ಟಿಕೆಟ್​ ಪಕ್ಕಾ ಎಂದೇ ನಂಬಿಕೊಂಡಿದ್ದ ಕಾರ್ಯಕರ್ತನಿಗೆ ನಿರಾಸೆ; ಲಖನೌದಲ್ಲಿರುವ ಸಮಾಜವಾದಿ ಪಾರ್ಟಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನ

| Updated By: Lakshmi Hegde

Updated on: Jan 16, 2022 | 3:26 PM

ಲಖನೌದ ವಿಕ್ರಮಾದಿತ್ಯ ಮಾರ್ಗದಲ್ಲಿ ಸಮಾಜವಾದಿ ಪಕ್ಷದ ಪ್ರಧಾನಕಚೇರಿಯಿದೆ. ಇಂದು ಅಲ್ಲಿಗೆ ಹೋದ ಆದಿತ್ಯಠಾಕೂರ್ ಕೂಗಾಡಿದ್ದಾರೆ. ನಂತರ ಏಕಾಏಕಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡಿದ್ದಾರೆ.

ಟಿಕೆಟ್​ ಪಕ್ಕಾ ಎಂದೇ ನಂಬಿಕೊಂಡಿದ್ದ ಕಾರ್ಯಕರ್ತನಿಗೆ ನಿರಾಸೆ; ಲಖನೌದಲ್ಲಿರುವ ಸಮಾಜವಾದಿ ಪಾರ್ಟಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನ
ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತ
Follow us on

ಉತ್ತರಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election)ಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್​ ಸಿಗಲಿಲ್ಲ ಎಂಬ ಕಾರಣಕ್ಕೆ, ಸಮಾಜವಾದಿ ಪಾರ್ಟಿಯ ಕಾರ್ಯಕರ್ತನೊಬ್ಬ ಲಖನೌದಲ್ಲಿರುವ ಪಕ್ಷದ ಪ್ರಧಾನ ಕಚೇರಿ ಎದುರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಇಂದು ನಡೆದಿದೆ. ಇವರು ಸಮಾಜವಾದಿ ಪಕ್ಷದ ಕಚೇರಿ ಎದುರು ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.  ಈ ಕಾರ್ಯಕರ್ತನ ಹೆಸರು ಆದಿತ್ಯ ಠಾಕೂರ್​. ಅಲಿಗಢ್​​ನ ಎಸ್​ಪಿ ಕಾರ್ಯಕರ್ತ. 

ಲಖನೌದ ವಿಕ್ರಮಾದಿತ್ಯ ಮಾರ್ಗದಲ್ಲಿ ಸಮಾಜವಾದಿ ಪಕ್ಷದ ಪ್ರಧಾನಕಚೇರಿಯಿದೆ. ಇಂದು ಅಲ್ಲಿಗೆ ಹೋದ ಆದಿತ್ಯಠಾಕೂರ್ ಕೂಗಾಡಿದ್ದಾರೆ. ನಂತರ ಏಕಾಏಕಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡಿದ್ದಾರೆ. ಅಲ್ಲಿಯೇ ಇದ್ದ ಇತರರು ಮತ್ತು ಪೊಲೀಸ್ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ನಂತರ ಪೊಲೀಸರು ಆದಿತ್ಯ ಠಾಕೂರ್​​ನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿ ಸೇರಿದ ಮಾಧ್ಯಮಗಳ ಎದುರು ಕೂಗಾಡಿದ ಆದಿತ್ಯ ಠಾಕೂರ್​,  ನಾನು ಇಂದು ಇಲ್ಲಿಯೇ ನನ್ನ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ. ನನ್ನನ್ನು ಜೈಲಿಗೆ ಹಾಕಿ ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕು ಎಂದು ತುಂಬ ಭಾವನಾತ್ಮಕವಾಗಿ, ಕಣ್ಣಲ್ಲಿ ನೀರು ಹಾಕುತ್ತ ಹೇಳಿದ್ದಾರೆ.

ಅಷ್ಟೇ ಅಲ್ಲ, ಟಿಕೆಟ್​ ಕೊಡುತ್ತೇನೆ ಎಂದು ಭರವಸೆ ನೀಡಿದ್ದ ಸಮಾಜವಾದಿ ಪಕ್ಷದ ವರಿಷ್ಠರು ನನ್ನನ್ನು ದಿವಾಳಿ ಮಾಡಿದರು. ಆದರೆ ಹೊರಗಿನಿಂದ ಬಂದವರಿಗೇ ಟಿಕೆಟ್​ ಕೊಡುತ್ತಿದ್ದಾರೆ. ನನಗೆ ಯಾವುದೇ ಕ್ರಿಮಿನಲ್​ ಹಿನ್ನೆಲೆಯಲ್ಲಿ, ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಸಮಾಜವಾದಿ ಪಕ್ಷ ಕ್ರಿಮಿನಲ್​ಗಳಿಗೆ ಟಿಕೆಟ್​ ಕೊಡುತ್ತಿದೆ. ನನಗೆ ಕೊಡುತ್ತಿಲ್ಲ ಎಂದೂ ಆದಿತ್ಯಠಾಕೂರ್​ ಕೂಗಾಡಿದ್ದು ವಿಡಿಯೋದಲ್ಲಿ ಕೇಳಿಸುತ್ತದೆ.

ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಲಿಗಢ್​​ನ ಚಹರಾ ಕ್ಷೇತ್ರದಿಂದ ತಮಗೆ ಟಿಕೆಟ್​ ಪಕ್ಕ ಎಂದೇ ಆದಿತ್ಯ ಠಾಕೂರ್​ ಭರವಸೆ ಇಟ್ಟುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಅವರಿಗೆ ಟಿಕೆಟ್ ಕೈ ತಪ್ಪಿದೆ. ಇದು ಗೊತ್ತಾಗುತ್ತಿದ್ದಂತೆ ತೀವ್ರ ದುಃಖಿತರಾದ ಆದಿತ್ಯ ಠಾಕೂರ್​ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾರೆ. ಅಂದಹಾಗೆ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ ಮೈತ್ರಿಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜನವರಿ 13ರಂದು 29 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ. ಈ 29ಜನರ ಪಟ್ಟಿಯಲ್ಲಿ ಸಮಾಜವಾದಿ ಪಕ್ಷದ 10 ಮತ್ತು ಆರ್​ಎಲ್​ಡಿಯ 19 ಜನರ ಹೆಸರು ಇದೆ.

ಇದನ್ನೂ ಓದಿ: Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ

Published On - 3:25 pm, Sun, 16 January 22