ಸಲಿಂಗ ವಿವಾಹ: ಬಾಂಗ್ಲಾದೇಶ ಮಹಿಳೆಯನ್ನು ಮದುವೆಯಾದ ಭಾರತೀಯ ಮಹಿಳೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 10, 2022 | 6:19 PM

ಕೆನಾಡದಲ್ಲಿ ವಾಸವಾಗಿದ್ದ ಭಾರತದ ಸುಬಿಕ್ಷಾ ಅಲ್ಲಿಯೇ ವಾಸವಾಗಿದ್ದ ಬಾಂಗ್ಲಾದೇಶದ ಹಿಂದೂ ಮಹಿಳೆ ಟೀನಾ ದಾಸ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಈ ಸಲಿಂಗ ಜೋಡಿಗಳು ಮದುವೆಯಾಗಿದ್ದಾರೆ.  ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಸಲಿಂಗ ವಿವಾಹ: ಬಾಂಗ್ಲಾದೇಶ ಮಹಿಳೆಯನ್ನು ಮದುವೆಯಾದ ಭಾರತೀಯ ಮಹಿಳೆ
Same-Sex Marriage
Follow us on

ಸುಭಿಕ್ಷಾ ಸುಬ್ರಮಣಿ ಮತ್ತು ಟೀನಾ ದಾಸ್ ಅವರು ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ಸಾಂಪ್ರದಾಯಿಕ ತಮಿಳು ಬ್ರಾಮಿನ್ ಶೈಲಿಯಲ್ಲಿ ಮದುವೆಯಾಗಿದ್ದರು ಮತ್ತು ಇದು ನಮ್ಮ ಕನಸು ಎಂದು ಹೇಳಿದ್ದಾರೆ. ಸುಬಿಕ್ಷಾ ಮತ್ತು ಆಕೆಯ ಪೋಷಕರು ಕೆನಡಾದ ಕ್ಯಾಲ್ಗರಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಸುಬಿಕ್ಷಾ ಅಲ್ಲಿಯೇ ಬಾಂಗ್ಲಾದೇಶಿ ಹಿಂದೂ ಮಹಿಳೆ ಟೀನಾ ದಾಸ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಸಲಿಂಗ ಜೋಡಿಗಳು ಮದುವೆಯಾಗಿದ್ದಾರೆ.

ಸುಭಿಕ್ಷಾ ಮತ್ತು ಟೀನಾ ಒಂದು ಕನಸಿನ ಪ್ರೇಮಕಥೆಯಾಗಿದೆ. ದ್ವಿಲಿಂಗಿ ಎಂದು ಗುರುತಿಸಿಕೊಂಡಿರುವ ಸುಬಿಕ್ಷಾ, ಕೆನಡಾದಲ್ಲಿ ಡೇಟಿಂಗ್ ಆಪ್‌ನಲ್ಲಿ ಟೀನಾ ಅವರನ್ನು ಭೇಟಿಯಾಗಿದ್ದರು. ಆರು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ದಂಪತಿಗಳು ಧಾರ್ಮಿಕ ತಮಿಳು ಬ್ರಾಹ್ಮಣ ವಿವಾಹದಲ್ಲಿ ಮದುವೆಯಾಗಲು ನಿರ್ಧರಿಸಿದರು. ಸುಭಿಕ್ಷಾ ಮದುವೆಯನ್ನು ಭಾರತದಲ್ಲಿ ಮಾಡಬೇಕೆಂದು ಹೇಳಿದ್ದರು. ನನ್ನ ಕುಟುಂಬವು ಭಾರತದಿಂದ ಬಂದಿದೆ ಮತ್ತು ನಮ್ಮ ವಾಸ್ತವ ನೆಲೆ ಇಲ್ಲಿಯೇ. ನನ್ನ ಹತ್ತಿರದ ಕುಟುಂಬ ಮಾತ್ರ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ನನ್ನ ಸಹೋದರನ ಮದುವೆ ಭಾರತದಲ್ಲಿ ಆಗಿದೆ ಮತ್ತು ನಾನು ಒಬ್ಬ ಹುಡುಗನನ್ನು ಮದುವೆಯಾಗಬೇಕಾದರೆ ನನ್ನ ಮದುವೆಯು ಭಾರತದಲ್ಲಿರುತ್ತಿತ್ತು. ನಾನು ಮಿಥುಮ್ ಶೈಲಿಯಲ್ಲಿ ತಮಿಳು ಸಾಂಪ್ರದಾದಂತೆ ಮದುವೆಯಾಗುವ ಆಸೆ ಎಂದಿದ್ದಾರೆ.

ಈ ಮದುವೆಯ ವಿರುದ್ಧ ಯಾರಾದರೂ ವಿರೋಧ ಮಾಡಬಹುದು ಎಂಬ ಆತಂಕ ಅವರದ್ದು, ಆದರೆ ಸುಭಿಕ್ಷಾಗೆ ತನ್ನ ಕುಟುಂಬ ಮತ್ತು ಸಂಬಂಧಿಕರು ತನ್ನ ಮದುವೆಗೆ ಬರುವುದು ಕನಸಾಗಿತ್ತು. ನಾವು ಕೆನಡಾದಲ್ಲಿ ಮದುವೆಯಾಗಲು ಹೋದರೆ ನನ್ನ ಕುಟುಂಬದವರು ಯಾರೂ ಇಲ್ಲಿ ಇಲ್ಲ. ನನ್ನ ಅಜ್ಜಿ ಕೂಡ ಇಲ್ಲಿ ಇಲ್ಲ. ನಮ್ಮ ಮದುವೆಗೆ ಎಲ್ಲರ ಬೆಂಬಲ ಇತ್ತು. ಯಾವುದೇ ಅಡೆತಡೆಗಳು ಬಂದಿಲ್ಲ ಎಂದು ಸುಭಿಕ್ಷಾ ಹೇಳಿದರು.

ಟೀನಾ ಕೂಡ ತನ್ನ ಸಂಗಾತಿಯನ್ನು ಪರವಾಗಿ ನಿಂತಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ನಾನು ತಮಿಳುನಾಡಿಗೆ ಬಂದಿರುವುದು. ಈ ಬಗ್ಗೆ ನನಗೆ ಹೇಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳಬೇಕು ಎಂದು ತಿಳಿದಿಲ್ಲ. ಅವಳ ಇಡೀ ಕುಟುಂಬವು ಅಲ್ಲಿಯೇ ಇತ್ತು. ನಮ್ಮ ಮದುವೆಯು ಅದ್ಭುತವಾಗಿತ್ತು. ನಮ್ಮ ಮದುವೆಯಲ್ಲಿ ಮದುವೆಯ ಎಲ್ಲ ಶಾಸ್ರ್ತಗಳನ್ನು ಸರಿಯಾಗಿ ಪಾಲಿಸಿದ್ದೇವೆ, ಆದರೆ ಪೂಜೆ ಪಂಡಿತರನ್ನು ಹುಡುಕುವುದು ಅತ್ಯಂತ ಸವಾಲಾಗಿತ್ತು. ಕೆಲವರಲ್ಲಿ ಕೇಳಿದ ನಂತರ ಒಬ್ಬ ಕ್ವೀರ್ ಸಮುದಾಯದ ಸಂಸ್ಕೃತ ವಿದ್ವಾಂಸರಾದ ಪಂಡಿತರನ್ನು ಸಿಕ್ಕರು ಎಂದು ಹೇಳೀದ್ದಾರೆ.

ನಮ್ಮ ಮದುವೆ ಬಂದ ಸಂಸ್ಕೃತ ಪುರೋಹಿತರು, ಅವರು ವಿವಾಹ ಶಾಸ್ತ್ರದ ಪ್ರತಿಯೊಂದನ್ನು ವಿವರಿಸಿದ್ದಾರೆ. ಜೊತೆಗೆ ಲಿಂಗಭೇದವಿಲ್ಲ ಎಲ್ಲವನ್ನು ಸರಿಯಾಗಿ ವಿವರಿಸಿದ್ದಾರೆ. ಬಾಂಗ್ಲಾದೇಶದ ಹಿಂದೂ ಸಂಪ್ರದಾಯ ಕುಟುಂಬದಿಂದ ಬಂದ ಟೀನಾ, 19 ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯನ್ನು ವಿವಾಹವಾದರು. ನಾನು 19 ವರ್ಷದವನಾಗಿದ್ದಾಗ ನಾನು ಮದುವೆಯಾಗಿದ್ದೇನೆ ಮತ್ತು ಬಾಂಗ್ಲಾದೇಶದ ಜನರು ತುಂಬಾ ಸಂಪ್ರದಾಯಸ್ಥರು ನಾನು ಸಲಿಂಗಕಾಮಿಯಾಗಿರುವುದು ಎಂಬ ಆರೋಪ ಹಾಕಿದ್ದರು. ನಾನು ಹುಡುಗಿಯ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಕುಟುಂಬದವರಿಗೆ ತಿಳಿದು, ನನಗೆ ಮದುವೆಯಾದರೆ ಎಲ್ಲವೂ ಸರಿಯಾಗುತ್ತದೆ ಎಂಬ ಕಲ್ಪನೆ ಅವರದ್ದು, ನನಗೆ ಮಾತನಾಡಲು ಯಾರೂ ಇರಲಿಲ್ಲ. ಮದುವೆಯಾದ 4 ಅಥವಾ 5 ವರ್ಷಗಳವರೆಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ನನಗೆ ಕುಟುಂಬ ಮತ್ತು ನನ್ನ ಜೀವನ ಇದರಲ್ಲಿ ಒಂದನ್ನು ನಾನು ಆಯ್ಕೆ ಮಾಡಬೇಕಿತ್ತು. ನಾನು ನನ್ನ ಭಾವನೆಗಳನ್ನು ತ್ಯಾಗ ಮಾಡುವ ವ್ಯಕ್ತಿ ಜೊತೆಗೆ ಜೀವನ ಮಾಡುತ್ತಿದ್ದೇನೆ ಎಂದು ತಿಳಿದಿತ್ತು. ನನಗೆ ಇದು ಒಂದು ರೀತಿಯ ಕಾಯಿಲೆ ಎಂದು ಅನಿಸುತ್ತಿತ್ತು. ಮಗು ಮಾಡಿಕೊಳ್ಳುವ ವಿಷಯದಲ್ಲೂ ನಾನು ಗರ್ಭಧರಿಸಲು ಚಿಕಿತ್ಸೆಯ ಮೂಲಕ ಹೋಗಬೇಕು ಎಂದಾಗ ನಾನು ಒಪ್ಪಿರಲಿಲ್ಲ, ಇದರಿಂದ ನಾನು ದೂರ ಹೋಗಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಮೊದಲು ಪುರುಷರೊಂದಿಗೆ ಡೇಟ್ ಮಾಡಿದ ಸುಬಿಕ್ಷಾ, ಮಹಿಳೆ ಸಂಗಾತಿಯನ್ನು ಹೊಂದುವುದು ಸರಿ ಎಂದು ತನ್ನ ಕುಟುಂಬ ಅರ್ಥಮಾಡಿಸಬೇಕು ಎಂದು LGBTQ ಸಮುದಾಯದ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಲಹೆಗಾರರನ್ನು ಭೇಟಿಯಾಗುವಂತೆ ತನ್ನ ಪೋಷಕರಿಗೆ ಹೇಳಿದೆ. ನನ್ನ ಹೆತ್ತವರಿಗೆ ನನ್ನ ಮಾನಸಿಕ ಆರೋಗ್ಯವು ಬಹಳ ಮುಖ್ಯ ಮತ್ತು ಈ ಬಗ್ಗೆ ಹೊರಗಿನವರು ಏನು ಮಾತನಾಡುತ್ತಾರೆ ಎಂಬ ಭಯ. ನನ್ನ ಅತ್ತಿಗೆ ಮತ್ತು ಸಹೋದರ ನನ್ನ ಪೋಷಕರನ್ನು ಚಿಕಿತ್ಸಕರಿಗೆ ಸಂಪರ್ಕಿಸಿದರು ಮತ್ತು ಇದು ನಿಜವಾಗಿಯೂ ಸಹಾಯ ಮಾಡಿದೆ. ನಮ್ಮ ಪೋಷಕರು ಸಹ ಸಹಾಯ ಮಾಡಿದರು. ಟೀನಾ ಅವರನ್ನು ನನಗೆ ಸಂಗಾತಿಯಾಗಿ ಪಡೆಯುವ ಬಗ್ಗೆ ಒಪ್ಪಿಕೊಂಡರು ಎಂದು ಸುಬಿಕ್ಷಾ ಹೇಳಿದರು.

 

Published On - 6:19 pm, Sat, 10 September 22