AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಕೂಡ ಎಲ್ಲರಂತೆ ತಪ್ಪು ಮಾಡ್ತಾರೆ: ಕಾಂಗ್ರೆಸ್ ನಾಯಕನ ಹೇಳಿಕೆಗೆ ಸ್ಯಾಮ್ ಪಿತ್ರೋಡಾ ಬೆಂಬಲ

ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದು, 'ತಪ್ಪುಗಳು ಸಹಜ' ಎಂದಿದ್ದಾರೆ. ಮೋದಿ ಟೀಕೆಗೆ ತಿರುಗೇಟು ನೀಡಿ, ವಿದೇಶದಲ್ಲಿ ಭಾರತದ ಸಮಸ್ಯೆ ಚರ್ಚೆ ಸರಿಯಾಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರ ಅಮೆರಿಕ ಪ್ರವಾಸ ಮತ್ತು ಸೋನಿಯಾ ಗಾಂಧಿ ಆತ್ಮಕಥನಕ್ಕೂ ಪಿತ್ರೋಡಾ ಬೆಂಬಲ ನೀಡಿದ್ದಾರೆ. ಯುವಜನರ ಸಮಸ್ಯೆಗಳಿಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ರಾಹುಲ್ ಗಾಂಧಿ ಕೂಡ ಎಲ್ಲರಂತೆ ತಪ್ಪು ಮಾಡ್ತಾರೆ: ಕಾಂಗ್ರೆಸ್ ನಾಯಕನ ಹೇಳಿಕೆಗೆ ಸ್ಯಾಮ್ ಪಿತ್ರೋಡಾ ಬೆಂಬಲ
ಸ್ಯಾಮ್ ಪಿತ್ರೋಡಾImage Credit source: India TV
ನಯನಾ ರಾಜೀವ್
|

Updated on: Nov 11, 2026 | 1:19 PM

Share

ನವದೆಹಲಿ, ನವೆಂಬರ್ 11: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪರವಾಗಿ ಮಾತನಾಡಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, “ರಾಹುಲ್ ಗಾಂಧಿ ಕೂಡ ಎಲ್ಲರಂತೆ ಒಂದೆರಡು ತಪ್ಪುಗಳನ್ನು ಮಾಡಬಹುದು. ಆದರೆ ಅವರು ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅದನ್ನು ಗೌರವಿಸಬೇಕು” ಎಂದು ಹೇಳಿದ್ದಾರೆ.

ಚಿಕಾಗೋದಲ್ಲಿ ಸುದ್ದಿ ಸಂಸ್ಥೆ ಎಎನ್​ಐ ಜತೆ ಮಾತನಾಡಿದ ಪಿತ್ರೋಡಾ, ರಾಹುಲ್ ಗಾಂಧಿ ವೈಯಕ್ತಿಕ ಟೀಕೆಗಳನ್ನು ಎದುರಿಸುತ್ತಿದ್ದರೂ ಯುವಜನರು, ಬಡವರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಮಸ್ಯೆಗಳನ್ನು ಎತ್ತುತ್ತಿದ್ದಾರೆ ಎಂದು ಹೇಳಿದರು. “ನೀವು ಅವರ ರಾಜಕೀಯ ವಿರೋಧಿಯಾಗಿದ್ದರೂ, ಅವರು ಧೈರ್ಯದಿಂದ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿರುವುದನ್ನು ಗೌರವಿಸಬೇಕು. ನಾವೆಲ್ಲರೂ ತಪ್ಪು ಮಾಡುತ್ತೇವೆ. ಹಾಗೆಂದು ಅವರ ಮಾತುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಬೇಕೇ?” ಎಂಬುದು ಪಿತ್ರೋಡಾ ಅವರ ವಾದ.

ಮೋದಿ ಹೇಳಿಕೆಗೆ ಪಿತ್ರೋಡಾ ತಿರುಗೇಟು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಯನ್ನು “ವಿಫಲ ಉತ್ಪನ್ನ” ಎಂದು ಟೀಕಿಸಿದ್ದರು. ವಿದೇಶಿ ನೆಲದಲ್ಲಿ ಭಾರತ ಸರ್ಕಾರವನ್ನು ಟೀಕಿಸುವ ಮೂಲಕ ಕಾಂಗ್ರೆಸ್ ದೇಶದ ಅಂತರರಾಷ್ಟ್ರೀಯ ಗೌರವಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಪಿತ್ರೋಡಾ, ವಿದೇಶಗಳಲ್ಲಿ ಭಾರತದ ಸಮಸ್ಯೆಗಳ ಬಗ್ಗೆ ಮಾತನಾಡುವುದರಿಂದ ದೇಶಕ್ಕೆ ಅವಮಾನವಾಗುವುದಿಲ್ಲ ಎಂದು ಹೇಳಿದ್ದಾರೆ. “ಭಾರತದ ಒಳಗಿನ ವಿಚಾರಗಳನ್ನು ಜಾಗತಿಕ ವೇದಿಕೆಯಲ್ಲಿ ಚರ್ಚಿಸುವುದರಲ್ಲಿ ತಪ್ಪಿಲ್ಲ. ದೇಶದ ಒಳಗೆ ಮತ್ತು ಹೊರಗೆ ಒಂದೇ ರೀತಿಯ ಸತ್ಯಾಂಶಗಳನ್ನು ಹೇಳಬೇಕು” ಎಂಬುದು ಅವರ ಅಭಿಪ್ರಾಯ.

ವಿದೇಶಿ ಸಂಸ್ಥೆಗಳಿಂದ ಹಣ ಪಡೆಯುತ್ತಿದ್ದಾರೆಯೇ? ವಿರೋಧ ಪಕ್ಷದ ಚಟುವಟಿಕೆಗಳಿಗೆ ವಿದೇಶಿ ಸಂಸ್ಥೆಗಳು ಹಣಕಾಸು ನೆರವು ನೀಡುತ್ತಿವೆ ಅಥವಾ ಪ್ರಭಾವ ಬೀರುತ್ತಿವೆ ಎಂಬ ಆರೋಪಗಳನ್ನೂ ಪಿತ್ರೋಡಾ ತಳ್ಳಿಹಾಕಿದ್ದಾರೆ. ಪ್ರಧಾನಿ ಅಥವಾ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ತಾವು ವಿದೇಶಿ ಸಂಸ್ಥೆಗಳಿಂದ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ತಮ್ಮ ಸಂಪರ್ಕಗಳು ಬುದ್ಧಿಜೀವಿಗಳು, ವಿಜ್ಞಾನಿಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ನ ಭಾರತ್ ಶೃಂಗಸಭೆ: 70 ದೇಶಗಳ 1,000 ಪ್ರತಿನಿಧಿಗಳು ಭಾಗಿ

ರಾಹುಲ್ ಗಾಂಧಿಯ ಅಮೆರಿಕ ಪ್ರವಾಸದಲ್ಲಿ ಏನೇನಿದೆ? ರಾಹುಲ್ ಗಾಂಧಿ ನವೆಂಬರ್ 17 ಮತ್ತು 18ರಂದು ಅಮೆರಿಕದ ಎರಡು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಿತ್ರೋಡಾ ತಿಳಿಸಿದ್ದಾರೆ.

– ನವೆಂಬರ್ 17 – ಕೊಲಂಬಿಯಾ ವಿಶ್ವವಿದ್ಯಾಲಯ: ಜಾಗತಿಕ ವಿದ್ಯಾರ್ಥಿ ಚಳವಳಿಗಳು, ಶಿಕ್ಷಣ, ಉದ್ಯೋಗ, ಆರ್ಥಿಕತೆ, ಪರಿಸರ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ.

– ನವೆಂಬರ್ 18 – ಚಿಕಾಗೋ ವಿಶ್ವವಿದ್ಯಾಲಯ: ಪ್ರಾಧ್ಯಾಪಕ ರಾಬರ್ಟ್ ಪೇಪ್ ಅವರೊಂದಿಗೆ ಭೌಗೋಳಿಕ ರಾಜಕೀಯ, ಅಂತರರಾಷ್ಟ್ರೀಯ ವ್ಯವಹಾರಗಳು ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಸಂವಾದ. ವಿದೇಶ ಪ್ರವಾಸದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಚರ್ಚಿಸುವುದರ ಬಗ್ಗೆ ಬಿಜೆಪಿ ಟೀಕಿಸುತ್ತಿರುವ ಬೆನ್ನಲ್ಲೇ ಈ ಕಾರ್ಯಕ್ರಮಗಳು ನಡೆಯಲಿವೆ.

ಸೋನಿಯಾ ಗಾಂಧಿ ಆತ್ಮಕಥನಕ್ಕೂ ಪಿತ್ರೋಡಾ ಬೆಂಬಲ ಇತ್ತೀಚೆಗೆ ಬಿಡುಗಡೆಯಾದ ಸೋನಿಯಾ ಗಾಂಧಿಯವರ ಆತ್ಮಕಥನ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕುರಿತ ರಾಜಕೀಯ ವಿವಾದದ ಬಗ್ಗೆಯೂ ಪಿತ್ರೋಡಾ ಮಾತನಾಡಿದ್ದಾರೆ. ತಾವು ಇನ್ನೂ ಪುಸ್ತಕವನ್ನು ಓದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆತ್ಮಕಥನದಲ್ಲಿ ಯಾವ ವಿಷಯವನ್ನು ಎಷ್ಟು ವಿವರವಾಗಿ ಬರೆಯಬೇಕು ಎಂಬುದು ಲೇಖಕರ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದಾರೆ.

“ಸೋನಿಯಾ ಗಾಂಧಿ ಒಂದು ವಿಷಯದ ಬಗ್ಗೆ ಮೂರು ಪುಟ ಬರೆಯಲು ಬಯಸಿದರೆ ಅದು ಅವರ ಹಕ್ಕು. ಅವರು ಏನು ಬರೆಯಬೇಕು, ಏನು ಬರೆಯಬಾರದು ಎಂದು ಬೇರೆಯವರು ನಿರ್ಧರಿಸಲು ಸಾಧ್ಯವಿಲ್ಲ” ಎಂಬರ್ಥದಲ್ಲಿ ಪಿತ್ರೋಡಾ ಪ್ರತಿಕ್ರಿಯಿಸಿದ್ದಾರೆ.

ಸೋನಿಯಾ ಗಾಂಧಿಯವರು ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳು ಮತ್ತು ವೈಯಕ್ತಿಕ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸಲು ಧೈರ್ಯ ತೋರಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆಯಿದೆ ಎಂದೂ ಪಿತ್ರೋಡಾ ಹೇಳಿದ್ದಾರೆ.

ಸೋನಿಯಾ ಪುಸ್ತಕದ ಬಗ್ಗೆ ಬಿಜೆಪಿ ಆಕ್ಷೇಪವೇನು? ನವೆಂಬರ್ 10ರಂದು ಬಿಡುಗಡೆಯಾದ ಸೋನಿಯಾ ಗಾಂಧಿಯವರ ಆತ್ಮಕಥನದ ಕೆಲವು ವಿಚಾರಗಳಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. 1975ರ ತುರ್ತು ಪರಿಸ್ಥಿತಿ, 1984ರ ಸಿಖ್ ವಿರೋಧಿ ಹಿಂಸಾಚಾರ, ಬಾಬರಿ ಮಸೀದಿ ಧ್ವಂಸ ಮತ್ತು ಬೋಫೋರ್ಸ್ ವಿವಾದದ ಕುರಿತು ಪುಸ್ತಕದಲ್ಲಿರುವ ವಿವರಣೆಗಳನ್ನು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಪುಸ್ತಕವು ನೆಹರು-ಗಾಂಧಿ ಕುಟುಂಬದ ಹಿಂದಿನ ರಾಜಕೀಯ ತಪ್ಪುಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿಯ ಆರೋಪ. ಆದರೆ ಕಾಂಗ್ರೆಸ್ ನಾಯಕರು ಈ ಟೀಕೆಗಳನ್ನು ರಾಜಕೀಯ ಉದ್ದೇಶದವು ಎಂದು ತಿರಸ್ಕರಿಸಿದ್ದಾರೆ.

ಯುವಕರ ಸಮಸ್ಯೆಗಳತ್ತ ಗಮನ ಹರಿಸಲು ಸಲಹೆ ಪರೀಕ್ಷಾ ಪತ್ರಿಕೆ ಸೋರಿಕೆ, ಉದ್ಯೋಗಾವಕಾಶಗಳ ಕೊರತೆ ಮತ್ತು ದೆಹಲಿಯ ವಾಯುಮಾಲಿನ್ಯದಂತಹ ಸಮಸ್ಯೆಗಳನ್ನು ಉಲ್ಲೇಖಿಸಿದ ಪಿತ್ರೋಡಾ, ಸರ್ಕಾರ ಇವುಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಯುವಜನರಿಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಪರಿಹಾರಗಳು ಮುಖ್ಯ. ರಾಜಕೀಯ ನಾಯಕರು ಪರಸ್ಪರ ಟೀಕೆ ಮಾಡುವುದಕ್ಕಿಂತ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಅವರ ಅಭಿಪ್ರಾಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?