ಸ್ಯಾಮ್​ಸಂಗ್​ ಡಿಸ್​​ಪ್ಲೇ ತಯಾರಿಕಾ ಘಟಕ ಚೀನಾದಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್​!

|

Updated on: Dec 12, 2020 | 9:51 PM

ಈ ಘಟಕ ಸ್ಥಾಪನೆಯಿಂದ ನೇರವಾಗಿ 510 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಇದಲ್ಲದೆ, ನೂರಾರು ಮಂದಿಗೆ ಪರೋಕ್ಷವಾಗಿ ಕೆಲಸ ದೊರೆಯಲಿದೆ ಎಂದು ಸರ್ಕಾರ ಹೇಳಿದೆ.

ಸ್ಯಾಮ್​ಸಂಗ್​ ಡಿಸ್​​ಪ್ಲೇ ತಯಾರಿಕಾ ಘಟಕ ಚೀನಾದಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್​!
ಸ್ಯಾಮ್​ಸಂಗ್ (ಸಂಗ್ರಹ ಚಿತ್ರ)
Follow us on

ನವದೆಹಲಿ: ಪ್ರಮುಖ ಸ್ಮಾರ್ಟ್​​ಫೋನ್​ ತಯಾರಿಕಾ ಸಂಸ್ಥೆ ಸ್ಯಾಮ್​ಸಂಗ್​ ತನ್ನ ಮೊಬೈಲ್​ ಮತ್ತು ಐಟಿ ಡಿಸ್​​ಪ್ಲೇ ನಿರ್ಮಾಣ ಘಟಕವನ್ನು ಚೀನಾದಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬಂದಿದೆ. ಇದಕ್ಕಾಗಿ 4,825 ಕೋಟಿ ರೂಪಾಯಿ ಹೂಡಿಕೆ ಮಾಡಲು ಕಂಪೆನಿ ಮುಂದಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು. ಈ ವೇಳೆ ಉತ್ತರ ಪ್ರದೇಶದಲ್ಲಿ ಸ್ಯಾಮ್​ಸಂಗ್​ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಉತ್ತರ ಕೊರಿಯಾದ ದೊಡ್ಡ ಕಂಪೆನಿ ಭಾರತದಲ್ಲಿ ಇಷ್ಟು ಬೃಹತ್​​ ಮಟ್ಟದಲ್ಲಿ ಘಟಕ ಸ್ಥಾಪನೆ ಮಾಡುತ್ತಿರುವುದು ಇದೇ ಮೊದಲು ಎಂದು ಹೆಮ್ಮೆ ವ್ಯಕ್ತಪಡಿಸಿದೆ.

ಈ ಘಟಕ ಸ್ಥಾಪನೆಯಿಂದ ನೇರವಾಗಿ 510 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಇದಲ್ಲದೆ, ನೂರಾರು ಮಂದಿಗೆ ಪರೋಕ್ಷವಾಗಿ ಕೆಲಸ ದೊರೆಯಲಿದೆ ಎಂದು ಸರ್ಕಾರ ಹೇಳಿದೆ.

ಮೊಬೈಲ್​, ಟಿವಿ, ಟ್ಯಾಬ್ಲೆಟ್​ ಹಾಗೂ ವಾಚ್​ ಸೇರಿ ಇತರ ಇಲೆಕ್ಟ್ರಾನಿಕ್​ ವಸ್ತುಗಳಿಗೆ ಡಿಸ್​ಪ್ಲೇ ಅತ್ಯಗತ್ಯ. ಸ್ಯಾಮ್​ಸಂಗ್​ ತಯಾರಿಸುವ ಒಟ್ಟು ಡಿಸ್​ಪ್ಲೇ ಪೈಕಿ ಶೇ. 70 ಉತ್ತರ ಕೊರಿಯಾ, ವಿಯೆಟ್ನಾಂ ಹಾಗೂ ಚೀನಾದಲ್ಲಿ ಸಿದ್ಧವಾಗುತ್ತಿತ್ತು. ಈಗ ಚೀನಾದಲ್ಲಿರುವ ಈ ಘಟಕ ಭಾರತಕ್ಕೆ ಶಿಫ್ಟ್​ ಆಗಲಿದೆ.  ಈಗಾಗಲೇ ಸ್ಯಾಮ್​ಸಂಗ್​ ನೋಯ್ಡಾದಲ್ಲಿ ಮೊಬೈಲ್​ ತಯಾರಿಕಾ ಘಟಕವನ್ನು ಹೊಂದಿದೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟನೆ ಮಾಡಿದ್ದರು.

ಕಂಪನಿಯು ತನ್ನ ಉತ್ಪಾದಕಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಹೇರಳವಾಗಿ ರಫ್ತು ಮಾಡುವ ಗುರಿ ಹೊಂದಿದೆ. ಜೊತೆಗೆ ಭಾರತದಲ್ಲಿ ಕಾರ್ಮಿಕ ವೆಚ್ಚಗಳು ಅತ್ಯಂತ ಕಡಿಮೆ ಇರುವುದರಿಂದ ಸ್ಯಾಮ್‌ಸಂಗ್ ತನ್ನ ಉತ್ಪದನಾ ಘಟಕಗಳನ್ನು ಭಾರತದಲ್ಲಿ ನಿರ್ಮಿಸಲು ಯೋಚಿಸಿದೆ ಎನ್ನಲಾಗಿದೆ.

Smartphone ಉತ್ಪಾದನೆ ವಿಯೆಟ್ನಾಂನಿಂದ ಭಾರತಕ್ಕೆ ಶಿಫ್ಟ್ ಮಾಡಲು ಸ್ಯಾಮ್ಸಂಗ್ ರೆಡಿ!