ಕಾಂಗ್ರೆಸ್​ ಹಾಗೂ ಬಿಜೆಪಿ ಒಂದೇ ಸ್ವರದಲ್ಲಿ ಮಾತನಾಡುತ್ತವೆ: ಅಖಿಲೇಶ್​ ಯಾದವ್

|

Updated on: Nov 03, 2023 | 8:26 PM

ಲೋಕಸಭೆ ಚುನಾವಣೆಗೆಂದು ರೂಪುಗೊಂಡಿರುವ ವಿರೋಧ ಪಕ್ಷಗಳ‘ಭಾರತ’ ಎನ್ನುವ ಮೈತ್ರಿಕೂಟದ ಗಂಟು ಚುನಾವಣೆಗೂ ಮುನ್ನವೇ ಸಡಿಲವಾಗತೊಡಗಿದೆ. ಕಾಂಗ್ರೆಸ್​ ಹಾಗೂ ಬಿಜೆಪಿ ಒಂದೇ ಸ್ವರದಲ್ಲಿ ಮಾತನಾಡುತ್ತವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್ ಹೇಳಿದ್ದಾರೆ.

ಕಾಂಗ್ರೆಸ್​ ಹಾಗೂ ಬಿಜೆಪಿ ಒಂದೇ ಸ್ವರದಲ್ಲಿ ಮಾತನಾಡುತ್ತವೆ: ಅಖಿಲೇಶ್​ ಯಾದವ್
ಅಖಿಲೇಶ್ ಯಾದವ್
Image Credit source: India Today
Follow us on

ಲೋಕಸಭೆ ಚುನಾವಣೆಗೆಂದು ರೂಪುಗೊಂಡಿರುವ ವಿರೋಧ ಪಕ್ಷಗಳ‘ಭಾರತ’ ಎನ್ನುವ ಮೈತ್ರಿಕೂಟದ ಗಂಟು ಚುನಾವಣೆಗೂ ಮುನ್ನವೇ ಸಡಿಲವಾಗತೊಡಗಿದೆ. ಕಾಂಗ್ರೆಸ್​ ಹಾಗೂ ಬಿಜೆಪಿ ಒಂದೇ ಸ್ವರದಲ್ಲಿ ಮಾತನಾಡುತ್ತವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್ ಹೇಳಿದ್ದಾರೆ.

ಸಮಾಜವಾದಿಗಳ ಹೋರಾಟವೇ ಬೇರೆ, ಇದು ಕಾಂಗ್ರೆಸ್​ ಹಾಗೂ ಬಿಜೆಪಿ ಜನರ ನಡುವಿನ ಹೋರಾಟ ಈ ಎರಡೂ ಪಕ್ಷಗಳ ತತ್ವಗಳು, ನಿರ್ಧಾರಗಳು ಒಂದೇ ಆಗಿವೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್​ಗೆ ಸೇರಿದರು, ಕಾಂಗ್ರೆಸ್​ನಲ್ಲಿದ್ದವರು ಬಿಜೆಪಿಗೆ ಸೇರಿದರು. ಹೀಗಾಗಿ ಈ ಎರಡೂ ಪಕ್ಷಗಳಲ್ಲಿ ತುಂಬಾ ವ್ಯತ್ಯಾಸಗಳೇನೂ ಇಲ್ಲ ಎಂದರು.

2024ರ ಲೋಕಸಭೆ ಚುನಾವಣೆಗಾಗಿ ವಿರೋಧ ಪಕ್ಷಗಳು ರಚಿಸಿರುವ ಭಾರತ ಮೈತ್ರಿ ಈ ಕ್ಷಣದಲ್ಲಿ ಶಾಂತವಾಗಿದೆ. ಮೈತ್ರಿಕೂಟದ ಮುಂದಿನ ಕಾರ್ಯತಂತ್ರದ ಬಗ್ಗೆ ಈ ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ಇನ್ನೂ ಮೌನವಾಗಿದ್ದಾರೆ.

ಮತ್ತಷ್ಟು ಓದಿ: ಗೊಂದಲ ಮುಂದುವರಿದರೆ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಲ್ಲ: ಕಾಂಗ್ರೆಸ್ ವಿರುದ್ಧ ಅಖಿಲೇಶ್ ಯಾದವ್ ಮತ್ತೆ ವಾಗ್ದಾಳಿ

ಈ ನಡುವೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭಾರತ ಮೈತ್ರಿಕೂಟವನ್ನು ಬಿಟ್ಟು PDAಯನ್ನು ಹಾಡಿ ಹೊಗಳುತ್ತಿದ್ದಾರೆ.
ಜಾತಿ ಗಣತಿ ಕುರಿತು ಮಾತನಾಡಿದ ಅಖಿಲೇಶ್ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಜಾತಿ ಗಣತಿಯನ್ನು ನಿಲ್ಲಿಸಿತ್ತು, ಈಗ ಬಯಸಿದೆ ಎಂದು ಹೇಳಿದ್ದಾರೆ.

ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಪರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎಂದಿಗೂ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದರು. ಪ್ರತಿ ಸಭೆ ಮತ್ತು ಸಾರ್ವಜನಿಕ ಸಭೆಯಲ್ಲಿ, ಅಖಿಲೇಶ್ ಯಾದವ್ PDA ಬಗ್ಗೆ ಮಾತನಾಡುತ್ತಾರೆ ಹೊರತು ಭಾರತ ಮೈತ್ರಿಯ ಬಗ್ಗೆ ಅಷ್ಟಾಗಿ ಮಾತನಾಡುತ್ತಿಲ್ಲ. ರಾದರೂ ಎನ್‌ಡಿಎಯನ್ನು ಸೋಲಿಸಿದರೆ, ಅದು ಪಿಡಿಎಯ ಶಕ್ತಿಯೇ ಸೋಲಿಸುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ