60 ಕೋಟಿ ಡೋಸ್ Covid-19 ಲಸಿಕೆ ವಿತರಣೆಗೆ ಸಜ್ಜಾಗಿದೆ ದೇಶ

ಸಾಂಪ್ರದಾಯಿಕ ಕೋಲ್ಡ್ ಚೈನ್ ವ್ಯವಸ್ಥೆಗಳ ಮೂಲಕ 60 ಕೋಟಿ ಡೋಸ್ ಕೊರೊನಾ ವೈರಸ್ ಲಸಿಕೆಯನ್ನು ಅತ್ಯಂತ ದುರ್ಬಲ ಜನರಿಗೆ ತಲುಪಲು ಭಾರತವು ಚುನಾವಣಾ ವ್ಯವಸ್ಥೆಯನ್ನು ಬಳಸಲಿದೆ.

60 ಕೋಟಿ ಡೋಸ್ Covid-19 ಲಸಿಕೆ ವಿತರಣೆಗೆ ಸಜ್ಜಾಗಿದೆ ದೇಶ
ಸಾಂದರ್ಭಿಕ ಚಿತ್ರ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 13, 2020 | 11:34 AM

ದೆಹಲಿ: ಭಾರತವು ಕೊವಿಡ್ ಲಸಿಕಾ ಘಟಕಗಳನ್ನು ರೂಪಿಸಲು ಸಜ್ಜಾಗುತ್ತಿದೆ. ಪ್ರತಿ ಲಸಿಕಾ ಘಟಕದಲ್ಲಿ ದಿನಕ್ಕೆ 100 ಜನರಿಗೆ ಲಸಿಕೆ ನೀಡುವ ಯೋಜನೆ ಹಮ್ಮಿಕೊಂಡಿದೆ. ಸಾಕಷ್ಟು ಸಂಪನ್ಮೂಲಗಳು ಲಭ್ಯವಿದ್ದರೆ ಒಂದು ಘಟಕದಲ್ಲಿ 200 ಜನರಿಗೆ ಲಸಿಕೆ ನೀಡಬಹುದು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಆರೋಗ್ಯ ಸಚಿವಾಲಯ ಹೊರಡಿಸಿದ ಎಸ್​ಒಪಿ (ಸ್ಟಾಂಡರ್ಡ್​ ಆಪರೇಟಿಂಗ್ ಪ್ರೊಸಿಜರ್) ದಾಖಲೆಯಲ್ಲಿ ಸರ್ಕಾರ ಸೂಚನೆ ನೀಡಿದೆ.

ಲಸಿಕಾ ಘಟಕದ ಜೊತೆ ಪ್ರತ್ಯೇಕವಾದ 5 ಜನರ ತಂಡ ಇರುತ್ತದೆ. ಇದರಲ್ಲಿ ಓರ್ವ ಲಸಿಕೆ ಅಧಿಕಾರಿ ಮತ್ತು ನಾಲ್ವರು ವ್ಯಾಕ್ಸಿನೇಷನ್ ಅಧಿಕಾರಿಗಳು. ಲಸಿಕಾ ಘಟಕಕ್ಕೆಂದು ವ್ಯಾಕ್ಸಿನ್ ಕೊಠಡಿ, ವೀಕ್ಷಣೆ ಮತ್ತು ವೇಟಿಂಗ್ ರೂಂ ಎಂಬ 3 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಎಸ್​ಒಪಿ ಹೇಳಿದೆ.

ಆರೋಗ್ಯ ಸಚಿವಾಲಯ ರೂಪಿಸಿರುವ ಯೋಜನೆಯ ಪ್ರಕಾರ, ಕೊರೊನಾ ವೈರಸ್ ಲಸಿಕೆಯನ್ನು ಮೊದಲು 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಬಳಿಕ, ಕೊರೊನಾ ಸೋಂಕು ತಡೆಯಲು ಶ್ರಮಿಸುತ್ತಿರುವ ಇತರ 2 ಕೋಟಿ ಮಂದಿಗೆ ಆದ್ಯತೆ ನೀಡಲಾಗುವುದು.

ಮೊದಲ ಹಂತದಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 1 ಕೋಟಿ ಜನರಿಗೆ ಲಸಿಕೆ ನೀಡಲು ಕೇಂದ್ರ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಚುನಾವಣೆಗಳಲ್ಲಿ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಆಧರಿಸಿ ಲಸಿಕೆ ವಿತರಣೆಗೆ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತದೆ.

ಸಾಂಪ್ರದಾಯಿಕ ಕೋಲ್ಡ್ ಚೈನ್ ವ್ಯವಸ್ಥೆಗಳ ಮೂಲಕ 60 ಕೋಟಿ ಡೋಸ್ ಕೊರೊನಾ ವೈರಸ್ ಲಸಿಕೆಯನ್ನು ಅತ್ಯಂತ ದುರ್ಬಲ ಜನರಿಗೆ ತಲುಪಲು ಭಾರತವು ಚುನಾವಣಾ ವ್ಯವಸ್ಥೆಯನ್ನು ಬಳಸಲಿದೆ. ಈ ಕುರಿತು ಕೋವಿಡ್ ವ್ಯಾಕ್ಸಿನ್ ಆಡಳಿತ ತಜ್ಞರ ಗುಂಪಿನ ಮುಖ್ಯಸ್ಥರಾಗಿರುವ ವಿ.ಕೆ. ಪೌಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊವಿಡ್​19 ಲಸಿಕೆಯ ಕುರಿತು ಸಲಹೆ ನೀಡಿದ್ದಾರೆ.

2-8 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಸರ್ಕಾರ ಪೂರೈಸಿದೆ ಎಂದು ವಿ.ಕೆ. ಪೌಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್​ ವರದಿ ಮಾಡಿದೆ.

Corona Vaccine ಅಮೆರಿಕಾದಲ್ಲಿ ಬಳಕೆಗೆ ಲಭ್ಯವಾ ಫೈಜರ್, ಬಯೋಎನ್​ಟೆಕ್ ಲಸಿಕೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada