ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆರ್ಎಸ್ಎಸ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
70 ವರ್ಷ ವಯಸ್ಸಿನ ಮೋಹನ್ ಭಾಗವತ್ರಿಗೆ ಕೊರೊನಾ ವೈರಸ್ನ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಟ್ವೀಟ್ ಮಾಡಿದೆ. ಪ್ರಸ್ತುತ ಕೊರೊನಾ ಸೋಂಕಿನ ಸಾಮಾನ್ಯ ರೋಗ ಲಕ್ಷಣಗಳು ಭಾಗವತ್ರಲ್ಲಿ ಕಂಡು ಬಂದಿದ್ದು ನಾಗ್ಪುರದ ಕಿಂಗ್ಸ್ ವೇ (Kingsway) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರ್ಎಸ್ಎಸ್ ಟ್ವೀಟ್ ಮಾಡಿದೆ.
राष्ट्रीय स्वयंसेवक संघ के परमपूजनीय सरसंघचालक डॉ. मोहनजी भागवत आज दोपहर कोरोना पॉज़ीटिव हुये है। अभी उन्हें कोरोना के सामान्य लक्षण हैं तथा वे सामान्य जाँच और सावधानी के नाते नागपुर के किंग्ज़वे अस्पताल में भर्ती हुए हैं।
— RSS (@RSSorg) April 9, 2021
ಇನ್ನು ಮೋಹನ್ ಭಾಗವತ್ ಮಾರ್ಚ್ 07ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು.
(RSS Chief Mohan Bhagwat Tests Positive For Coronavirus and Admitted to Nagpur Hospital)