ಸಂಸತ್ತಿನ ಒಳಗೆ ವಿದ್ಯಾರ್ಥಿಗಳ ಭವಿಷ್ಯದ ಚರ್ಚೆ, ಹೊರಗೆ ಸಂಸದೆಯ ರೀಲ್ಸ್: “ಇದಕ್ಕಾ ವೋಟ್ ಹಾಕಿದ್ದು?” ಎಂದು ಸಿಡಿದೆದ್ದ ನೆಟ್ಟಿಗರು

ನೀಟ್ ಪರೀಕ್ಷಾ ಅಕ್ರಮದ ಕುರಿತು ಸಂಸತ್ತಿನಲ್ಲಿ ತೀವ್ರ ಚರ್ಚೆ ನಡೆಯುತ್ತಿರುವಾಗ, ಜಾದವ್‌ಪುರ ಸಂಸದೆ ಸಾಯನಿ ಘೋಷ್ ಸಂಸತ್ ಆವರಣದಲ್ಲಿ ಮಳೆಯಲ್ಲಿ ರೀಲ್ಸ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. 'ತಾಲ್' ಹಾಡಿಗೆ ಮಾಡಿದ ಈ 20 ಸೆಕೆಂಡ್‌ಗಳ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದು ವೈರಲ್ ಆಗಿದೆ. ದೇಶದ ಸಮಸ್ಯೆಗಳಿಗೆ ಧ್ವನಿ ಎತ್ತಲು ಕಳುಹಿಸಿದ ಸಂಸದೆ ರೀಲ್ಸ್ ಮಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಒಳಗೆ ವಿದ್ಯಾರ್ಥಿಗಳ ಭವಿಷ್ಯದ ಚರ್ಚೆ, ಹೊರಗೆ ಸಂಸದೆಯ ರೀಲ್ಸ್: ಇದಕ್ಕಾ ವೋಟ್ ಹಾಕಿದ್ದು? ಎಂದು ಸಿಡಿದೆದ್ದ ನೆಟ್ಟಿಗರು
ಸಂಸದೆ ಸಾಯನಿ ಘೋಷ್

Updated on: Jul 29, 2026 | 4:24 PM

ದೆಹಲಿ, ಜು.29: ಒಂದೆಡೆ ‘ನೀಟ್’ (NEET) ಪಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಗದ್ದಲ, ಕಲಾಪ ಮುಂದೂಡಿಕೆ ಮತ್ತು ತೀವ್ರ ವಾಗ್ದಾಳಿಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಜಾದವ್‌ಪುರ ಲೋಕಸಭಾ ಕ್ಷೇತ್ರದ ಸಂಸದೆ ಸಾಯನಿ ಘೋಷ್ (Saayoni Ghosh) ಸಂಸತ್ ಭವನದ ಆವರಣದಲ್ಲಿ ರೀಲ್ಸ್ (Reels) ಮಾಡಿ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ತೃಣಮೂಲ ಕಾಂಗ್ರೆಸ್  ನಿಂದ ಬಂಡಾಯವೆದ್ದು ಬಂದಿರುವ NCPI ಸಂಸದರೂ ಸಹ ಮುಂಗಾರು ಕಲಾಪದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ನಟಿ ಹಾಗೂ ಸಂಸದೆಯಾಗಿರುವ ಸಾಯನಿ ಘೋಷ್ ಅವರು ಸಂಸತ್ತಿನ ಮಧ್ಯಾಹ್ನ ಭೋಜನದ ವಿರಾಮದ ವೇಳೆಯಲ್ಲಿ ಸಂಸತ್ ಭವನದ ಆವರಣದಲ್ಲಿ ಮಳೆಯನ್ನು ಆನಂದಿಸುತ್ತಾ ಮಾಡಿದ ವೀಡಿಯೊ ಈಗ ವೈರಲ್ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ;

‘ತಾಲ್’  ಚಲನಚಿತ್ರದ ‘ನೆಹಿ ಸಮ್ನೆ ತು’ ಜನಪ್ರಿಯ ಹಾಡಿಗೆ ಸಾಯನಿ ಘೋಷ್ ಮಾಡಿರುವ 20 ಸೆಕೆಂಡ್‌ಗಳ ಈ ರೀಲ್ಸ್ ಮಂಗಳವಾರ ಪೋಸ್ಟ್ ಆಗಿದ್ದು, ಇಂಟರ್ನೆಟ್‌ನಲ್ಲಿ ತೀವ್ರ ವೈರಲ್ ಆಗಿದೆ. ಈ ವೀಡಿಯೊ ಈಗಾಗಲೇ 87 ಲಕ್ಷಕ್ಕಿಂತಲ್ಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 5,000ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

ಇದನ್ನೂ ಓದಿ: ಇನ್ಮುಂದೆ ನೋಟುಗಳು ಹರಿಯಲ್ಲ, ನೀರಿಗೆ ನೆನೆಯಲ್ಲ: 200 ಕೋಟಿ ಪ್ಲಾಸ್ಟಿಕ್ ನೋಟು ಮುದ್ರಣ; ಕಾಗದದ ನೋಟುಗಳು ಬಂದ್ ಆಗುತ್ತಾ?

ಸಾಯನಿ ಘೋಷ್ ಅವರ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿತವಾದ ಟೀಕೆಗಳಿಗೆ ಕಾರಣವಾಗಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ‘ನೀಟ್’ ಪರೀಕ್ಷೆಯ ಅಕ್ರಮದ ಕುರಿತು ಸಂಸತ್ತಿನ ಒಳಗೆ ತೀವ್ರ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿರುವಾಗ, ಹೊರಗಡೆ ಸಂಸದೆಯೊಬ್ಬರು ಮಳೆಗೆ ರೀಲ್ಸ್ ಮಾಡುತ್ತಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. “ಜನರು ನಿಮ್ಮನ್ನು ದೇಶದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸಂಸತ್ತಿಗೆ ಕಳುಹಿಸಿದ್ದಾರೆಯೇ ಹೊರತು ರೀಲ್ಸ್ ಮಾಡಲು ಅಲ್ಲ” ಎಂದು ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ರಾಷ್ಟ್ರದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us