ನೇಪಾಳದಲ್ಲಿ ಮಾತ್ರ ಬೆಳೆಯುವ ರುದ್ರಾಕ್ಷಿ ಮಣಿಗಳು ಇಲ್ಲೂ ಕಮಾಲ್ ಮಾಡಿವೆ! ಎಲ್ಲಿ?

ನೇಪಾಳದಲ್ಲಿ ಬೆಳೆಯೋ ರುದ್ರಾಕ್ಷಿ ಮಣಿಗಳು ತೆಲಂಗಾಣದಲ್ಲೂ ಬೆಳೆಯೋ ಮೂಲಕ ಅಚ್ಚರಿ ಮೂಡಿಸಿದೆ. ತೆಲಂಗಾಣದ ಮೆಡ್​ಚಲ್ ಎಂಬಲ್ಲಿ ರುದ್ರಾಕ್ಷಿ ಮಣಿಗಳು ಬೆಳೆದಿದ್ದು, ತಜ್ಞರ ಹುಬ್ಬೇರುವಂತೆ ಮಾಡಿದೆ. ನೇಪಾಳದ ಮಣ್ಣು ಹಾಗೂ ವಾತಾವರಣದಲ್ಲಿ ಮಾತ್ರ ಬೆಳೆಯೋ ರುದ್ರಾಕ್ಷಿ ಮಣಿಗಳು ದಕ್ಷಿಣ ಭಾರತದ ತೆಲಂಗಾಣ ಮಣ್ಣಲ್ಲಿ ಬೆಳೆದಿರೋ ಬಗ್ಗೆ ಎಚ್ಚರೂ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಮಾಸ್ಕ್ ವಿಚಾರಕ್ಕೆ ಡಿಶುಂ ಡಿಶುಂ..! ಮಾಸ್ಕ್ ಧರಿಸದೆ ಇರೋದನ್ನು ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಪೊಲೀಸರ ಮೇಲೆಯೇ ಮುಗಿಬಿದ್ದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ […]

ನೇಪಾಳದಲ್ಲಿ ಮಾತ್ರ ಬೆಳೆಯುವ ರುದ್ರಾಕ್ಷಿ ಮಣಿಗಳು ಇಲ್ಲೂ ಕಮಾಲ್ ಮಾಡಿವೆ! ಎಲ್ಲಿ?
Follow us
ಸಾಧು ಶ್ರೀನಾಥ್​
| Updated By:

Updated on: Jun 05, 2020 | 7:07 PM

ನೇಪಾಳದಲ್ಲಿ ಬೆಳೆಯೋ ರುದ್ರಾಕ್ಷಿ ಮಣಿಗಳು ತೆಲಂಗಾಣದಲ್ಲೂ ಬೆಳೆಯೋ ಮೂಲಕ ಅಚ್ಚರಿ ಮೂಡಿಸಿದೆ. ತೆಲಂಗಾಣದ ಮೆಡ್​ಚಲ್ ಎಂಬಲ್ಲಿ ರುದ್ರಾಕ್ಷಿ ಮಣಿಗಳು ಬೆಳೆದಿದ್ದು, ತಜ್ಞರ ಹುಬ್ಬೇರುವಂತೆ ಮಾಡಿದೆ. ನೇಪಾಳದ ಮಣ್ಣು ಹಾಗೂ ವಾತಾವರಣದಲ್ಲಿ ಮಾತ್ರ ಬೆಳೆಯೋ ರುದ್ರಾಕ್ಷಿ ಮಣಿಗಳು ದಕ್ಷಿಣ ಭಾರತದ ತೆಲಂಗಾಣ ಮಣ್ಣಲ್ಲಿ ಬೆಳೆದಿರೋ ಬಗ್ಗೆ ಎಚ್ಚರೂ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಮಾಸ್ಕ್ ವಿಚಾರಕ್ಕೆ ಡಿಶುಂ ಡಿಶುಂ..! ಮಾಸ್ಕ್ ಧರಿಸದೆ ಇರೋದನ್ನು ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಪೊಲೀಸರ ಮೇಲೆಯೇ ಮುಗಿಬಿದ್ದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ ಇಬ್ಬರು ಪೊಲೀಸರ ಜೊತೆ ಹೊಡೆದಾಟದಲ್ಲಿ ಭಾಗಿಯಾಗಿರೋದು ದಾಖಲಾಗಿದೆ. ಪೊಲೀಸರ ಆತನನ್ನು ಎಷ್ಟೇ ನಿಯಂತ್ರಿಸಲು ಪ್ರಯತ್ನಪಟ್ಟರೂ ಆತ ಮಾತ್ರ ಖಾಕಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸ್ತಿದ್ದ. ಪೊಲೀಸರು ಮನವರಿಕೆ ಮಾಡಲು ಮುಂದಾದಾಲೂ ಅವ್ರ ಮೇಲೆಯೇ ಹಲ್ಲೆ ನಡೆಸಿದ್ದ. ಬಳಿಕ ಆತನನ್ನು ಬಂಧಿಸಲಾಯ್ತು.

ಹೇರ್ ಕಟ್ ಎಡವಟ್ಟು..! ಲಾಕ್​ಡೌನ್ ಇದ್ದರೂ ಓಪನ್ ಮಾಡಿದ್ದ ಸಲೂನ್ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ ಕಟಿಂಗ್ ಮಾಡಿಸಿಕೊಳ್ತಿದ್ದ ಗ್ರಾಹಕರು ಸಲೂನ್​ನಿಂದ ಹರಗೆ ಓಡಿಹೋಗಿದ್ದಾರೆ. ಆದ್ರೆ ಅದಾಗಲೇ ಕಟಿಂಗ್ ಕೂತಿದ್ದ ವ್ಯಕ್ತಿ ಮಾತ್ರ ಇನ್ನೇನು ಮಾಡೋದು ಅಂತಾ ತಬ್ಬಿಬ್ಬಾಗಿ ಕೂತಿದ್ದ. ಯಾಕಂದ್ರೆ ಆತನ ತಲೆಕೂದಲು ಅರ್ಧ ಕಟ್ ಮಾಡಲಾಗಿದ್ದು, ಪೊಲೀಸರು ರೇಡ್ ಮಾಡ್ತಿದ್ದಂತೆ ಕಟಿಂಗ್ ಮಾಡುವವನೂ ತನ್ನ ಕೈಯಲ್ಲಿದ್ದ ಕತ್ತರಿಯನ್ನು ಕೆಳಗಿಟ್ಟಿದ್ದ.

ಅಜ್ಜಿಯ ಸ್ಕೂಟರ್ ರೈಡ್ ಲಾಕ್​ಡೌನ್​ನಿಂದ ಮನೆಯಲ್ಲೇ ಉಳಿದುಕೊಂಡಿದ್ದ ಅಜ್ಜಿಯೊಬ್ಬರು ಮೊದಲ ಬಾರಿಗೆ ಹೊರಗೆ ಬಂದ ಖುಷಿಯನ್ನು ವಿಶೇಷವಾಗಿ ಹಂಚಿಕೊಂಡಿದ್ದಾರೆ. ತನ್ನ ಮೊಬಿಲಿಟಿ ಸ್ಕೂಟರ್ ಎತ್ತಿಕೊಂಡು ಹೋದ ಅಜ್ಜಿ ಸ್ಕೇಟಿಂಗ್ ಪಾರ್ಕ್​ನ ಟ್ರ್ಯಾಕ್​ನಲ್ಲಿ ರೈಡ್ ಮಾಡಿ ಎಂಜಾಯ್ ಮಾಡಿದ್ರು. ಸ್ಕಾಟ್​ಲ್ಯಾಂಡ್​ನಲ್ಲಿ ಕಳೆದ 3 ತಿಂಗಳಿಂದ ಲಾಕ್​ಡೌನ್ ಜಾರಿಮಾಡಲಾಗಿತ್ತು. ಇದೀಗ ಲಾಕ್​ಡೌನ್ ತೆರವುಗೊಳಿಸಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳ್ತಿದೆ.

ಸಂತ್ರಸ್ತರ ಕುಟುಂಬಗಳ ಕಣ್ಣೀರು ಸ್ಪೈನ್​ನಲ್ಲಿ ಕೊರೊನಾ ವೈರಸ್​ನಿಂದ ಬಲಿಯಾದವ್ರ ಕುಟುಂಬಸ್ಥರು ತಮ್ಮವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದೀಗ ಲಾಕ್​ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಯ್ತು. ಸ್ಪೈನ್​ನ ವಿವಿಧ ಚರ್ಚ್​ಳಲ್ಲಿ ಕೊರೊನಾದಿಂದ ಮೃತಪಟ್ಟವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು.

ಮುಂದುವರಿದ ಪ್ರತಿಭಟನೆ ಕೊರೊನಾ ವೈರಸ್ ಅಟ್ಟಹಾಸದ ನಡುವೆಯೂ ಅಮೆರಿಕಾದಲ್ಲಿ ಭುಗಿಲೆದ್ದ ಪ್ರತಿಭಟನೆ ಇನ್ನೂ ಮುಂದುವರಿದಿದೆ. ಅಮೆರಿಕಾದ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಪೊಲೀಸರ ಜೊತೆ ಸಂಘರ್ಷ ಮುಂದುವರಿಸಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ಪೊಲೀಸ್ ಪ್ರತಿಭಟನಾಕಾರರಿಗೆ ಎಷ್ಟೇ ಮನವಿ ಮಾಡಿದ್ರೂ, ಮಿಣಕಾಲುರಿ ನಿಂತ್ರೂ ಪ್ರೊಟೆಸ್ಟ್ ಮಾತ್ರ ಮುಂದುವರಿದಿದೆ. ಈ ನಡುವೆ ಅಮೆರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ನೆಲ ನುಂಗಿದ ನೀರು..! ನಾರ್ವೆ ಕಡಲತೀರದಲ್ಲಿ ಭುಕುಸಿತ ಉಂಟಾಗಿರೋ ದೃಶ್ಯ ಡ್ರೋಣ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಬೃಹತ್ ಗಾತ್ರದ ಭೂಭಾಗ ಸಮುದ್ರದ ಒಡಲು ಸೇರಿದ್ದು, ಕಟ್ಟಡ, ಮನೆಗಳೂ ಸಮುದ್ರ ಪಾಲಾಗಿವೆ. ನಾರ್ವೆಯ ಆಲ್ಟಾ ನಗರದ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದ್ದು, ನೋಡನೋಡ್ತಿದ್ದಂತೆ ಭೂಮಿ ಸಮುದ್ರದ ನೀರಲ್ಲಿ ಮುಳುಗಿ ಮಾಯವಾಗಿತ್ತು.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ