Sign In

By signing in or creating an account, you agree with Associated Broadcasting Company's Terms & Conditions and Privacy Policy.

Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು

ಹೊಸಬರನ್ನು ನೇಮಕ ಮಾಡಿಕೊಳ್ಳಲು ಹೆಚ್ಚು ಒಲವು ವ್ಯಕ್ತಪಡಿಸಿದ ನಗರಗಳ ಪೈಕಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿರುವ ಶೇಕಡಾ 68ರಷ್ಟು ಕಂಪನಿಗಳು ಫ್ರೆಷರ್​ಗಳ ನೇಮಕಾತಿಗೆ ಒಲವು ವ್ಯಕ್ತಪಡಿಸಿವೆ.

Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Dec 29, 2022 | 5:49 PM

ನವದೆಹಲಿ: ಮೊದಲ ಬಾರಿಗೆ ಉದ್ಯೋಗ (Job) ಹುಡುಕುತ್ತಿರುವವರು ಅಥವಾ ಫ್ರೆಷರ್​ಗಳಿಗೆ ಕೆಲಸ ನೀಡುವಲ್ಲಿ 2022ರ ಜುಲೈ – ಡಿಸೆಂಬರ್​ ಅವಧಿಯಲ್ಲಿ ಭಾರತದ ಕಂಪನಿಗಳು (Indian Companies) ವಿದೇಶಿ ಕಂಪನಿಗಳಿಗಿಂತ ಮುಂದಿವೆ ಎಂದು ವರದಿಯೊಂದು ತಿಳಿಸಿದೆ. ಈ ಅವಧಿಯಲ್ಲಿ ಜಾಗತಿಕವಾಗಿ ಶೇಕಡಾ 11ರಷ್ಟು ಕಂಪನಿಗಳು ಹೊಸಬರಿಗೆ ಉದ್ಯೋಗ ನೀಡಿದರೆ ಶೇಕಡಾ 59ರಷ್ಟು ಭಾರತೀಯ ಕಂಪನಿಗಳು ಫ್ರೆಷರ್​ಗಳನ್ನು ನೇಮಕಾತಿ ಮಾಡಿಕೊಂಡಿವೆ. 2022ರ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಹೊಸಬರ ನೇಮಕಾತಿಯಲ್ಲಿ ಶೇಕಡಾ 12ರ ಹೆಚ್ಚಳ ಕಂಡುಬಂದಿದೆ. ಹೊಸಬರನ್ನು ನೇಮಕ ಮಾಡಿಕೊಳ್ಳುವ ಒಲವು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಶೇಕಡಾ 20ರಷ್ಟಿದೆ. ಅಮೆರಿಕದಲ್ಲಿ ಶೇಕಡಾ 15ರಷ್ಟಿದ್ದರೆ, ಪಶ್ಚಿಮ ಏಷ್ಯಾದಲ್ಲಿ ಶೇಕಡಾ 6ರಷ್ಟಿದೆ ಎಂದು ಟೀಮ್​​ಲೀಸ್ ಎಜುಟೆಕ್ ಕಂಪನಿಯ ‘ಕೆರಿಯರ್ ಔಟ್​​ಲುಕ್ ರಿಪೋರ್ಟ್’ ತಿಳಿಸಿದೆ.

ಭಾರತದ ಉದ್ಯೋಗಾರ್ಥಿಗಳಿಗೆ ಶುಭ ಸುದ್ದಿ

ಹೊಸಬರು ಮತ್ತು ಅನುಭವ ಇರುವ ಉದ್ಯೋಗಾರ್ಥಿಗಳಿಗೆ ಈ ವರ್ಷದ ಬೆಳವಣಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಈ ಎರಡೂ ಕೆಟಗರಿಯವರ ನೇಮಕಾತಿಯಲ್ಲಿ ವರ್ಷದ ಮೊದಲಾರ್ಧದಲ್ಲಿ ಶೇಕಡಾ 50ರಷ್ಟಿದ್ದರೆ ದ್ವಿತೀಯಾರ್ಧದಲ್ಲಿ ಶೇಕಡಾ 61ರಷ್ಟಿದೆ ಎಂದು ವರದಿ ತಿಳಿಸಿದೆ. ಉತ್ಪಾದನೆ, ಸೇವಾ ಕ್ಷೇತ್ರ, ತಂತ್ರಜ್ಞಾನ, ಐಟಿ, ಇ-ಕಾಮರ್ಸ್, ಸ್ಟಾರ್ಟಪ್​ಗಳು, ಟೆಲಿ ಕಮ್ಯುನಿಕೇಷನ್​ ಸೇರಿದಂತೆ ವಿವಿಧ ಕ್ಷೇತ್ರಗಳ 865 ಸಣ್ಣ, ಮಧ್ಯಮ ಮತ್ತು ಬೃಹತ್ ಗಾತ್ರದ ಉದ್ಯಮಗಳನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಿದ್ಧಪಡಿಸಲಾಗಿದೆ.

ಐಟಿ ಕ್ಷೇತ್ರದಲ್ಲಿ ಒಂದು ಲಕ್ಷ ಉದ್ಯೋಗಾವಕಾಶ

23ನೇ ಹಣಕಾಸು ವರ್ಷದಲ್ಲಿ ಐಟಿ ಕಂಪನಿಗಳು ಒಂದು ಲಕ್ಷ ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ. ಆರ್ಥಿಕ ಹಿಂಜರಿತ ಮತ್ತು ಬೆಳವಣಿಗೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಐಟಿ ಕಂಪನಿಗಳು ಹೊಸಬರ ನೇಮಕಕ್ಕೆ ಮುಂದಾಗಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್​ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ

ಸ್ಟಾರ್ಟಪ್​ಗಳು ಮತ್ತು ಸೀಮಿತ ಆದಾಯವಿರುವ ಕಂಪನಿಗಳಿಗೆ ಕಡಿಮೆ ವೆಚ್ಚದ ದೃಷ್ಟಿಯಿಂದ ಹೊಸಬರು ಉತ್ತಮ ಆಯ್ಕೆಯಾಗಿದ್ದಾರೆ. ಡಿಜಿಟಲ್ ವ್ಯವಸ್ಥೆಯ ಅರಿವಿರುವ ಈಗಿನ ಯುವಕರು ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿವು ಹೊಂದಿದವರಾಗಿದ್ದು, ಉತ್ಪಾದನೆ ಹೆಚ್ಚಿಸುವಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಅರಿವು ಅವರಿಗಿರುತ್ತದೆ ಎಂದು ಟೀಮ್​ಲೀಸ್​ ಎಜುಟೆಕ್​ನ ಅಧ್ಯಕ್ಷ ನೀತಿ ಶರ್ಮಾ ತಿಳಿಸಿದ್ದಾರೆ.

ಅಗ್ರ ಸ್ಥಾನದಲ್ಲಿ ಬೆಂಗಳೂರು

ಹೊಸಬರನ್ನು ನೇಮಕ ಮಾಡಿಕೊಳ್ಳಲು ಹೆಚ್ಚು ಒಲವು ವ್ಯಕ್ತಪಡಿಸಿದ ನಗರಗಳ ಪೈಕಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿರುವ ಶೇಕಡಾ 68ರಷ್ಟು ಕಂಪನಿಗಳು ಫ್ರೆಷರ್​ಗಳ ನೇಮಕಾತಿಗೆ ಒಲವು ವ್ಯಕ್ತಪಡಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !