದು ಕೋರುತ್ತೇವೆ ಎಂದರು.

ಕಾಬೂಲ್ ವಶಪಡಿಸಿಕೊಂಡು ಮೂರು ವಾರಗಳಾದರೂ ದೇಶದಲ್ಲಿನ್ನೂ ಸರ್ಕಾರ ರಚನೆಯಾಗದಿರುವ ಬಗ್ಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಧ್ಯಂತರ ವ್ಯವಸ್ಥೆಯೊಂದು ದೇಶದಲ್ಲಿ ಜಾರಿಗೆ ಬಂದಿದೆ. ಇದನ್ನು ಸೂಕ್ತರೀತಿಯಲ್ಲಿ ಮಾರ್ಪಡಿಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದ ಸರ್ಕಾರವೊಂದನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ಹೇಳಿದರು.

ಅಂತಿಮ ನಿರ್ಧಾರವನ್ನು ಈಗಾಗಲೇ ತೆಗೆದುಕೊಂಡಿದ್ದೇವೆ. ತಾಂತ್ರಿಕ ಸವಾಲುಗಳನ್ನು ಎದುರಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ತಕ್ಷಣ ಹೊಸ ಸರ್ಕಾರವನ್ನು ಘೋಷಿಸುತ್ತೇವೆ ಎಂದು ಹೇಳಿದರು. ಕಾಬೂಲ್ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆ ಸ್ಥಿತಿಗೆ ತರಲು ತಾಲಿಬಾನ್ ಆಡಳಿತವು ಕತಾರ್ ನೆರವು ಕೋರಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕತಾರ್, ಟರ್ಕಿ ಮತ್ತು ಯುಎಇಗಳಿಂದ ತಾಂತ್ರಿಕ ಪರಿಣಿತರು ಇಲ್ಲಿಗೆ ಬಂದಿದ್ದು, ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ವಿಮಾನಗಳು ಶೀಘ್ರ ಹಾರಾಟ ಆರಂಭಿಸಲಿವೆ ಎಂದು ತಿಳಿಸಿದರು. ಆಗಸ್ಟ್​ 15ರಂದು ಕಾಬೂಲ್ ಗೆದ್ದ ನಂತರ ಇಡೀ ದೇಶವು ತಾಲಿಬಾನ್ ವಶಕ್ಕೆ ಬಂದಿತ್ತು. ಈ ಹಿಂದೆ 1996ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ದ ತಾಲಿಬಾನ್ ಕ್ರೌರ್ಯದಿಂದ ಕುಖ್ಯಾತವಾಗಿತ್ತು. ಈ ಬಾರಿಯೂ ಅದೇ ಮಾದರಿಯ ಆಡಳಿತ ನೀಡಬಹುದು ಎಂದು ವಿಶ್ವದ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದ್ದವು. ತಮ್ಮ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆ ಸ್ಥಗಿತಗಳಿಸಿ, ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ವದೇಶಗಳಿಗೆ ವಾಪಸ್ ಕರೆಸಿಕೊಂಡಿದ್ದವು.

ನಾವು ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಲು ಹಕ್ಕು ಹೊಂದಿದ್ದೇವೆ. ನಮ್ಮ ಆಡಳಿತಕ್ಕೆ ಜಗತ್ತು ಮಾನ್ಯತೆ ನೀಡಬೇಕು. ವಿವಿಧ ದೇಶಗಳು ತಮ್ಮ ರಾಯಭಾರ ಕಚೇರಿಗಳನ್ನು ಕಾಬೂಲ್​ನಲ್ಲಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

(Taliban Ask America trained Afghanistan soldiers to work along fighters)

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಅಫ್ಘಾನಿಸ್ತಾನ್ ಕಿರಿಯರ ತಂಡವನ್ನು ಕಳಿಸಿದ ತಾಲಿಬಾನ್

ಇದನ್ನೂ ಓದಿ: ಅಫ್ಘಾನ್​​ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯ ಅಂತಿಮ ಹಂತ; ಪಾಕಿಸ್ತಾನ, ಚೀನಾ, ರಷ್ಯಾಕ್ಕೆ ತಾಲಿಬಾನಿಗಳಿಂದ ಆಹ್ವಾನ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!