Bharat bandh ಸರ್ಕಾರಿ ನೌಕರರಿಗೆ ಮುಷ್ಕರದಲ್ಲಿ ಭಾಗವಹಿಸುವ ಹಕ್ಕಿಲ್ಲ: ಕೇರಳ ಹೈಕೋರ್ಟ್

ಸರ್ಕಾರಿ ನೌಕರರು ಕೆಲಸದಿಂದ ದೂರವಿರುವ ದಿನಗಳವರೆಗೆ ಅವರು ವೇತನಕ್ಕೆ ಅನರ್ಹರಾಗುತ್ತಾರೆ ಎಂದು ಹೇಳಿದ ಕೇರಳ ಹೈಕೋರ್ಟ್ ಕೆಲಸ ಮಾಡದಿದ್ದರೆ ವೇತನವೂ ಇಲ್ಲ ಎಂದು ಘೋಷಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

Bharat bandh ಸರ್ಕಾರಿ ನೌಕರರಿಗೆ ಮುಷ್ಕರದಲ್ಲಿ ಭಾಗವಹಿಸುವ ಹಕ್ಕಿಲ್ಲ: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್​
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 28, 2022 | 7:07 PM

ದೆಹಲಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್‌ನಲ್ಲಿ(Nationwide shutdown) ಭಾಗವಹಿಸದಂತೆ ಕೇರಳ ಹೈಕೋರ್ಟ್ (Kerala High Court) ಸೋಮವಾರ ಸರ್ಕಾರಿ ನೌಕರರಿಗೆ ನಿರ್ಬಂಧ ವಿಧಿಸಿದೆ. ಈ ಬಗ್ಗೆ ಕೂಡಲೇ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರಿ ನೌಕರರು ಕಾರ್ಮಿಕರ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅವರು ಮುಷ್ಕರದಲ್ಲಿ ಭಾಗವಹಿಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸಾಮಾಜಿಕ ಕಾರ್ಯಕರ್ತ ಚಂದ್ರಚೂಡನ್ ನಾಯರ್ ಅವರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ವಿಭಾಗೀಯ ಪೀಠವು ನೌಕರರು ಮುಷ್ಕರದಲ್ಲಿ ಭಾಗವಹಿಸುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದೆ. ಅವರು ಕೆಲಸದಿಂದ ದೂರವಿರುವ ದಿನಗಳವರೆಗೆ ಅವರು ವೇತನಕ್ಕೆ ಅನರ್ಹರಾಗುತ್ತಾರೆ. ಕೆಲಸ ಮಾಡದಿದ್ದರೆ ವೇತನವೂ ಇಲ್ಲ ಎಂದು ಘೋಷಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಈ ಹಿಂದೆ ಅಂತಹ ಸಂದರ್ಭಗಳಲ್ಲಿ ಗೈರುಹಾಜರಾದ ನೌಕರರನ್ನು ಮೊದಲು ರಜೆ ಎಂದು ಪರಿಗಣಿಸಿ ಪೂರ್ಣ ವೇತನವನ್ನು ನೀಡಲಾಗುತ್ತಿತ್ತು. ಸರ್ಕಾರಿ ನೌಕರರು (Govt employees) ಮುಷ್ಕರದಲ್ಲಿ ಭಾಗವಹಿಸುವುದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಚಾಲಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ನೌಕರರು ಕೆಲಸದಿಂದ ದೂರ ಉಳಿಯಲು ಸರ್ಕಾರ ಉತ್ತೇಜನ ನೀಡುತ್ತಿದೆ. ಪೂರ್ಣ ವೇತನವನ್ನು ಖಚಿತಪಡಿಸಿಕೊಳ್ಳಲು ಇದು ನಂತರ ನಿಯಮಗಳನ್ನು ತಿರುಚುತ್ತದೆ ಎಂದು ಚಾಲಿ ಹೇಳಿದ್ದಾರೆ. ಮುಷ್ಕರದ ಸಮಯದಲ್ಲಿ ಗೈರುಹಾಜರಾದ ನೌಕರರಿಗೆ ಸರ್ಕಾರವು ವೇತನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಕಾನೂನು ಇಲಾಖೆಯು ಪ್ರಾಸಿಕ್ಯೂಷನ್‌ಗಳ ಮಹಾನಿರ್ದೇಶಕರಿಂದ ಸಲಹೆಯನ್ನು ಕೇಳಿದೆ ಮತ್ತು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ತೆರಳುವ ಸಾಧ್ಯತೆಯಿದೆ. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನಾಯಕ ಕೆ ಪಿ ರಾಜೇಂದ್ರನ್ ನ್ಯಾಯಾಲಯದ ಅವಲೋಕನ ದುರದೃಷ್ಟಕರ ಎಂದು ಹೇಳಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೇ ಹೊರತು ಬಡ ಕಾರ್ಮಿಕರಿಗಲ್ಲ ಎಂದು ಅವರು ಹೇಳಿದರು.

ಮುಷ್ಕರದಿಂದಾಗಿ ಕೇರಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಬಂದ್‌ ಮಾಡಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಮ್ಯಾಜಿಸ್ಟ್ರೇಟ್ ವಾಹನವನ್ನು ನಿರ್ಬಂಧಿಸಲಾಗಿದೆ. ನಂತರ ನ್ಯಾಯಾಲಯವು ಪೆಟ್ಟಾ ಠಾಣಾಧಿಕಾರಿಯನ್ನು ಕರೆಸಿತು ಮತ್ತು ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಆದೇಶಿಸಿತು. ಪಪ್ಪನಂಕೋಡ್‌ನಲ್ಲಿ ಕ್ಯಾನ್ಸರ್ ರೋಗಿಯೊಬ್ಬರನ್ನು ಆಟೋ ರಿಕ್ಷಾದಿಂದ ಬಲವಂತವಾಗಿ ಹೊರ ಹಾಕಲಾಗಿದೆ. ಹಿಂಸಾಚಾರ ಮತ್ತು ಕಲ್ಲು ತೂರಾಟದ ಘಟನೆಗಳು ಕೆಲವೆಡೆ ವರದಿಯಾಗಿವೆ.

ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ವ್ಯವಹಾರಗಳು ಮುಚ್ಚಲ್ಪಟ್ಟವು. 4,824 ನೌಕರರಲ್ಲಿ 32 ಮಂದಿ ಮಾತ್ರ ರಾಜ್ಯ ಸಚಿವಾಲಯದಲ್ಲಿ ಕೆಲಸಕ್ಕೆ ಹಾಜರಾಗಿದ್ದು ಇದರಲ್ಲಿ ಮುಖ್ಯ ಕಾರ್ಯದರ್ಶಿಯೂ ಇದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೆ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ. ರಾಜ್ಯದ ಪ್ರಮುಖ ಐಟಿ ಪಾರ್ಕ್‌ಗಳು ಸಹ ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಎರಡು ದಿನಗಳ ಮುಷ್ಕರ ಭಾನುವಾರ ಮಧ್ಯರಾತ್ರಿ ಆರಂಭವಾಯಿತು. ಇದು ಮಂಗಳವಾರ ಮಧ್ಯರಾತ್ರಿಯವರೆಗೂ ಮುಂದುವರಿಯಲಿದೆ.

ಇದನ್ನೂ ಓದಿ: ಹಿಂದೂ ಅಲ್ಲ ಎಂಬ ಕಾರಣದಿಂದ ಕೇರಳದ ಭರತನಾಟ್ಯ ಕಲಾವಿದೆಗೆ ದೇವಸ್ಥಾನದಲ್ಲಿ ಪ್ರದರ್ಶನ ನೀಡಲು ನಿರ್ಬಂಧ; ನಾನು ಯಾವುದೇ ಧರ್ಮಕ್ಕೆ ಸೇರಿಲ್ಲ ಎಂದ ಕಲಾವಿದೆ

Published On - 5:44 pm, Mon, 28 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ