ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೊಸ ವರ್ಷದ ಶುಭಾಷಯ ಕೋರಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 31, 2022 | 1:33 PM

‘ಭಾರತವು ಇತ್ತೀಚೆಗೆ ವಹಿಸಿಕೊಂಡಿರುವ ಎಸ್‌ಸಿಒ ಮತ್ತು ಜಿ20 ಅಧ್ಯಕ್ಷತೆ ಏಷ್ಯಾ ಮತ್ತು ಇಡೀ ಜಗತ್ತಿನಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಬಲಪಡಿಸುವ ಹಿತಾಸಕ್ತಿಗಳಲ್ಲಿ ನಮ್ಮ ಜನರ ಅನುಕೂಲಕ್ಕಾಗಿ ಬಹು-ಆಯಾಮದ ರಷ್ಯಾ-ಭಾರತ ಸಹಕಾರವನ್ನು ನಿರ್ಮಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಪುಟಿನ್ ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೊಸ ವರ್ಷದ ಶುಭಾಷಯ ಕೋರಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ
Follow us on

ಮಾಸ್ಕೋ: ಭಾರತಕ್ಕೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin), ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 (G20) ಮತ್ತು ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿಒ) (SCO) ಶೃಂಗಸಭೆಗಳು ರಷ್ಯಾ-ಇಂಡಿಯ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬಹು-ಆಯಾಮಗಳ (multi-dimensional) ಅವಕಾಶಗಳನ್ನು ಸೃಷ್ಟಿಸಿ ಎರಡೂ ರಾಷ್ಟ್ರಗಳ ಜನತೆಗೆ ನೆರವಾಗಲಿದೆ ಎಂದು ಅವರು ಹೇಳಿರುವುನ್ನು ಕ್ರೆಮ್ಲಿನ್ ಸೈಟ್ ವರದಿ ಮಾಡಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಂದೇಶ ಕಳುಹಿಸಿರುವ ಪುಟಿನ್, 2022 ರಲ್ಲಿ ರಷ್ಯಾ ಮತ್ತು ಭಾರತ ತಮ್ಮ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿವೆ ಮತ್ತು ಸ್ನೇಹ ಹಾಗೂ ಪರಸ್ಪರ ಗೌರವದ ಸಕಾರಾತ್ಮಕ ಸಂಪ್ರದಾಯಗಳನ್ನು ಆಧಾರವಾಗಿಸಿಕೊಂಡು, ಉಭಯ ದೇಶಗಳು ತಮ್ಮ ವಿಶೇಷ ಸವಲತ್ತುಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲಿವೆ ಎಂದು ಹೇಳಿದ್ದಾರೆ.

ಕಾರ್ಯತಂತ್ರ ಸಹಭಾಗಿತ್ವ, ಶಕ್ತಿ, ಮಿಲಿಟರಿ ತಂತ್ರಜ್ಞಾನ ಮತ್ತು ಸಹಕಾರ ಮತ್ತು ಇತರ ಕ್ಷೇತ್ರಗಳ ಜೊತೆಗೆ ದೊಡ್ಡ ಪ್ರಮಾಣದ ವ್ಯಾಪಾರ ಮತ್ತು ಆರ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು, ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯಸೂಚಿಗಳ ಪ್ರಮುಖ ವಿಷಯಗಳನ್ನು ಪರಿಹರಿಸುವ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ತಮ್ಮ ಹೇಳಿಕೆಯಲ್ಲಿ ಪುಟಿನ್ ತಿಳಿಸಿದ್ದಾರೆ.

ಜಿ20 ಅಧ್ಯಕ್ಷತೆ ನೆರವಾಗಲಿದೆ

‘ಭಾರತವು ಇತ್ತೀಚೆಗೆ ವಹಿಸಿಕೊಂಡಿರುವ ಎಸ್‌ಸಿಒ ಮತ್ತು ಜಿ20 ಅಧ್ಯಕ್ಷತೆ ಏಷ್ಯಾ ಮತ್ತು ಇಡೀ ಜಗತ್ತಿನಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಬಲಪಡಿಸುವ ಹಿತಾಸಕ್ತಿಗಳಲ್ಲಿ ನಮ್ಮ ಜನರ ಅನುಕೂಲಕ್ಕಾಗಿ ಬಹು-ಆಯಾಮದ ರಷ್ಯಾ-ಭಾರತ ಸಹಕಾರವನ್ನು ನಿರ್ಮಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ:  PM-CM-President ಗಳಿಗೆ ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಸಾಲು ಸಾಲು ಪತ್ರ ಬರೆದರು! ಉದ್ದೇಶವೇನು?

ಇದಕ್ಕೂ ಮುನ್ನ, ಅಂದರೆ ಬುಧವಾರದಂದು ಯುಕೆ ರಾಯಭಾರಿ ಅಲೆಕ್ಸ್ ಎಲ್ಲಿಸ್ ಅವರು ಭಾರತಕ್ಕೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿ 2022 ರಲ್ಲಿ ಇಂಡಿಯ-ಬ್ರಿಟನ್ ನಡುವಿನ ಸಂಬಂಧಗಳು ಹೆಚ್ಚು ಬಲಗೊಂಡಿವೆ ಎಂದು ಹೇಳಿದ್ದರು.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಪೋಸ್ಟ್ ಮಾಡಿರುವ ಎಲ್ಲಿಸ್, ‘ಇಂಡಿಯ-ಯುಕೆ ನಡುವಿನ ಸಂಬಂಧಗಳಿಗೆ 2022 ಅಮೋಘ ವರ್ಷವಾಗಿತ್ತು, ಯುಕೆ ಮತ್ತು ಇಂಡಿಯಾ ಪ್ರಸಕ್ತ ವರ್ಷದಲ್ಲಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿಕೊಂಡಿವೆ,’ ಎಂದು ಹೇಳಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ

ಆರ್ಥಿಕ ಸಂಬಂಧದ ಬಗ್ಗೆ ಮಾತಾಡಿರುವ ಎಲ್ಲಿಸ್, 2022 ರಲ್ಲಿ ಇಂಡಿಯ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಆರಂಭಿಸಿದವು ಎಂದು ಹೇಳಿದ್ದಾರೆ.

‘ಎರಡನೇಯದಾಗಿ, ಹವಾಮಾನ ವೈಪ್ಯರೀತ್ಯ ಮತ್ತು ಸುಸ್ಥಿರತೆ ಕುರಿತು ಮಾತಾಡುವುದಾದರೆ, ಹಸಿರು ಆರ್ಥಿಕತೆ ದಿಶೆಯಲ್ಲಿ ಇಂಡಿಯ ಸಾಧಿಸುತ್ತಿರುವ ಕ್ಷಿಪ್ರ ಪ್ರಗತಿಯನ್ನು ನಾವು ಬೆಂಬಲಿಸುತ್ತಿದ್ದೇವೆ, ಅದಕ್ಕೆ ಉದಾಹರಣೆಯೆಂದರೆ, ಮಹಿಂದ್ರ ಈವಿ ಕಂಪನಿಯಲ್ಲಿ ನಾವು ಬಂಡವಾಳ ಹೂಡಿರುವುದು. ಮೂರನೇಯದಾಗಿ, ಆರೋಗ್ಯ ಕ್ಷೇತ್ರದಲ್ಲಿ ಎರಡು ರಾಷ್ಟ್ರಗಳ ಬಾಂಧವ್ಯ ಮುಂದುವರಿದಿದ್ದು ಇಂಡಿಯದಲ್ಲಿ ಯುಕೆ ಟೆಕ್ನಾಲಜಿಯನ್ನು ಬಳಸಿ ಎಬೊಲ ಲಸಿಕೆಗಳನ್ನು ತಯಾರಿಸಿ ಆಫ್ರಿಕಾಗೆ ಕಳಿಸಲಾಗುತ್ತಿದೆ,’ ಎಂದು ಎಲ್ಲಿಸ್ ಹೇಳಿದ್ದಾರೆ.

ಮುಕ್ತ ಇಂಡೋ-ಪೆಸಿಫಿಕ್

ರಕ್ಷಣೆ ಮತ್ತು ಭದ್ರತೆ ಅಯಾಮ ಕುರಿತಂತೆ ಹೇಳುವುದಾದರೆ ಇಂಡೊ-ಪೆಸಿಫಿಕ್ ಮುಕ್ತವಾಗಿದೆ ಅನ್ನೋದನ್ನು ಖಚಿತಪಡಿಸಲು ನಾವು ನಿರ್ದಿಷ್ಟವಾಗಿ ಸಮುದ್ರ ಮತ್ತು ಸೈಬರ್ ಸ್ಪೇಸ್ ನಲ್ಲಿ ಸಹಕಾರವನ್ನು ವೃದ್ಧಿಸುತ್ತಿದ್ದೇವೆ,’ ಅಂತ ಎಲ್ಲಿಸ್ ಹೇಳಿದ್ದಾರೆ.
ಇಂಡಿಯ ಮತ್ತು ಯುಕೆ ವೀಸಾಗಳಿಗೆ ಸಮಯವನ್ನು ಕಡಿಮೆ ಮಾಡಿವೆ. ಇಂಡಿಯಗೆ ಭೇಟಿ ನೀಡಬಯಸುವ ಬ್ರಿಟಿಷ್ ಪ್ರಜೆಗಳಿಗೆ ಇ-ವಿಸಾ ಕೂಡ ಬರಲಿದೆ.

ಇದನ್ನೂ ಓದಿ:  Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು

ಯುಕೆಯಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಕೆ ದೊರೆಸ್ವಾಮಿ ಅವರು ಭಾರತಕ್ಕೆ ಪ್ರಯಾಣಿಸುವ ಯುಕೆ ನಾಗರಿಕರಿಗೆ ಇ-ವಿಸಾ ಸೌಲಭ್ಯವನ್ನು ಪುನರಾರಂಭಿಸಲಾಗುವುದು ಎಂದು ಡಿಸೆಂಬರ್ 5 ರಂದು ಘೋಷಣೆ ಮಾಡಿದ್ದರು.

ನಮ್ಮ ಪ್ರಧಾನಿಯ ತಾತ-ಅಜ್ಜಿ ಪಂಜಾಬ್​ನವರು

‘ಮತ್ತು ಬಹು ಮುಖ್ಯವಾಗಿ ನಮ್ಮ ಪ್ರಧಾನ ಮಂತ್ರಿ ರಿಷಿ ಸುನಾಕ್ ಅವರ ಅಜ್ಜಿ-ತಾತ ಇಂಡಿಯದ ಪಂಜಾಬ್ ನವರಾಗಿದ್ದಾರೆ, ನಿಜಕ್ಕೂ ಒಂದು ಅದ್ಭುತ ವರ್ಷ, ಮುಂದಿನ ವರ್ಷ ಇದು ಮತ್ತಷ್ಟು ಉತ್ತಮಗೊಳ್ಳಲಿದೆ. ಇಂಡಿಯ ಜಿ20ಯ ಅಧ್ಯಕ್ಷತೆ ವಹಿಸಿಕೊಂಡಿರುವುದು ಸಹ ಬಹಳ ಮಹತ್ವದ ಅಂಶ,’ ಎಂದು ಎಲ್ಲಿಸ್ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

‘ಈ ಪಯಣ ಇನ್ನೂ ಕೊನೆಗೊಂಡಿಲ್ಲ ಮತ್ತು ಪ್ರತಿಯೊಬ್ಬ ಇಂಡಿಯನ್ ಗೆ ಹೊಸ ವರ್ಷಸ ಶುಭಾಷಯಗಳನ್ನು ಹೇಳುತ್ತೇನೆ,’ ಎಂದು ಹೇಳುತ್ತಾ ಎಲ್ಲಿಸ್ ತಮ್ಮ ವಿಡಿಯೋ ಸಂದೇಶ ಕೊನೆಗೊಳಿಸಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ