Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ

ನನಗೆ ಕಾರು ಡ್ರೈವ್ ಮಾಡುವುದು ಗೊತ್ತಿತ್ತು. ಅದೇ ಧೈರ್ಯದ ಮೇಲೆ ಈ ಬಸ್​ ಓಡಿಸಲು ಮುಂದಾದೆ. ಎಲ್ಲಕ್ಕಿಂತ ಮುಖ್ಯವಾಗಿ ಚಾಲಕನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕಿತ್ತು ಎಂದು ಯೋಗಿತಾ ಹೇಳಿದ್ದಾರೆ.

Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ
ಬಸ್ ಓಡಿಸಿದ ಮಹಿಳೆ
Follow us
| Edited By: Lakshmi Hegde

Updated on:Jan 16, 2022 | 3:07 PM

ಪುಣೆಯ 42 ವರ್ಷ ಮಹಿಳೆಯೊಬ್ಬರು ತಾವು ಮಾಡಿದ ಒಂದು ಒಳ್ಳೆಯ ಕೆಲಸದಿಂದ ಭರ್ಜರಿ ಸುದ್ದಿಯಾಗುತ್ತಿದ್ದಾರೆ. ಬಸ್​​ನಲ್ಲಿ ಹೋಗುತ್ತಿದ್ದಾಗ, ಆ ಬಸ್​​ನ ಚಾಲಕ ತೀವ್ರ ಅಸ್ವಸ್ಥರಾಗುತ್ತಾರೆ.  ಆಗ ಈ ಮಹಿಳೆ ತಮ್ಮ ಸಮಯಪ್ರಜ್ಞೆಯಿಂದ ಬಸ್​ ಓಡಿಸಿ, ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದರೊಂದಿಗೆ ಪ್ರಯಾಣಿಕರನ್ನೂ ಅಪಾಯದಿಂದ ಪಾರು ಮಾಡಿದ್ದಾರೆ.  ಮಹಾರಾಷ್ಟ್ರದ ಪುಣೆಯಲ್ಲಿ ಜನವರಿ 7ರಂದು ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

ಮಹಿಳೆಯ ಹೆಸರು ಯೋಗಿತಾ ಸಾತವ್​. ಯೋಗಿತಾ ಮತ್ತು ಇತರ ಮಹಿಳೆಯರು, ಮಕ್ಕಳೊಂದಿಗೆ ಪುಣೆಯ ಸಮೀಪ ಇರುವ ಶಿರೂರಿನ ಕೃಷಿ ಪ್ರವಾಸೋದ್ಯಮ ಕೇಂದ್ರಕ್ಕೆ ಪಿಕ್ನಿಕ್​ಗೆ ತೆರಳಿದ್ದರು. ಈ ಪಿಕ್ನಿಕ್ ಮುಗಿಸಿ ವಾಪಸ್​ ಬರುತ್ತಿದ್ದ ವೇಳೆ ಚಾಲಕ ಅಸ್ವಸ್ಥನಾಗಿದ್ದಾನೆ. ಅಷ್ಟೇ ಅಲ್ಲ, ನಿರ್ಜನ ಪ್ರದೇಶವೊಂದರಲ್ಲಿ ಮಿನಿ ಬಸ್​ ನಿಲ್ಲಿಸಿ ಪ್ರಜ್ಞೆ ತಪ್ಪಿದ್ದಾನೆ. ಹೀಗೆ, ಚಾಲಕ ಮೂರ್ಛೆ ಹೋದಕೂಡಲೇ ಮುಂದೇನು ಮಾಡಬೇಕು ಎಂದು ತಿಳಿಯದೆ ಬಸ್​​ನಲ್ಲಿದ್ದ ಮಕ್ಕಳು, ಮಹಿಳೆಯರು ಗಾಬರಿಯಾಗಿದ್ದಾರೆ. ಕೆಲವರಂತೂ ಅಳಲೂ ಶುರು ಮಾಡಿದ್ದರು. ಆದರೆ ಯೋಗಿತಾ, ಕೂಡಲೇ ತಾವೇ ಮುಂದಾಗಿ ಬಸ್​ ಓಡಿಸಿದ್ದಾರೆ. ಸುಮಾರು 10 ಕಿಮೀ ದೂರ ಬಸ್​ ಡ್ರೈವ್​ ಮಾಡಿ, ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ ಅವರು, ಬಳಿಕ ಉಳಿದ ಪ್ರಯಾಣಿಕರನ್ನು ಅವರವರ ಮನೆಗಳಿಗೆ ಬಿಟ್ಟಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗಿತಾ, ನನಗೆ ಕಾರು ಡ್ರೈವ್ ಮಾಡುವುದು ಗೊತ್ತಿತ್ತು. ಅದೇ ಧೈರ್ಯದ ಮೇಲೆ ಈ ಬಸ್​ ಓಡಿಸಲು ಮುಂದಾದೆ. ಎಲ್ಲಕ್ಕಿಂತ ಮುಖ್ಯವಾಗಿ ಚಾಲಕನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕಿತ್ತು. ಹಾಗಾಗಿ ಮೊದಲು ಒಂದು ಆಸ್ಪತ್ರೆಗೆ ಹೋದೆವು ಎಂದು ಹೇಳಿದ್ದಾರೆ. ಹೀಗೆ, ಚಾಲಕನ ಜೀವ ಉಳಿಸಿ, ಉಳಿದ ಪ್ರಯಾಣಿಕರನ್ನೂ ಸುರಕ್ಷಿತ ಮಾಡಿದ ಯೋಗಿತಾರ ಬಗ್ಗೆ ನೆಟ್ಟಿಗರು ಅಪಾರ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಇದನ್ನೂ ಓದಿ: Viral Video: 63.7 ಕೆಜಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡು ದಾಖಲೆ ನಿರ್ಮಿಸಿದ ವ್ಯಕ್ತಿ

Published On - 3:06 pm, Sun, 16 January 22

ತಾಜಾ ಸುದ್ದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ