Prashant Kishor: ಬಿಜೆಪಿ ಗೆಲುವಿನ ಸುಳಿವು ಕೊಟ್ಟಿರುವ ಟಿಎಮ್ಸಿ ಸಲಹೆಗಾರ ಪ್ರಶಾಂತ್ ಕಿಶೋರ್
West Bengal Assembly Elections 2021: ಟಿಎಮ್ಸಿ ಸಲಹೆಗಾರ ಪ್ರಶಾಂತ್ ಕಿಶೋರ್, ತಮ್ಮ ಅಂತರಿಕ ಆನ್ಲೈನ್ ಮೀಟಿಂಗ್ನಲ್ಲಿ, ಬಿಜೆಪಿಗೆ ಬೆಂಬಲ ಸಿಗುವ ಲಕ್ಷಣ ಕಾಣುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಹೊರಗೆಡವಿದ ಬೆನ್ನಲ್ಲೇ ಕಿಶೋರ್ ಕೂಡ ಪ್ರತಿಕ್ರಿಯಿಸಿದ್ದಾರೆ. ನಮ್ಮ ಕ್ಲಬ್ಹೌಸ್ ಮಾತುಕತೆಯನ್ನು ಇಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದು ಖುಷಿಯ ಸಂಗತಿ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ ಎಂದು ಪರಿಗಣಿಸಲಾಗಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವ ನಡುವಲ್ಲೇ ಟಿಎಂಸಿ ಪಕ್ಷದ ಚುನಾವಣಾ ಪ್ರಚಾರದ ಸಲಹೆಗಾರ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ ಎನ್ನಲಾದ ಧ್ವನಿ ಮುದ್ರಿಕೆ ಹೊರಬಿದ್ದಿದ್ದು, ಅದರಲ್ಲಿ ಬಿಜೆಪಿಗೆ ಗೆಲುವು ಲಭಿಸುವ ಬಗ್ಗೆ ಮಾತುಕತೆ ನಡೆದಿದೆ. ಬಿಜೆಪಿಯ ಬಲದ ಬಗ್ಗೆ ಟಿಎಂಸಿಗೆ ಈಗ ಅರಿವಾಗಿದೆ ಎಂದು ಬಿಜೆಪಿಯ ಅಮಿತ್ ಮಾಳವಿಯಾ ಸರಣಿ ಟ್ವೀಟ್ ಮಾಡಿದ್ದಾರೆ ಹಾಗೂ ಅದಕ್ಕೆ ಸ್ವತಃ ಪ್ರಶಾಂತ್ ಕಿಶೋರ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅಮಿತ್ ಮಾಳವಿಯಾ, ಟಿಎಂಸಿಯ ಆಂತರಿಕ ಸರ್ವೇ ಕೂಡ ಬಿಜೆಪಿಗೆ ಬಹುಮತ ಬರುವ ಬಗ್ಗೆ ಅಭಿಪ್ರಾಯ ಹೊರಹಾಕಿದೆ ಎಂದು ಗೊತ್ತಾಗಿದೆ. ಇಲ್ಲಿನ ಮತಗಳು ಮೋದಿಗೆ ಬರಲಿದೆ. ಪಶ್ಚಿಮ ಬಂಗಾಳದ ಎಸ್ಸಿ ಸಮುದಾಯ ಸಹ ಬಿಜೆಪಿಗೆ ಮತ ಹಾಕುತ್ತಿದೆ ಎಂದು ಹೇಳಿದ್ದಾರೆ. ಟಿಎಂಸಿ ಹಾಗೂ ಮಮತಾ 20 ವರ್ಷಗಳಿಂದ ಮುಸ್ಲಿಂ ಸಮುದಾಯಕ್ಕೆ ಏನು ಮಾಡಿದ್ದಾರೋ ಅದರ ಪ್ರತಿಫಲ ಈ ಬಾರಿ ಚುನಾವಣಾ ಫಲಿತಾಂಶದಲ್ಲಿ ಕಾಣಲಿದೆ. ಮೋದಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಬೇಡ. ಆಡಳಿತರೂಢ ಟಿಎಂಸಿ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇಲ್ಲಿವರೆಗೆ ಜಾತೀ ಆಧಾರಿತ ಚುನಾವಣೆ ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರಲಿಲ್ಲ. ಹಾಗಂತ, ಮೊದಲು ಆಳಿದ ಕಮ್ಯುನಿಸ್ಟ್ರು ಮತ್ತು ಆ ನಂತರ ಬಂದ ತೃಣ ಮೂಲ ಕಾಂಗ್ರೆಸ್ ಬಹಳ ಪ್ರಬುದ್ಧತೆ ತೋರಿಸಿದ್ದರು ಎಂಬ ಅರ್ಥ ಅಲ್ಲ. ಈ ಎರಡು ಪಕ್ಷಗಳ ಮೇಲೆ ಮುಸ್ಲಿಮ್ ತುಷ್ಟೀಕರಣದ ಆರೋಪ ಇದೆ. ಒಮ್ಮೆ ಈಗ ಚರ್ಚೆ ಆಗಿರುವಂತೆ ಏನಾದರೂ ಬಿಜೆಪಿ ಮುನ್ನಡೆದರೆ, ಪ್ರಾಯಶಃ ಮುಸ್ಲಮ್ ತುಷ್ಟೀಕರಣಕ್ಕೆ ತೆತ್ತ ಬೆಲೆ ಇದಾಗುತ್ತದೆ.
In a public chat on Club House, Mamata Banerjee’s election strategist concedes that even in TMC’s internal surveys, BJP is winning.
The vote is for Modi, polarisation is a reality, the SCs (27% of WB’s population), Matuas are all voting for the BJP!
BJP has cadre on ground. pic.twitter.com/3ToYuvWfRm
— Amit Malviya (@amitmalviya) April 10, 2021
ಎಸ್ಸಿ ಸಮುದಾಯದ ಮತಗಳೇ ಬಿಜೆಪಿಗೆ ಲಾಭ ತಂದುಕೊಡಲಿವೆ ಎಂದು ಟಿಎಂಸಿ ಪಕ್ಷದ ಚುನಾವಣಾ ಪ್ರಚಾರದ ಸಲಹೆಗಾರರೇ ಹೇಳುತ್ತಿದ್ದಾರೆ. ಅವರಿಗೆ ತಾವು ಸಾರ್ವಜನಿಕವಾಗಿ ಈ ಗುಟ್ಟುಗಳನ್ನು ಹಂಚಿಕೊಳ್ಳುತ್ತಿದ್ದೇವೆಂದು ಅರಿವು ಇದ್ದಿರಲಿಕ್ಕಿಲ್ಲ. ಈಗ ಅವರ ಗುಟ್ಟು ಬಯಲಾಗಿದೆ ಎಂದು ಕಾಲೆಳೆದಿದ್ದಾರೆ.
Another candid admission by Mamata Banerjee’s election strategist – all that the Left, Congress and TMC ecosystem have done in the last 20 years is Muslim appeasement.
Implication? It has resulted to resentment on ground. The speakers had not realised that the chat was public! pic.twitter.com/2kyLsQXYyi
— Amit Malviya (@amitmalviya) April 10, 2021
Modi is hugely popular in Bengal and there is no doubt about it. There is a cult around him across the country.
There is anti-incumbency against TMC, polarisation is a reality, SC votes is a factor plus BJP’s election machinery, says Mamata Banerjee’s strategist in an open chat. pic.twitter.com/Vrl8vl231b
— Amit Malviya (@amitmalviya) April 10, 2021
Is it open?
That moment when Mamata Banerjee’s strategiest realised that the Club House room was open and his admissions were being heard by the public at large and not just a handful of Lutyens journalist.
Deafening silence followed…
TMC’s election was just thrown away! pic.twitter.com/2XJ4RWbv3K
— Amit Malviya (@amitmalviya) April 10, 2021
ಬಿಜೆಪಿ ಅವರ ನಾಯಕರ ಮಾತಿಗಿಂತಲೂ ನಮ್ಮ ಚಾ್ಟ್ ಬಗ್ಗೆ ಗಂಭೀರವಾಗಿದೆ ಇದಕ್ಕೆ ಪ್ರತ್ಯುತ್ತರಿಸಿರುವ ಪ್ರಶಾಂತ್ ಕಿಶೋರ್, ಬಿಜೆಪಿ ನಮ್ಮ ಕ್ಲಬ್ಹೌಸ್ ಮಾತುಕತೆಯನ್ನು ಇಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದು ಖುಷಿಯ ಸಂಗತಿ. ಅವರು ತಮ್ಮ ನಾಯಕರ ಮಾತಿಗಿಂತಲೂ ನಮ್ಮ ಚಾಟ್ ಬಗ್ಗೆ ಹೆಚ್ಚು ಗಮನ ನೀಡುತ್ತಿರುವಂತಿದೆ. ಮಾತುಕತೆಯಲ್ಲಿ ತಮಗೆ ಬೇಕಾದ ಭಾಗವನ್ನು ಮಾತ್ರ ಆರಿಸಿಕೊಂಡು ಬಿಡುಗಡೆ ಮಾಡುವುದಲ್ಲ. ಮಾಡುವುದಿದ್ದರೆ ಪೂರ್ತಿ ಬಿಡುಗಡೆಗೊಳಿಸಲಿ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ: ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; 4ನೇ ಹಂತದ ಮತದಾನದಲ್ಲಿ ಸಿಂಗೂರ್ ಕ್ಷೇತ್ರ ನಿರ್ಣಾಯಕ