ನೇಪಾಳ ಭೂಕಂಪದಲ್ಲಿ ಮಡಿದವರಿಗಾಗಿ ಪ್ರಧಾನಿ ಸಂತಾಪ: ನೆರವಿಗೆ ಭಾರತ ಸಿದ್ಧ ಎಂದ ಮೋದಿ
ನೇಪಾಳದಲ್ಲಿ ಭೂಕಂಪದಿಂದ ಸಂಭವಿಸಿದ ಪ್ರಾಣಹಾನಿ ಮತ್ತು ಹಾನಿಯಿಂದ ತೀವ್ರ ದುಃಖವಾಗಿದೆ. ಭಾರತವು ನೇಪಾಳದ ಜನರೊಂದಿಗೆ ನಿಂತಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ ಎಂದು ಮೋದಿ ಉಲ್ಲೇಖಿಸಿದ್ದಾರೆ.
ನವದೆಹಲಿ, ನವೆಂಬರ್ 4: ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ (Nepal earthquake) ಉಂಟಾದ ಜೀವಹಾನಿ ಮತ್ತು ಹಾನಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ನೇಪಾಳದ ರಾಜಧಾನಿ ಕಠ್ಮಂಡು ಹಾಗೂ ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 128 ಜನರು ಸಾವನ್ನಪ್ಪಿದ್ದಾರೆ. 140 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ನೇಪಾಳಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೇಪಾಳದಲ್ಲಿ ಭೂಕಂಪದಿಂದ ಸಂಭವಿಸಿದ ಪ್ರಾಣಹಾನಿ ಮತ್ತು ಹಾನಿಯಿಂದ ತೀವ್ರ ದುಃಖವಾಗಿದೆ. ಭಾರತವು ನೇಪಾಳದ ಜನರೊಂದಿಗೆ ನಿಂತಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ದುಃಖತಪ್ತ ಕುಟುಂಬಗಳ ಕುರಿತು ನಮಗೆ ಸಂತಾಪವಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ ಎಂದು ಮೋದಿ ಉಲ್ಲೇಖಿಸಿದ್ದಾರೆ.
Deeply saddened by loss of lives and damage due to the earthquake in Nepal. India stands in solidarity with the people of Nepal and is ready to extend all possible assistance. Our thoughts are with the bereaved families and we wish the injured a quick recovery. @cmprachanda
— Narendra Modi (@narendramodi) November 4, 2023
ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳದ ಜಾಜರಕೋಟ್ ಜಿಲ್ಲೆಯಲ್ಲಿತ್ತು. ನೇಪಾಳದ ಪಶ್ಚಿಮ ಭಾಗದ ಜಾಜರಕೋಟ್ ಮತ್ತು ರುಕುಮ್ ಜಿಲ್ಲೆಗಳು ಭೂಕಂಪದಿಂದ ಹೆಚ್ಚು ತೊಂದರೆಗೊಳಗಾಗಿವೆ ಎಂದು ನೇಪಾಳದ ರಾಜ್ಯ ಟೆಲಿವಿಷನ್ ವರದಿ ಮಾಡಿದೆ.
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಕೂಡ ಭೂಕಂಪದಿಂದ ಉಂಟಾ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸುವಂತೆ ಅವರು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಶನಿವಾರ ಮುಂಜಾನೆ ಅವರು ವೈದ್ಯರು ಮತ್ತು ಸಹಾಯ ಸಾಮಗ್ರಿಗಳೊಂದಿಗೆ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಭೇರಿ ಆಸ್ಪತ್ರೆ, ಕೊಹಲ್‌ಪುರ್ ವೈದ್ಯಕೀಯ ಕಾಲೇಜು, ನೇಪಾಲ್‌ಗುಂಜ್ ಮಿಲಿಟರಿ ಆಸ್ಪತ್ರೆ ಮತ್ತು ಪೊಲೀಸ್ ಆಸ್ಪತ್ರೆಗಳನ್ನು ಭೂಕಂಪ ಪೀಡಿತರಿಗೆ ಮೀಸಲಿಡಲಾಗಿದೆ ಎಂದು ನೇಪಾಳದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ನೇಪಾಲ್‌ಗಂಜ್ ವಿಮಾನ ನಿಲ್ದಾಣ ಮತ್ತು ಮಿಲಿಟರಿ ಬ್ಯಾರಕ್ ಹೆಲಿಪ್ಯಾಡ್‌ನಲ್ಲಿ ಆಂಬ್ಯುಲೆನ್ಸ್ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Nepal Earthquake: ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ, ಸಾವಿನ ಸಂಖ್ಯೆ 129ಕ್ಕೆ ಏರಿಕೆ
ನೇಪಾಳದ ಎಲ್ಲಾ ಹೆಲಿ-ಆಪರೇಟರ್‌ಗಳಿಗೆ ಸನ್ನದ್ಧವಾಗಿರಲು ನಿರ್ದೇಶನ ನೀಡಲಾಗಿದೆ. ಗಾಯಗೊಂಡವರನ್ನು ಏರ್‌ಲಿಫ್ಟ್ ಮಾಡಲು ಅನುಕೂಲವಾ ಮಾಡಿಕೊಡಲು ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ನೇಪಾಳ ಸೇನೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿ ಭೂಕಂಪ ಪೀಡಿತ ಸ್ಥಳಗಳಿಗೆ ರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಧಾವಿಸಿವೆ.
2015 ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪದ ಪರಿಣಾಮ ಸುಮಾರು 9,000 ಜನ ಮೃತಪಟ್ಟಿದ್ದರು.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ