ಅಖಿಲೇಶ್ ಯಾದವ್ ಬೆಂಗಾವಲು ವಾಹನ ಅಪಘಾತ; ಹಲವರಿಗೆ ಗಾಯ

|

Updated on: Feb 03, 2023 | 8:30 PM

ಅಖಿಲೇಶ್ ಹರ್ದೋಯ್‌ನ ಹರ್ಪಾಲ್‌ಪುರದ ಬೈಥಾಪುರ್ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಫರ್ಹತ್ ನಗರ ರೈಲ್ವೆ ಕ್ರಾಸಿಂಗ್ ಬಳಿ, ತಿರುವಿನಲ್ಲಿ ವಾಹನವೊಂದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು ಹಿಂಬಾಲಿಸಿದ ಇತರ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ

ಅಖಿಲೇಶ್ ಯಾದವ್ ಬೆಂಗಾವಲು ವಾಹನ ಅಪಘಾತ; ಹಲವರಿಗೆ ಗಾಯ
ಅಖಿಲೇಶ್ ಯಾದವ್
Follow us on

ಶುಕ್ರವಾರ ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರ ಬೆಂಗಾವಲು ವಾಹನ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಅಪಘಾತಕ್ಕೊಳಗಾಗಿದೆ(Accident). ಕನಿಷ್ಠ ಆರು ವಾಹನಗಳು ಹಾನಿಗೊಳಗಾಗಿದ್ದು, ಅಖಿಲೇಶ್​​ಗೆ ಗಾಯಗಳಾಗಿಲ್ಲ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಅಖಿಲೇಶ್ ಹರ್ದೋಯ್‌ನ ಹರ್ಪಾಲ್‌ಪುರದ ಬೈಥಾಪುರ್ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಫರ್ಹತ್ ನಗರ ರೈಲ್ವೆ ಕ್ರಾಸಿಂಗ್ ಬಳಿ, ತಿರುವಿನಲ್ಲಿ ವಾಹನವೊಂದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು ಹಿಂಬಾಲಿಸಿದ ಇತರ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ.

ಅಖಿಲೇಶ್ ಯಾದವ್ ಅವರನ್ನು ಹಿಂಬಾಲಿಸಿಕೊಂಡು ಬಂದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ಅವರ ಕಾರಿಗೆ ಯಾವುದೇ ಹಾನಿಯಾಗಿಲ್ಲ. “ಇದು ಹಠಾತ್ತನೆ ಸಂಭವಿಸಿದೆ. ಅಪಘಾತ ಹೇಗೆ ಸಂಭವಿಸಿತು ಎಂದು ನಮಗೆ ತಿಳಿದಿಲ್ಲ. ಕೆಲವು ಏಳು-ಎಂಟು ಕಾರುಗಳು ಅಪಘಾತಕ್ಕೊಳಗಾಗಿವೆ ಎಂದು ಗಾಯಗೊಂಡ ವ್ಯಕ್ತಿ ನಸೀಮ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಹಾನಿಗೊಳಗಾದ ಕಾರನ್ನು ತೋರಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ವಿಡಿಯೋಗಳಲ್ಲಿ ಕಾಣುವಂತೆ ಹಿಂದಿನಿಂದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದವು. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಖಿಲೇಶ್ ಅವರನ್ನು ಸುರಕ್ಷಿತವಾಗಿ  ಗಮ್ಯಸ್ಥಾನಕ್ಕೆ ಕರೆದೊಯ್ಯಲಾಯಿತು.

ಇದನ್ನೂ ಓದಿ:ನಾವು ಲಡಾಖ್ ಜನರು ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗ ಉತ್ತಮವಾಗಿದ್ದೆವು: ಸೋನಮ್ ವಾಂಗ್ಚುಕ್

ಗಾಯಗೊಂಡ ಸಮಾಜವಾದಿ ಪಕ್ಷದ  ಕಾರ್ಯಕರ್ತರಾದ ನಸೀಮ್ ಖಾನ್, ಮುನೇಂದ್ರ ಯಾದವ್, ಮತ್ತು ವಾಸಿಂ ವರ್ಸಿ, 60, ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಇನ್ನೋರ್ವ  ಕಾರ್ಯಕರ್ತ ಕಪ್ತಾನ್ ಸಿಂಗ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯಲ್ಲಿ ಮುಖ್ಯ ಬೆಂಗಾವಲು ಪಡೆಯ ವಾಹನಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇನ್ಸ್‌ಪೆಕ್ಟರ್ ಶೇಷ್ನಾಥ್ ಸಿಂಗ್ ಹೇಳಿದ್ದಾರೆ.

ಅಪಘಾತದಲ್ಲಿ ಏಳಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ ಎಂದು ಹರ್ದೋಯ್ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಯಾದವ್ ತಿಳಿಸಿದ್ದಾರೆ. “ಅಖಿಲೇಶ್ ಬೆಂಗಾವಲು ಪಡೆಯ ಹಿಂದೆ ವೇಗವಾಗಿ ಚಾಲನೆ ಮಾಡುತ್ತಿದ್ದಾಗ ಒಂದು ಕಾರು  ಒಂದು ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:38 pm, Fri, 3 February 23