ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್

| Updated By: ಆಯೇಷಾ ಬಾನು

Updated on: Mar 28, 2022 | 5:51 PM

ಸಚಿವ ಈಶ್ವರಪ್ಪ ಬೆಂಬಲಿಗರು ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 108 ಕಾಮಗಾರಿಗಳನ್ನು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿ ಪೂರ್ಣಗೊಳಿಸಲಾಗಿದೆ. ಆದ್ರೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಕಳೆದ ವರ್ಷದ ಫೆಬ್ರವರಿ 12 ರಂದು ಕೆಲಸ ಪೂರ್ಣಗೊಳಿಸಲು ಈಶ್ವರಪ್ಪ ಸೂಚಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್
ಕೆ ಎಸ್ ಈಶ್ವರಪ್ಪ
Follow us on

ದೆಹಲಿ: ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಹಿಂದೂ ವಾಹಿನಿ ನ್ಯಾಷನಲ್ ಸಂಘಟನೆಯ ಕಾರ್ಯದರ್ಶಿ, ಬಿಜೆಪಿ ಕಾರ್ಯಕರ್ತ ಕೂಡ ಆಗಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ.ಪಾಟೀಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಪ್ರಧಾನಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಸಚಿವ ಈಶ್ವರಪ್ಪ ಬೆಂಬಲಿಗರು ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 108 ಕಾಮಗಾರಿಗಳನ್ನು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿ ಪೂರ್ಣಗೊಳಿಸಲಾಗಿದೆ. ಆದ್ರೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಕಳೆದ ವರ್ಷದ ಫೆಬ್ರವರಿ 12 ರಂದು ಕೆಲಸ ಪೂರ್ಣಗೊಳಿಸಲು ಈಶ್ವರಪ್ಪ ಸೂಚಿಸಿದ್ದರು. ಆದರೆ ವರ್ಕ್ ಆರ್ಡರ್ ಕೊಟ್ಟಿಲ್ಲ, ಹಣವೂ ಬಿಡುಗಡೆ ಆಗಿಲ್ಲ. ಕಾಮಗಾರಿ ಪೂರ್ಣವಾಗಿ 1 ವರ್ಷ ಕಳೆದರೂ ಹಣ ನೀಡಿಲ್ಲ. ಸಾಲಕ್ಕೆ ಬಡ್ಡಿ ಪಾವತಿಸಿ ಹಣ ತಂದು ಕೆಲಸ ಪೂರ್ಣಗೊಳಿಸಿದ್ದೇವೆ. ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸುವಂತೆ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಹಣ ನೀಡದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದಿರುವ ಮಾರ್ಗ ಎಂದು ಸಂತೋಷ ಪಾಟೀಲ್, ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸಂತೋಷ್ ಪಾಟೀಲ್ ಪತ್ರ

ಬಿಜೆಪಿ ನಾಯಕರಿಗೆ ಯಾವುದೇ ಕಾನೂನು ಅನ್ವಯಿಸಲ್ಲ
ಇನ್ನು ಮತ್ತೊಂದೆಡೆ ಸಚಿವ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಸಂಬಂಧ ದೆಹಲಿಯಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ಭ್ರಷ್ಟಾಚಾರದ ಬಿಸಿ ಈಗ ತಟ್ಟಿದೆ. ಭ್ರಷ್ಟಾಚಾರಕ್ಕೆ ಬಿಜೆಪಿಯವರಿಗೆ ನ್ಯಾಷನಲ್ ಪರ್ಮಿಟ್ ಸಿಕ್ಕಿದ್ಯಾ. ED, ಸಿಬಿಐ, ಐಟಿ ಬಿಜೆಪಿ ನಾಯಕರಿಗೆ ಸಂಬಂಧಿಸುವುದಿಲ್ಲ. ಒಬ್ಬ ಶಾಸಕನ ಮಗಳು ಸುಳ್ಳು SC, ST ಪ್ರಮಾಣ ಪತ್ರ ಮಾಡಿಸಿದ್ದಾರೆ. ಪ್ರಮಾಣ ಪತ್ರದ ಮೇಲೆ 80 ಲಕ್ಷ ರೂ. ಸಾಲ ಪಡೆದಿದ್ದಾರೆ. ಇದನ್ನು ಸಾಮಾನ್ಯ ಜನರು ಮಾಡಿದ್ದರೆ ಜೈಲು ಸೇರುತ್ತಿದ್ದರು. ಬಿಜೆಪಿ ನಾಯಕರಿಗೆ ಯಾವುದೇ ಕಾನೂನು ಅನ್ವಯಿಸಲ್ಲ. ಬಿಜೆಪಿ ಸೇರಿದ್ರೆ ವಾಷಿಂಗ್ ಮಷೀನ್ಗೆ ಹಾಕಿ ತೆಗೆದಂತೆ ಶುಭ್ರ. BJPಯಲ್ಲಿ ಎಲ್ಲದಕ್ಕೂ ಅನುಮತಿ ಸಿಗಲಿದೆ ಎಂದು ಜಿ.ಸಿ.ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ಭ್ರಷ್ಟಾಚಾರ ನೋಡಿಯೂ ಮೋದಿ ಸುಮ್ಮನಿದ್ದಾರೆ
ಕರ್ನಾಟಕ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. 40% ಕಮಿಷನ್ ಆರೋಪವನ್ನು ಬಿಜೆಪಿ ಕಾರ್ಯಕರ್ತ ಮಾಡಿದ್ದಾರೆ ಎಂದು ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಸಂಬಂಧ ಈಶ್ವರಪ್ಪ ವಿರುದ್ಧ ಬಿಜೆಪಿ ಕಾರ್ಯಕರ್ತ ಆರೋಪಿಸಿದ್ದಾನೆ. ಶೇಕಡಾ 40ರಷ್ಟು ಕಮಿಷನ್ ಬಗ್ಗೆ ಆರೋಪ ಮಾಡಿದ್ದಾನೆ. ಸಚಿವ ಈಶ್ವರಪ್ಪ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬೂತ್ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರದ ಭ್ರಷ್ಟಾಚಾರ ನೋಡಿಯೂ ಮೋದಿ ಸುಮ್ಮನಿದ್ದಾರೆ ಎಂದು ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮಧ್ಯ ಮೆಕ್ಸಿಕೋದಲ್ಲಿ ಶೂಟೌಟ್: 19 ಮಂದಿ ಸಾವು, ಹಲವರಿಗೆ ಗಾಯ

ಬೆಂಗಳೂರನ್ನು ರಿಪೇರಿ ಮಾಡಲು ವಿಶ್ವಸಂಸ್ಥೆ ಬಂದ್ರೂ ಆಗಲ್ಲ: ವಿಧಾನ ಪರಿಷತ್​ನಲ್ಲಿ ಕೆಎಸ್ ಈಶ್ವರಪ್ಪ ಉತ್ತರ

Published On - 5:05 pm, Mon, 28 March 22