ಸಾಂಗ್ಲಿ: ಹತ್ತನೇ ತರಗತಿಯಲ್ಲಿ ಶೇ.92ರಷ್ಟು ಅಂಕ ಗಳಿಸಿದ್ರೂ ಮಗಳನ್ನು ಹೊಡೆದು ಕೊಂದ ತಂದೆ
ಹತ್ತನೇ ತರಗತಿಯಲ್ಲಿ ನಿರೀಕ್ಷಿತ ಅಂಕ ಪಡೆಯದಿದ್ದಕ್ಕೆ ತಂದೆಯೊಬ್ಬ ಮಗಳನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಕಡಿಮೆ ಅಂಕ ಗಳಿಸಿದ್ದಕ್ಕೆ 16 ವರ್ಷದ ಮಗಳನ್ನು ತಂದೆಯೊಬ್ಬ ನಿರ್ದಯವಾಗಿ ಹತ್ಯೆ ಮಾಡಿದ್ದಾನೆ. ಶನಿವಾರ ರಾತ್ರಿ ಅಟ್ಟಾಡಿ ತಹಸಿಲ್ನ ನೆಲಕರಂಜಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಧೋಂಡಿರಾಮ್ ಭೋಸಲೆ ಸ್ವತಃ ಶಾಲಾ ಶಿಕ್ಷಕ, ತನ್ನ ಮಗಳ ಸಾಧನೆ ಬಗ್ಗೆ ಅತೃಪ್ತನಾಗಿದ್ದ.

ಸಾಂಗ್ಲಿ, ಜೂನ್ 24: ಹತ್ತನೇ ತರಗತಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಗಳಿಸದಿದ್ದಕ್ಕೆ ತಂದೆಯೊಬ್ಬ ಮಗಳನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರ(Maharashtra)ದ ಸಾಂಗ್ಲಿಯಲ್ಲಿ ನಡೆದಿದೆ. ಕಡಿಮೆ ಅಂಕ ಗಳಿಸಿದ್ದಕ್ಕೆ 16 ವರ್ಷದ ಮಗಳನ್ನು ತಂದೆಯೊಬ್ಬ ನಿರ್ದಯವಾಗಿ ಹತ್ಯೆ ಮಾಡಿದ್ದಾನೆ. ಶನಿವಾರ ರಾತ್ರಿ ಅಟ್ಟಾಡಿ ತಹಸಿಲ್ನ ನೆಲಕರಂಜಿ ಗ್ರಾಮದಲ್ಲಿ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿ ಧೋಂಡಿರಾಮ್ ಭೋಸಲೆ ಸ್ವತಃ ಶಾಲಾ ಶಿಕ್ಷಕ, ತನ್ನ ಮಗಳ ಸಾಧನೆ ಬಗ್ಗೆ ಅತೃಪ್ತನಾಗಿದ್ದ. ಆಕೆ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಗಳಿಸಿದ್ದಳು. ಇಬ್ಬರ ನಡುವೆ ಜಗಳವೂ ಆಗಿತ್ತು. ಆಕೆ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.92.60 ಅಂಕಗಳನ್ನು ಗಳಿಸಿದ್ದು, ನೀಟ್ಗೆ ತಯಾರಿ ನಡೆಸುತ್ತಿದ್ದಳು.
ಆರೋಪಿಯು ತನ್ನ ಪತ್ನಿ ಹಾಗೂ ಮಗನ ಎದುರೇ ಹಿಟ್ಟು ತಯಾರಿಸಲು ಬಳಸುವ ರುಬ್ಬುವ ಕಲ್ಲಿನ ಮರದ ಹಿಡಿಕೆಯನ್ನು ಹಿಡಿದು ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ತಂದೆ ಕೊಟ್ಟ ಏಟಿನಿಂದಾಗಿ ಸಹನಾ ಭೋಂಸ್ಲೆ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಸಾಂಗ್ಲಿಯ ಉಷಾಕಲ್ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಪಡೆಯುವ ಮೊದಲೇ ಆಕೆ ಸಾವನ್ನಪ್ಪಿದ್ದಾಳೆ.
ಆಕೆಯ ತಲೆಗೆ ಗಂಭೀರ ಗಾಯವಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆ ಬಹು ಗಾಯಗಳಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ ಎಂದು ಅಟ್ಟಾಡಿ ಪೊಲೀಸ್ ಠಾಣೆಯ ಇನ್ಸ್ಟಪೆಕ್ಷರ್ ವಿನಯ್ ಬಹಿರ್ ತಿಳಿಸಿದ್ದಾರೆ. ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಕಾರವಾರದಲ್ಲಿ SSLC ವಿದ್ಯಾರ್ಥಿ, ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಆತ್ಮಹತ್ಯೆ
ಮುಂಬೈ ಕಾಲೇಜಿನಿಂದ ಹಾರಿ ವಿದ್ಯಾರ್ಥಿ ಸಾವು ಮುಂಬೈ ಕಾಲೇಜಿನ ಮೂರನೇ ಮಹಡಿಯಿಂದ ಬಿದ್ದು 21 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಿದ್ಯಾರ್ಥಿನಿ ಸಂಧ್ಯಾ ಪಾಠಕ್ ಎಂದು ಗುರುತಿಸಲಾಗಿದೆ.ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.ಘಟನೆಗೆ ಇರುವ ಕಾರಣಗಳ ಕುರಿತು ತನಿಖೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




