Jagadguru Rambhadracharya:ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ರಾಮಭದ್ರಾಚಾರ್ಯ ಯಾರು?

|

Updated on: Feb 17, 2024 | 6:39 PM

ರಾಮ ಮಂದಿರವನ್ನು ನನಸು ಮಾಡುವಲ್ಲಿ ಜಗದ್ಗುರು ರಾಮಭದ್ರಾಚಾರ್ಯರ ಪಾತ್ರ ಅಪಾರ. ನ್ಯಾಯಾಲಯದಲ್ಲಿ ಮತ್ತು ಅದರ ಹೊರಗೆ ರಾಮಮಂದಿರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದವರು ಜಗದ್ಗುರು ರಾಮಭದ್ರಾಚಾರ್ಯರು. ಹುಟ್ಟಿದ ಎರಡೇ ತಿಂಗಳಲ್ಲಿ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯರು 22 22 ಭಾಷೆಗಳನ್ನು ಮಾತನಾಡಬಲ್ಲರು. ಸಂಸ್ಕೃತ, ಹಿಂದಿ, ಅವಧಿ, ಮೈಥಿಲಿ ಭಾಷೆಗಳಲ್ಲಿ ಪ್ರವೀಣರಿವರು.

Jagadguru Rambhadracharya:ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ರಾಮಭದ್ರಾಚಾರ್ಯ ಯಾರು?
ರಾಮಭದ್ರಾಚಾರ್ಯ
Follow us on

ದೆಹಲಿ ಫೆಬ್ರುವರಿ 17: ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯ (Jagadguru Rambhadracharya )ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ (Jnanpith Award 2023)ಭಾಜನರಾಗಿದ್ದಾರೆ. ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ, ಸಂಸ್ಕೃತ ವಿದ್ವಾಂಸ, ಬಹುಭಾಷಾ ಕವಿ, ಲೇಖಕ,  ವ್ಯಾಖ್ಯಾನಕಾರ, ತತ್ವಜ್ಞಾನಿ, ಸಂಯೋಜಕ, ಗಾಯಕ, ನಾಟಕಕಾರ ಹೀಗೆ ಹಲವು ವಿಷಯಗಳಲ್ಲಿ  ಪಾಂಡಿತ್ಯ ಹೊಂದಿರುವ ರಾಮಭದ್ರಾಚಾರ್ಯ (ಪೂರ್ವಾಶ್ರಮದ ಹೆಸರು- ಗಿರಿಧರ್ ಮಿಶ್ರಾ) 1950 ಜನವರಿ 14ರಂದು ಉತ್ತರ ಪ್ರದೇಶದ (Uttar Pradesh) ಜಾನ್ಪುರ್ ಜಿಲ್ಲೆಯ ಶಾಂದಿಖುರ್ದ್ ಎಂಬಲ್ಲಿ ಜನಿಸಿದರು. ಚಿತ್ರಕೂಟದಲ್ಲಿ ಸಂತ ತುಳಸಿದಾಸರ ಹೆಸರಿನ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆ ತುಳಸಿ ಪೀಠದ ಮುಖ್ಯಸ್ಥರಾಗಿರುವ ಇರುವ ಅವರು ನಾಲ್ಕು ವಿಧದ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಒದಗಿಸುವ ಚಿತ್ರಕೂಟದಲ್ಲಿರುವ ಜಗದ್ಗುರು ರಾಮಭದ್ರಾಚಾರ್ಯ ಅಂಗವಿಕಲರ ವಿಶ್ವವಿದ್ಯಾಲಯದ ಸಂಸ್ಥಾಪಕರು ಮತ್ತು ಆಜೀವ ಕುಲಪತಿಯಾಗಿದ್ದಾರೆ.

ಎರಡು ತಿಂಗಳ ಮಗುವಾಗಿದ್ದಾಗ ದೃಷ್ಟಿ ಕಳೆದುಕೊಂಡು ರಾಮಭದ್ರಾಚಾರ್ಯರಿಗೆ ಹದಿನೇಳು ವರ್ಷ ವಯಸ್ಸಿನವರೆಗೆ ಯಾವುದೇ ಔಪಚಾರಿಕ ಶಿಕ್ಷಣವಿರಲಿಲ್ಲ. ಅಂದಹಾಗೆ ಇವರು 22 ಭಾಷೆಗಳನ್ನು ಮಾತನಾಡಬಲ್ಲರು. ಸಂಸ್ಕೃತ, ಹಿಂದಿ, ಅವಧಿ, ಮೈಥಿಲಿ ಭಾಷೆಗಳಲ್ಲಿ ಪ್ರವೀಣರಿವರು.100 ಕ್ಕೂ ಹೆಚ್ಚು ಪುಸ್ತಕಗಳು ಮತ್ತು 50 ಪ್ರಬಂಧಗಳನ್ನು ಬರೆದಿದ್ದಾರೆ. ಸಂಸ್ಕೃತ ವ್ಯಾಕರಣ, ನ್ಯಾಯ ಮತ್ತು ವೇದಾಂತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಪುಣರು ಆಗಿರುವ ಇವರು ರಾಮಚರಿತಮಾನಸ್‌ನ ವಿಮರ್ಶಾತ್ಮಕ ಆವೃತ್ತಿಯ ಸಂಪಾದಕರಾಗಿದ್ದಾರೆ. ರಾಮಭದ್ರಾಚಾರ್ಯ ವಿಶ್ವ ಹಿಂದೂ ಪರಿಷತ್ತಿನ (VHP) ನಾಯಕರೂ ಆಗಿದ್ದಾರೆ.

ರಾಮಭದ್ರಾಚಾರ್ಯ ಬ್ರೈಲ್ ಅನ್ನು ಬಳಸುವುದಿಲ್ಲವಾದ್ದರಿಂದ ಅವರಿಗೆ ಓದಲು ಅಥವಾ ಬರೆಯಲು ಸಾಧ್ಯವಲ್ಲ. ಅವರು ಎಲ್ಲವನ್ನೂ ಕೇಳುತ್ತಾಕಲಿಯುತ್ತಾರೆ ಲಿಪಿಕಾರರಿಗೆ ನಿರ್ದೇಶಿಸಿ ಬರೆಸುತ್ತಾರೆ.

ರಾಮ ಮಂದಿರ ನಿರ್ಮಾಣದಲ್ಲಿ ಮಹತ್ತರ ಪಾತ್ರ

ರಾಮ ಮಂದಿರವನ್ನು ನನಸು ಮಾಡುವಲ್ಲಿ ಜಗದ್ಗುರು ರಾಮಭದ್ರಾಚಾರ್ಯರ ಪಾತ್ರ ಅಪಾರ. ನ್ಯಾಯಾಲಯದಲ್ಲಿ ಮತ್ತು ಅದರ ಹೊರಗೆ ರಾಮಮಂದಿರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದವರು ಜಗದ್ಗುರು ರಾಮಭದ್ರಾಚಾರ್ಯರು.   ಜುಲೈ 2003 ರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ 100-ಪುಟಗಳ ಅಫಿಡವಿಟ್ ಮತ್ತು ಎಕ್ಸಾಮಿನೇಷನ್ ವೇಳೆ ಹೈಕೋರ್ಟ್‌ನ ಅಂತಿಮ ತೀರ್ಪಿನಲ್ಲಿ ಕೆಲವು ಭಾಗಗಳನ್ನು ಉಲ್ಲೇಖಿಸಲಾಗಿದೆ. ತಮ್ಮ ಅಫಿಡವಿಟ್‌ನಲ್ಲಿ, ರಾಮಭದ್ರಾಚಾರ್ಯ ಅವರು ರಾಮಾಯಣ, ರಾಮತಾಪಾನೀಯ ಉಪನಿಷದ್, ಸ್ಕಂದ ಪುರಾಣ, ಯಜುರ್ವೇದ ಮತ್ತು ಅಥರ್ವವೇದ ಸೇರಿದಂತೆ ಹಲವಾರು ಪ್ರಾಚೀನ ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿ, ಹಿಂದೂಗಳ ಪವಿತ್ರ ನಗರವಾದ ಅಯೋಧ್ಯೆಯು ಭಗವಾನ್ ರಾಮನ ಜನ್ಮಸ್ಥಳವಾಗಿದೆ ಎಂಬ ಅವರ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದಿದ್ದರು.

ಇದನ್ನೂ ಓದಿ: Jnanpith Award: ಖ್ಯಾತ ಉರ್ದು ಕವಿ ಗುಲ್ಜಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯಗೆ ಜ್ಞಾನಪೀಠ ಪ್ರಶಸ್ತಿ

ತುಳಸಿದಾಸರು ರಚಿಸಿದ ಎರಡು ಕೃತಿಗಳ ಹಲವಾರು ಪದ್ಯಗಳನ್ನು ಸ್ವಾಮಿ ಜಿ ಉಲ್ಲೇಖಿಸಿದ್ದಾರೆ. ಇವುಗಳಲ್ಲಿ ಒಂದು ದೋಹಾ ಸಟಕಾದಿಂದ ಬಂದಿದ್ದು, ಇದು 1528 CE ನಲ್ಲಿ ಬಾಬರ್ ವಿವಾದಿತ ಸ್ಥಳದಲ್ಲಿ ದೇವಾಲಯದ ನಾಶ ಮತ್ತು ಮಸೀದಿಯ ನಿರ್ಮಾಣವನ್ನು ವಿವರಿಸುತ್ತದೆ. ಅವರು ಬಳಸಿದ ಎರಡನೆಯ ಪದ್ಯವು ಕೈತವಲಿಯಲ್ಲಿದೆ, ಅದು ಮಸೀದಿಯನ್ನು ಉಲ್ಲೇಖಿಸುತ್ತದೆ.

ಹೈಕೋರ್ಟಿನಲ್ಲಿ ಕ್ರಾಸ್ ಎಕ್ಸಾಮಿನೇಷನ್ ಸಮಯದಲ್ಲಿ, ಸ್ವಾಮಿ ಜಿ ರಮಾನಂದ ಪಂಥದ ಇತಿಹಾಸ, ಅದರ ಮಠಗಳು, ಮಹಂತರಿಗೆ ಸಂಬಂಧಿಸಿದ ನಿಯಮಗಳು, ಅಖಾಡಗಳ ರಚನೆ ಮತ್ತು ಕೆಲಸ ಮತ್ತು ತುಳಸಿದಾಸರ ಕೃತಿಗಳ ವಿವರಗಳನ್ನು ಉಲ್ಲೇಖಿಸಿದರು. ಇದಲ್ಲದೆ, ಮೂಲ ದೇವಾಲಯವು ವಿವಾದಿತ ಪ್ರದೇಶದ ಉತ್ತರ ಭಾಗದಲ್ಲಿದೆ ಎಂಬ ಹೇಳಿಕೆಗಳನ್ನು ಅವರು ನಿರಾಕರಿಸಿದರು. ಇದನ್ನು ಮುಸ್ಲಿಂ ಕಡೆಯವರು ವಾದಿಸಿದ್ದರು.ದೇವಾಲಯದ ನಿಖರವಾದ ಸ್ಥಳವನ್ನು ಉಲ್ಲೇಖಿಸಿರುವ ಸ್ಕಂದ ಪುರಾಣದ ಅಯೋಧ್ಯೆ ಮಾಹಾತ್ಮ್ಯ ವಿಭಾಗವನ್ನು ಇಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Sat, 17 February 24