ಪಂಜಶಿರ್​ ಹೋರಾಟ ಪಡೆಯ ವಕ್ತಾರ ಫಾಹಿಮ್​ ದಷ್ಟಿ ಸಾವು; ಮೂವರು ಪ್ರಮುಖ ನಾಯಕರನ್ನು ಕೊಂದ ತಾಲಿಬಾನ್​

Fahim Dashti: ಫಾಹಿಮ್​ ದಷ್ಟಿ ಪಂಜಶಿರ್​ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು. ವಕ್ತಾರರಾಗಿದ್ದ ಅವರು, ತಮ್ಮ ಸಂಘಟನೆಯ ನಿಲುವಿನ ಬಗ್ಗೆ ಆಗಾಗ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು.

ಪಂಜಶಿರ್​ ಹೋರಾಟ ಪಡೆಯ ವಕ್ತಾರ ಫಾಹಿಮ್​ ದಷ್ಟಿ ಸಾವು; ಮೂವರು ಪ್ರಮುಖ ನಾಯಕರನ್ನು ಕೊಂದ ತಾಲಿಬಾನ್​
ಫಾಹಿಮ್​ ದಷ್ಟಿ

ಪಂಜಶಿರ್ (PanjShir)​ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್ ಆಫ್​ ಅಫ್ಘಾನಿಸ್ತಾನ ಪಡೆಯ ವಕ್ತಾರ ಫಾಹಿಮ್​ ದಷ್ಟಿ (Fahim Dashti) ತಾಲಿಬಾನ್​ ಉಗ್ರರ (Taliban Terrorists) ದಾಳಿಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆ್ಯಂಟಿ-ತಾಲಿಬಾನ್​ ಹೋರಾಟ ಪಡೆಯ  ಫಾಹಿಮ್ ದಷ್ಟಿ ಸೇರಿ ಒಟ್ಟು ಮೂವರು ಪ್ರಮುಖ ನಾಯಕರು ಅಸುನೀಗಿದ್ದರಿಂದಲೇ ಇದೀಗ ಎನ್​ಆರ್​ಎಫ್​ಎ ಪಡೆ ಕದನ ವಿರಾಮಕ್ಕೆ ಕರೆ ನೀಡಿದೆ ಎಂದು ಹೇಳಲಾಗಿದೆ.  ಈ ಬಗ್ಗೆ National Resistance Front of Afghanistan ಸಂಘಟನೆ ಫೇಸ್​ಬುಕ್​ ಪೋಸ್ಟ್ (Facebook Post) ಹಾಕಿದ್ದು, ನಾವು ನಮ್ಮ ಇಬ್ಬರು ನೆಚ್ಚಿನ ಸಹೋದರರು, ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ತುಂಬ ನೋವಾಗುತ್ತಿದೆ. ಅಮಿರ್​ ಸಾಹೇಬ್​ ಅಹ್ಮದ್​ ಮಸೂದ್​ ಅವರ ಕಚೇರಿಯ ವಕ್ತಾರನಾಗಿದ್ದ ಫಾಹಿಮ್​ ದಷ್ಟಿ ಮತ್ತು ಜನರಲ್​ ಸಾಹಿಬ್ ಅಬ್ದುಲ್​ ವಡೂದ್​ ಝೋರ್​ ಅವರು ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.

ಅಫ್ಘಾನಿಸ್ತಾನ ಪತ್ರಕರ್ತ ಫ್ರೆಡ್ ಬೆಜಾನ್​ ಕೂಡ ಫಾಹಿಮ್​ ದಷ್ಟಿ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.  ತಾಲಿಬಾನಿಗಳ ದಾಳಿಗೆ ಪಂಜಶಿರ್​ ಹೋರಾಟ ಪಡೆಯ ವಕ್ತಾರ ಫಾಹಿಮ್​ ದಷ್ಟಿ ಸೇರಿ ಮೂವರು ಪ್ರಮುಖ ನಾಯಕರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇದು ಪಂಜಶಿರ್​ ಪ್ರತಿರೋದಕ ಪಡೆಗೆ ದೊಡ್ಡ ಹೊಡೆತ ಎಂದು ಹೇಳಿದ್ದಾರೆ.

ಫಾಹಿಮ್​ ದಷ್ಟಿ ಪಂಜಶಿರ್​ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು. ವಕ್ತಾರರಾಗಿದ್ದ ಅವರು, ತಮ್ಮ ಸಂಘಟನೆಯ ನಿಲುವಿನ ಬಗ್ಗೆ ಆಗಾಗ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು. ಕಳೆದ ತಿಂಗಳು ಮಾತನಾಡಿದಾಗ, ನಾವು ಪಂಜಶಿರ್ ಹೋರಾಟವನ್ನು ಮುಂದುವರಿಸುತ್ತೇವೆ. ಆ ಹೋರಾಟ ಪಂಜಶಿರ್​ ಪ್ರಾಂತ್ಯಕ್ಕಷ್ಟೇ ಸೀಮಿತವಲ್ಲ. ಇಡೀ ಅಫ್ಘಾನಿಸ್ತಾನಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದರು. ನಿನ್ನೆ ಟ್ವೀಟ್ ಮಾಡಿದ್ದ ಫಾಹಿಮ್​ ದಷ್ಟಿ, ನಾವು ತಾಲಿಬಾನಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. 600ಕ್ಕೂ ಹೆಚ್ಚು ಉಗ್ರರನ್ನು ಕೊಂದಿದ್ದೇವೆ. ಸುಮಾರು 100 ಉಗ್ರರು ನಮ್ಮ ಸೆರೆಯಲ್ಲಿ ಇದ್ದಾರೆ ಎಂದು ಹೇಳಿದ್ದರು.

ಸಾಲೇಹ್​ ಮೊಹಮ್ಮದ್​ ಕೂಡ ಸಾವು !
ಫಾಹಿಮ್​ ದಷ್ಟಿ ಮೃತಪಟ್ಟಿದ್ದಾಗ ನ್ಯಾಷನಲ್​ ರೆಸಿಸ್ಟೆನ್ಸ್ ಫ್ರಂಟ್ ಆಫ್​ ಅಫ್ಘಾನಿಸ್ತಾನ ಪಡೆ ಹೇಳಿದೆ. ಹಾಗೇ, ಎನ್​ಆರ್​ಎಫ್​ಎ ಪಡೆಯ ಇನ್ನೊಬ್ಬ ಮುಖ್ಯ ಕಮಾಂಡರ್​ ಸಾಲೇಹ್​ ಮೊಹಮ್ಮದ್​​ರನ್ನು ಕೂಡ ಕೊಂದಿದ್ದಾಗಿ ತಾಲಿಬಾನ್​ ಹೇಳಿಕೊಂಡಿದೆ.  ಇವರೂ ಕೂಡ ಪ್ರಮುಖ ನಾಯಕರೇ ಆಗಿದ್ದು, ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದರು. ಪ್ರಮುಖ ನಾಯಕರನ್ನೆಲ್ಲ ಕಳೆದುಕೊಂಡ ಪಂಜಶಿರ್​ ಪಡೆ ಇದೀಗ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು

ಬೇಬಿ ಕಾರ್ನ್ ಕ್ರಿಸ್ಪಿ ಡ್ರೈ; ಮನೆಯಲ್ಲೇ ಸರಳವಾಗಿ ತಯಾರಿಸಬಹುದು

(Fahim Dashti spokesperson of Ahmad Massouds resistance front killed By Taliban)

Click on your DTH Provider to Add TV9 Kannada