ಪಂಜಾಬ್‌ನಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣೆ: ಇಡೀ ದೇಶ ಶೀಘ್ರದಲ್ಲೇ ಈ ಯೋಜನೆಗೆ ಒತ್ತಾಯಿಸಲಿದೆ: ಕೇಜ್ರಿವಾಲ್
ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜನರು ಕೆಲಸಕ್ಕೆ ರಜೆ ಹಾಕಿ ಪಡಿತರ ಪಡೆಯಲು ಸಾಲುಗಟ್ಟಿ ನಿಲ್ಲಬೇಕಾಗಿದೆ.ಈ ದೇಶದಲ್ಲಿ ಪಿಜ್ಜಾವನ್ನು ಮನೆಗೆ ತಂದುಕೊಡಲಾಗುತ್ತದೆ ಆದರೆ ರೇಷನ್ ಅಲ್ಲ. ಈ ಯೋಜನೆಯಡಿ, ಸರ್ಕಾರವು ನಿಮ್ಮ ಮನೆಗೆ ಪಡಿತರವನ್ನು ಪ್ಯಾಕ್ ಮಾಡಿ ಕಳುಹಿಸುತ್ತದೆ.
ದೆಹಲಿ: ಮನೆ ಬಾಗಿಲಿಗೆ ಪಡಿತರ ವಿತರಣೆ (Doorstep ration delivery)ಸೇರಿದಂತೆ ದೆಹಲಿಯ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಕೇಂದ್ರದ ಆಕ್ಷೇಪಣೆಗಳಿಂದಾಗಿ ಜಾರಿಗೆ ತರಲು ಸಾಧ್ಯವಾಗದ ಯೋಜನೆಯನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann)ಘೋಷಿಸಿದ್ದಾರೆ. ಶೀಘ್ರದಲ್ಲೇ ಇಡೀ ದೇಶವು ಯೋಜನೆಯನ್ನು ಜಾರಿಗೆ ತರಲು ಕೇಳುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಪಂಜಾಬ್‌ನಲ್ಲಿ ಪಡಿತರ ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿ ಮಾನ್ ಘೋಷಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜನರು ಕೆಲಸಕ್ಕೆ ರಜೆ ಹಾಕಿ ಪಡಿತರ ಪಡೆಯಲು ಸಾಲುಗಟ್ಟಿ ನಿಲ್ಲಬೇಕಾಗಿದೆ.ಈ ದೇಶದಲ್ಲಿ ಪಿಜ್ಜಾವನ್ನು ಮನೆಗೆ ತಂದುಕೊಡಲಾಗುತ್ತದೆ ಆದರೆ ರೇಷನ್ ಅಲ್ಲ. ಈ ಯೋಜನೆಯಡಿ, ಸರ್ಕಾರವು ನಿಮ್ಮ ಮನೆಗೆ ಪಡಿತರವನ್ನು ಪ್ಯಾಕ್ ಮಾಡಿ ಕಳುಹಿಸುತ್ತದೆ. ಯಾರೂ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಪಂಜಾಬ್‌ನ ಬಡವರಿಗೆ ಇದರಿಂದ ಲಾಭವಾಗಲಿದೆ. ದೆಹಲಿಯಲ್ಲಿ ನಾವು ಇದನ್ನು ಜಾರಿಗೆ ತರಲು ಹರಸಾಹಸ ಮಾಡುತ್ತಿದ್ದೇವೆ. ನಾವು ಎಲ್ಲಾ ಯೋಜನೆಗಳನ್ನು ಮಾಡಿದ್ದೇವೆ, ಆದರೆ ಬಿಜೆಪಿ ನಡೆಸುತ್ತಿರುವ ಕೇಂದ್ರವು ಅದನ್ನು ಕಾರ್ಯಗತಗೊಳಿಸದಂತೆ ನಮ್ಮನ್ನು ತಡೆದಿದೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯ ಅನುಷ್ಠಾನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದು, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಲ್ಲಿ (NFSA) ಮನೆಗಳಿಗೆ ಪಡಿತರವನ್ನು ತಲುಪಿಸುವ ನಿಬಂಧನೆಯು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದೆ.
देश के लोगों को पिछले 75 सालों से रोका जा रहा है, लेकिन अब लोग रुकने वाले नहीं हैं। 2 राज्यों में लोगों ने “कट्टर ईमानदार” सरकार बना कर जवाब दे दिया है। भारत के लोग अब आगे बढ़ना चाहते हैं। pic.twitter.com/vScvcq4cyz
— Arvind Kejriwal (@ArvindKejriwal) March 28, 2022
ಪಡಿತರ ವಿತರಣೆಯ ಕಾಯಿದೆಯ ಉಲ್ಲಂಘನೆಯಾಗುತ್ತದೆ ಎಂದು ಸಚಿವಾಲಯವು ದೆಹಲಿ ಸರ್ಕಾರಕ್ಕೆ ತಿಳಿಸಿದೆ.
ದೆಹಲಿ ಸರ್ಕಾರವು ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಪಡಿತರವನ್ನು ಖರೀದಿಸಿ ಅದನ್ನು ವಿತರಿಸಿದರೆ ಯೋಜನೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಅದು ದೆಹಲಿ ಸರ್ಕಾರಕ್ಕೆ ತಿಳಿಸಿದೆ. ಆದರೆ ಎನ್‌ಎಫ್‌ಎಸ್‌ಎ ಅಡಿಯಲ್ಲಿ ರಾಜ್ಯಕ್ಕೆ ನೀಡಿದ ಧಾನ್ಯವನ್ನು ಬಳಸುವುದು ಕಾನೂನುಬಾಹಿರವಾಗಿರುತ್ತದೆ. ಪಂಜಾಬ್‌ನಲ್ಲಿ ಶೀಘ್ರದಲ್ಲೇ ಈ ಯೋಜನೆ ಜಾರಿಯಾಗಲಿದೆ ಎಂದು ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ಕೇಂದ್ರವು ನಮ್ಮನ್ನು ತಡೆಯಲು ಪ್ರಯತ್ನಿಸಿದೆ, ಆದರೆ ಅವರು ಹೇಳಿದಂತೆ, ಸಮಯ ಬಂದಾಗ ಕಲ್ಪನೆಯನ್ನು ನೀವು ತಡೆಯಲು ಸಾಧ್ಯವಿಲ್ಲ. ದೆಹಲಿಯಲ್ಲಿ ಮಾಡಲು ಬಿಡಲಿಲ್ಲ, ಪಂಜಾಬ್‌ನಲ್ಲಿ ಮಾಡುತ್ತೇವೆ. ಈ ಯೋಜನೆ ಜಾರಿಯಾಗುತ್ತಿರುವುದನ್ನು ದೇಶ ನೋಡುತ್ತದೆ ಮತ್ತು ಅದನ್ನು ಎಲ್ಲೆಡೆ ಜಾರಿಗೆ ತರುವಂತೆ ಕೇಳುತ್ತದೆ. ವರ್ಷಗಳಲ್ಲಿ ನಾವು ದೆಹಲಿಯಲ್ಲಿ ಕೆಲಸ ಮಾಡುವುದನ್ನು ಅವರು ಹೇಗೆ ನಿಲ್ಲಿಸಿದ್ದಾರೆ ಎಂಬುದನ್ನು ನೀವು ನೋಡಿದ್ದೀರಿ. ಮೊಹಲ್ಲಾ ಕ್ಲಿನಿಕ್ ಯೋಜನೆ ಎರಡು ವರ್ಷಗಳಿಂದ ಸ್ಥಗಿತಗೊಂಡಿತು, ಮೂರು ವರ್ಷಗಳಿಂದ ಸಿಸಿಟಿಸಿ ಯೋಜನೆ ನಿಲ್ಲಿಸಲಾಯಿತು. ಆದರೆ ನಾವು ಅದನ್ನೂ ಮಾಡಿದೆವು . ಕಳೆದ 75 ವರ್ಷಗಳಿಂದ ಈ ದೇಶದ ಜನತೆಗೆ ಹಿನ್ನಡೆಯಾಗಿದೆ. ಅವರು ತುಂಬಾ ಪ್ರತಿಭಾವಂತರು ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಕೆಲಸ ಮಾಡಲು ಬಯಸುತ್ತಾರೆ. ಅವರು ಇನ್ನು ಮುಂದೆ ನಿಲ್ಲುವುದಿಲ್ಲ. ಎರಡು ರಾಜ್ಯಗಳಲ್ಲಿ ಪ್ರಾಮಾಣಿಕ ಸರ್ಕಾರವಿದೆ, ಈಗ ದೇಶವು ಪ್ರಗತಿ ಹೊಂದಲಿದೆ ಎಂದು ಕೇಜ್ರಿವಾಲ್ ಹೇಳಿದರು.
ಇದನ್ನೂ ಓದಿ: ಅರವಿಂದ ಕೇಜ್ರಿವಾಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ದೆಹಲಿ ವಿಧಾನಸಭೆಯಲ್ಲಿ ಗದ್ದಲ; 3 ಬಿಜೆಪಿ ಶಾಸಕರು ಅಮಾನತು