ಬಾಂಗ್ಲಾ ಸರಣಿಗೆ ಅಫ್ಘಾನಿಸ್ತಾನ್ ಕಿರಿಯರ ತಂಡವನ್ನು ಕಳಿಸಿದ ತಾಲಿಬಾನ್
ಅಫ್ಘಾನ್-ಬಾಂಗ್ಲಾ ಅಂಡರ್ 19 ಸರಣಿ ಸೆಪ್ಟೆಂಬರ್ 10 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಐದು ಏಕದಿನ ಪಂದ್ಯಗಳನ್ನು ಹಾಗೂ ನಾಲ್ಕು ದಿನದ 1 ಪಂದ್ಯವನ್ನು ಆಡಲಿದೆ.
ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ (Taliban) ವಶಪಡಿಸಿಕೊಂಡ ಬಳಿಕ ಕೇಳಿ ಅಫ್ಘಾನ್ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿತ್ತು. ಮನರಂಜನೆ, ಮಹಿಳಾ ಸ್ವಾತಂತ್ರ್ಯಗಳಿಗೆ ನಿರ್ಬಂಧ ಹೇರಿದ್ದ ತಾಲಿಬಾನಿಗಳು ಕ್ರಿಕೆಟ್ ಆಡಲು ಅವಕಾಶ ನೀಡುವುದು ಕೂಡ ಅನುಮಾನ ಎನ್ನಲಾಗಿತ್ತು. ಆದರೆ ಇದೀಗ ಕ್ರಿಕೆಟ್ ಆಡಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ತಾಲಿಬಾನಿಗಳು ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ನಿಗದಿಯಾಗಿರುವ ಸರಣಿಯನ್ನೂ ಕೂಡ ಅಫ್ಘಾನಿಸ್ತಾನ್ ಆಡಲಿದೆ ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನ್ ಅಂಡರ್ 19 ತಂಡವನ್ನು ತಾಲಿಬಾನಿಗಳು ಬಾಂಗ್ಲಾದೇಶದ (Bangladesh) ವಿರುದ್ದದ ಸರಣಿಗೆ ಕಳುಹಿಸಿಕೊಟ್ಟಿದೆ. ಅಫ್ಘಾನಿಸ್ತಾನ್ ತಾಲಿಬಾನಿಗಳ ವಶವಾದ ಬಳಿಕ ಇದು ಅಫ್ಘಾನ್ ಕ್ರಿಕೆಟ್ನ ಮೊದಲ ವಿದೇಶಿ ಪ್ರವಾಸ ಎಂಬುದು ವಿಶೇಷ. ಇದರೊಂದಿಗೆ ಮುಂದಿನ ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡ ಭಾಗವಹಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಈ ಹಿಂದೆ ನಿಗದಿಪಡಿಸಿದಂತೆ ಅಂಡರ್ 19 ಸರಣಿ ನಡೆಯುತ್ತಿದ್ದು, ಇದಕ್ಕಾಗಿಅಫ್ಘಾನಿಸ್ತಾನ್ ತಂಡದ 8 ಆಟಗಾರರು ಢಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಅರೆ. ಇನ್ನು ಉಳಿದ ಆಟಗಾರರು ಇತರೆ ಎರಡು ಗುಂಪುಗಳಾಗಿ ಆಗಮಿಸಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಕ್ತಾಯ ರಬೀದ್ ಇಮಾಮ್ ತಿಳಿಸಿದ್ದಾರೆ.
ಅಫ್ಘಾನ್-ಬಾಂಗ್ಲಾ ಅಂಡರ್ 19 ಸರಣಿ ಸೆಪ್ಟೆಂಬರ್ 10 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಐದು ಏಕದಿನ ಪಂದ್ಯಗಳನ್ನು ಹಾಗೂ ನಾಲ್ಕು ದಿನದ 1 ಪಂದ್ಯವನ್ನು ಆಡಲಿದೆ. ಎಲ್ಲಾ ಪಂದ್ಯಗಳು ಸಿಲ್ಹೆಟ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 10 ರಿಂದ 25 ರವರೆಗೆ ಸರಣಿ ಜರುಗಲಿದೆ.
ಈ ಸರಣಿಯೊಂದಿಗೆ ಮತ್ತೆ ಅಫ್ಘಾನಿಸ್ತಾನ್ ಕ್ರಿಕೆಟ್ಗೆ ಚಾಲನೆ ನೀಡಲು ತಾಲಿಬಾನಿಗಳು ನಿರ್ಧರಿಸಿದ್ದಾರೆ. ಇದಾಗ್ಯೂ ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡದ ಆಯ್ಕೆ ಬಗ್ಗೆ ಇನ್ನೂ ಕೂಡ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧಾರ ತೆಗೆದುಕೊಂಡಿಲ್ಲ. ಸೆಪ್ಟೆಂಬರ್ 10 ರೊಳಗೆ ಟಿ20 ವಿಶ್ವಕಪ್ಗೆ ತಂಡವನ್ನು ಪ್ರಕಟಿಸಬೇಕಿದ್ದು, ಹೀಗಾಗಿ ಚುಟುಕು ಕದನದಲ್ಲಿ ಅಫ್ಘಾನಿಸ್ತಾನದ ಭಾಗವಹಿಸುವಿಕೆ ಈ ವಾರದೊಳಗೆ ಸ್ಪಷ್ಟವಾಗಲಿದೆ.
ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್
ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ
ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
(First Afghan Cricket Team In Taliban Era Arrives In Bangladesh)