Bihar: ಸರ್ಕಾರಿ ಭೂಮಿ ಒತ್ತುವರಿ ಮಾಹಿತಿ ಕೇಳಿದ್ದ ಆರ್​ಟಿಐ ಕಾರ್ಯಕರ್ತನ ಹತ್ಯೆ

| Updated By: Lakshmi Hegde

Updated on: Sep 24, 2021 | 5:04 PM

ಬಿಪಿನ್​ ಅಗರ್​ವಾಲ್ ಸರ್ಕಾರಿ ಭೂಮಿಯ ಒತ್ತುವರಿ ಬಗ್ಗೆ ಮಾಹಿತಿ ಕೇಳಿದ್ದರು. ಇವರ ಮೇಲೆ ಹಿಂದೆಯೂ ಒಮ್ಮೆ ದಾಳಿ ನಡೆದಿತ್ತು. ಇತ್ತೀಚೆಗಷ್ಟೇ ಪೊಲೀಸ್​ ರಕ್ಷಣೆ ಕೇಳಿದ್ದರು. 

Bihar: ಸರ್ಕಾರಿ ಭೂಮಿ ಒತ್ತುವರಿ ಮಾಹಿತಿ ಕೇಳಿದ್ದ ಆರ್​ಟಿಐ ಕಾರ್ಯಕರ್ತನ ಹತ್ಯೆ
ಸಾಂಕೇತಿಕ ಚಿತ್ರ
Follow us on

ಸರ್ಕಾರಿ ಭೂಮಿ ಅತಿಕ್ರಮಣದ ಬಗ್ಗೆ ಸವಿಸ್ತೃತ ಮಾಹಿತಿ ಕೋರಿ ಸುಮಾರು 90 ಅರ್ಜಿ ಸಲ್ಲಿಸಿದ್ದ ಆರ್​ಟಿಐ ಕಾರ್ಯಕರ್ತ ಇಂದು ಹತ್ಯೆಗೀಡಾಗಿದ್ದಾನೆ. ಈ ಘಟನೆ ನಡೆದಿದ್ದು ಬಿಹಾರದ ಪೂರ್ವ ಚಂಪಾರಣ್​​ನ ಹರ್ಸಿದ್ದಿ ಎಂಬಲ್ಲಿ.  ಇಂದು ಬೆಳಗ್ಗೆ 11.30ರ ಹೊತ್ತಿಗೆ ಈ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಆರ್​ಟಿಐ ಕಾರ್ಯಕರ್ತನನ್ನು ಬಿಪಿನ್​ ಅಗರ್​ವಾಲ್​ (45)  ಎಂದು ಗುರುತಿಸಲಾಗಿದೆ. ಮೋಟಾರ್​ಬೈಕ್​​ನಲ್ಲಿ ಬಂದ ಅಪರಿಚಿತ ದುರ್ಷರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.  

ಬಿಪಿನ್​ ಅಗರ್​ವಾಲ್ ಸರ್ಕಾರಿ ಭೂಮಿಯ ಒತ್ತುವರಿ ಬಗ್ಗೆ ಮಾಹಿತಿ ಕೇಳಿದ್ದರು. ಇವರ ಮೇಲೆ ಹಿಂದೆಯೂ ಒಮ್ಮೆ ದಾಳಿ ನಡೆದಿತ್ತು. ಇತ್ತೀಚೆಗಷ್ಟೇ ಪೊಲೀಸ್​ ರಕ್ಷಣೆ ಕೇಳಿದ್ದರು.  ಇನ್ನು ಅಗರ್​ವಾಲ್​ ಮೇಲೆ ನಡೆದ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಇನ್ನೊಬ್ಬ ಆರ್​ಟಿಐ ಕಾರ್ಯಕರ್ತ ಶಿವ್​ ಪ್ರಕಾಶ್​ ರಾಯ್​, ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಪಟ್ಟಂತೆ ಬಿಪಿನ್​ ಅಗರ್​ವಾಲ್​ ಹಲವು ಅರ್ಜಿ ಸಲ್ಲಿಸಿದ್ದರು. ಆದರೆ ಈ ರಾಜ್ಯದಲ್ಲಿ ಆರ್​ಟಿಐ ಕಾರ್ಯಕರ್ತರನ್ನು ಟಾರ್ಗೆಟ್​ ಮಾಡಲಾಗುತ್ತದೆ ಎಂಬುದಕ್ಕೆ ಈ ದಾಳಿಯೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

Video: ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಗಟ್ಟಿಯಾಗಿ ಮಾತನಾಡಿದ ಅಫ್ಘಾನ್​ ಬಾಲಕಿ; ತಾಲಿಬಾನಿಗಳೆದುರು ಹುಡುಗಿಯ ದಿಟ್ಟತನ

ಬೆಂಗಳೂರಿನಲ್ಲಿ ತುಪ್ಪ ಮಾರಾಟದ ನೆಪದಲ್ಲಿ ದರೋಡೆ ಮಾಡುತ್ತಿದ್ದ ತಂಡ ಬಂಧನ