Bharat Jodo Yatra: ಬಿಜೆಪಿ ರಾಜ್ಯಗಳಲ್ಲಿ ತಮ್ಮ ವಾಹನಗಳಿಗೆ ಇಂಧನ ತುಂಬಿಸಿ, ರಾಹುಲ್ ಗಾಂಧಿಗೆ ಸಲಹೆ ನೀಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಬಿಜೆಪಿ ರಾಜ್ಯಗಳಲ್ಲಿ ತಮ್ಮ ವಾಹನಗಳಿಗೆ ಇಂಧನ ತುಂಬಿಸುವಂತೆ ಕೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕಾಂಗ್ರೆಸ್‌ಗೆ ಇದು ನನ್ನ ಸಲಹೆಯ ಮಾತು ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಜ್ಯಗಳಲ್ಲಿ ತಮ್ಮ ವಾಹನಗಳಿಗೆ ಇಂಧನ ತುಂಬಿಸುವಂತೆ ಕೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು, ಬೃಹತ್ ಪರಿವಾರ ಮತ್ತು ಐಷಾರಾಮಿ ವಾಹನಗಳ ಬೆಂಗಾವಲು ಪಡೆಯನ್ನು ಗಮನಿಸಿದರೆ, ಅವರ ಯುವ ನಾಯಕ ಸಾಮಾನ್ಯವಾಗಿ ಪ್ರಯಾಣಿಸುತ್ತಿದ್ದಾರೆ ಅವರು ಈ ಸಲಹೆಗಾಗಿ ನನಗೆ ಧನ್ಯವಾದ ಹೇಳಬಹುದು ಎಂದು ಟ್ವೀಟ್ ಮಾಡಿದ್ದಾರೆ. ಯಾವೆಲ್ಲ ರಾಜ್ಯದಲ್ಲಿ ಇಂಧನ ತುಂಬಿಸಿ ಕಾಂಗ್ರೆಸ್ ಉಳಿತಾಯ ಮಾಡಬಹುದು ಎಂಬ ಪಟ್ಟಿಯನ್ನು ಸಚಿವರು ನೀಡಿದ್ದಾರೆ. ತೆಲಂಗಾಣ ಮತ್ತು ಜಮ್ಮು-ಕಾಶ್ಮೀರ ನಡುವೆ ಲೀಟರ್‌ಗೆ 14.5 ರೂ. ರಷ್ಟು ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 7ರಂದು ಅಧಿಕೃತವಾಗಿ ಚಾಲನೆ ನೀಡಿದ ಭಾರತ್ ಜೋಡೋ ಯಾತ್ರೆಯ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನಿರಂತರ ವಾಗ್ದಾಳಿಗಳು ನಡೆಯುತ್ತಿದೆ. ರಾಹುಲ್ ಗಾಂಧಿಯವರ ಬರ್ಬೆರಿ ಟೀ ಶರ್ಟ್ ಮತ್ತು ಇವರಿಗೆ ರಾತ್ರಿ ಉಳಿಯಲು 5-ಸ್ಟಾರ್ ಕಂಟೈನರ್‌ಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ಸಮರಕ್ಕೆ ಕಾರಣವಾಗಿದೆ.
A word of advice for Congress:It can take a leaf out of the common citizen’s book by refuelling in BJP served states before entering states which have turned a blind eye to fuel price reduction. For example, there’s a difference of as much as ₹14.5/ltr between Telangana & J&K. pic.twitter.com/DkG57Phcja
— Hardeep Singh Puri (@HardeepSPuri) September 9, 2022
ಕಾಂಗ್ರೆಸ್ ನಾಯಕರು ರಾತ್ರಿ ಉಳಿದುಕೊಳ್ಳಲು ಕಂಟೈನರ್‌ಗಳು, ಏಕೆಂದರೆ ಅವರು ಯಾವುದೇ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವುದಿಲ್ಲ. ವಿವಿಧ ಸೌಲಭ್ಯಗಳನ್ನು ಹೊಂದಿರುವ ಸುಮಾರು 60 ಕಂಟೈನರ್‌ಗಳು, 10 ಆಸನಗಳ ಕಾನ್ಫರೆನ್ಸ್ ಸೌಲಭ್ಯ, ಮೊಬೈಲ್ ಶೌಚಾಲಯಗಳು ಮತ್ತು ಊಟದ ಪ್ರದೇಶವು ಯಾತ್ರಾ ಶಿಬಿರದ ಕೆಲವು ವೈಶಿಷ್ಟ್ಯಗಳಾಗಿವೆ, ಇದು ಪ್ರತಿದಿನ ಬೇರೆ ಬೇರೆ ಸ್ಥಳದಲ್ಲಿ ಇರುತ್ತದೆ.
Published On - 7:02 pm, Sat, 10 September 22