Bharat Bandh ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರ ವೇಳೆ ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ವಿದ್ಯುತ್ ಸಚಿವಾಲಯ ಸಲಹೆ

ಯಾವುದೇ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಎಲ್ಲಾ ನಿರ್ಣಾಯಕ ವಿದ್ಯುತ್ ಕೇಂದ್ರಗಳಲ್ಲಿ ಹೆಚ್ಚುವರಿ ಮಾನವಶಕ್ತಿಯನ್ನು ನಿಯೋಜಿಸಬಹುದು. ನಿಯಂತ್ರಣ ಕೊಠಡಿಯ ಕಾರ್ಯನಿರ್ವಾಹಕರು ಜಾಗರೂಕರಾಗಿರಬೇಕು.  ಆಸ್ಪತ್ರೆಗಳು, ರಕ್ಷಣಾ ಮೂಲಸೌಕರ್ಯ, ರೈಲ್ವೇಗಳಂತಹ ಅಗತ್ಯ ಸೇವೆಗಳಿಗೆ ಹೆಚ್ಚಿನ ಜಾಗರೂಕರಾಗಿರಬೇಕು...

Bharat Bandh ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರ ವೇಳೆ ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ವಿದ್ಯುತ್ ಸಚಿವಾಲಯ ಸಲಹೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 27, 2022 | 4:37 PM

ಮಾರ್ಚ್ 28 ರಿಂದ ಮಾರ್ಚ್ 30 ರವರೆಗೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (trade unions) ಕರೆ ನೀಡಿರುವ ಎರಡು ದಿನಗಳ ರಾಷ್ಟ್ರೀಯ ಮುಷ್ಕರಕ್ಕೆ (National strike) ಮುಂಚಿತವಾಗಿ, ನೌಕರರ ಮುಷ್ಕರದ ಸಮಯದಲ್ಲಿ ವಿದ್ಯುತ್ ಸರಬರಾಜು ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಸಚಿವಾಲಯವು (Power ministry )ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ವಿದ್ಯುತ್ ಅಧಿಕಾರಿಗಳಿಗೆ ಭಾನುವಾರ ಪತ್ರ ಬರೆದಿದೆ. ಈ ಎರಡು ದಿನಗಳಲ್ಲಿ ಯೋಜಿಸಲಾದ ಸ್ಥಗಿತಗೊಳಿಸುವ ಚಟುವಟಿಕೆಗಳನ್ನು ಸೂಕ್ತವಾದ ಮುಂದಿನ ದಿನಾಂಕಗಳಿಗೆ ಮರುಹೊಂದಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಯಾವುದೇ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಎಲ್ಲಾ ನಿರ್ಣಾಯಕ ವಿದ್ಯುತ್ ಕೇಂದ್ರಗಳಲ್ಲಿ ಹೆಚ್ಚುವರಿ ಮಾನವಶಕ್ತಿಯನ್ನು ನಿಯೋಜಿಸಬಹುದು. ನಿಯಂತ್ರಣ ಕೊಠಡಿಯ ಕಾರ್ಯನಿರ್ವಾಹಕರು ಜಾಗರೂಕರಾಗಿರಬೇಕು.  ಆಸ್ಪತ್ರೆಗಳು, ರಕ್ಷಣಾ ಮೂಲಸೌಕರ್ಯ, ರೈಲ್ವೇಗಳಂತಹ ಅಗತ್ಯ ಸೇವೆಗಳಿಗೆ ಹೆಚ್ಚಿನ ಜಾಗರೂಕರಾಗಿರಬೇಕು ಮತ್ತು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿದ್ಯುತ್ ಸಚಿವಾಲಯ ಸಲಹೆ ನೀಡಿದೆ. ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ಪ್ರತಿಭಟಿಸಿ ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಕರೆ ನೀಡಿರುವುದರಿಂದ ರಾಷ್ಟ್ರದಾದ್ಯಂತ ಎರಡು ದಿನಗಳ ಕಾಲ ಅನೇಕ ಸೇವೆಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್‌ಗಳು, ವಿಮೆ ಸೇರಿದಂತೆ ಇತರ ವಲಯಗಳ ಒಕ್ಕೂಟಗಳು ಮುಷ್ಕರಕ್ಕೆ ನೋಟಿಸ್‌ಗಳನ್ನು ನೀಡಿವೆ ಎಂದು ಜಂಟಿ ವೇದಿಕೆಯ ಪ್ರಕಟಣೆ ತಿಳಿಸಿದೆ. ರೈಲ್ವೇ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ನೂರಾರು ಸ್ಥಳಗಳಲ್ಲಿ ಮುಷ್ಕರವನ್ನು ಬೆಂಬಲಿಸಲು ಸಾಮೂಹಿಕವಾಗಿ ಸಜ್ಜಾಗಿವೆ ಎಂದು ಅದು ಹೇಳಿದೆ.

ಈ ಎರಡು ದಿನಗಳ ಮುಷ್ಕರಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. “ಮಾರ್ಚ್ 28 ಮತ್ತು 29, 2022 ರಂದು 48 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ/ಬಂದ್‌ಗೆ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ಇತರರು ನೀಡಿದ ಕರೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಿದ ಕಚೇರಿಗಳು ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ ಮತ್ತು ಎಲ್ಲಾ ನೌಕರರು ಆ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

ಸಾರ್ವತ್ರಿಕ ಮುಷ್ಕರದಲ್ಲಿ ಯಾರೆಲ್ಲ ಇದ್ದಾರೆ? ಕಾರ್ಮಿಕರು,  ರೈತರು ಮತ್ತು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಬೆಂಬಲದೊಂದಿಗೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಮಾರ್ಚ್ 22 ರಂದು ನಡೆದ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು ಕೇಂದ್ರದ “ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನವಿರೋಧಿ ಮತ್ತು ದೇಶ ವಿರೋಧಿ ನೀತಿಗಳ” ವಿರುದ್ಧ ಪ್ರತಿಭಟಿಸುವುದಾಗಿ ಹೇಳಿದ ನಂತರ ಈ ನಿರ್ಧಾರವು ಬಂದಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ರ ವಿರುದ್ಧ ಬ್ಯಾಂಕ್ ಒಕ್ಕೂಟಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ.  ರಸ್ತೆ, ಸಾರಿಗೆ, ವಿದ್ಯುತ್‌ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳ ಪ್ರಕಟಣೆ ತಿಳಿಸಿದೆ.

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ. “ಮುಷ್ಕರದ ದಿನಗಳಲ್ಲಿ ಬ್ಯಾಂಕ್ ತನ್ನ ಶಾಖೆಗಳು ಮತ್ತು ಕಚೇರಿಗಳಲ್ಲಿ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ, ಆದರೆ ಮುಷ್ಕರದಿಂದ ನಮ್ಮ ಬ್ಯಾಂಕಿನ ಕೆಲಸವು ಸೀಮಿತ ಪ್ರಮಾಣದಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಎಸ್‌ಬಿಐ ತಿಳಿಸಿದೆ.

ಇದನ್ನೂ ಓದಿ: ಕೇರಳದಲ್ಲಿ ಎರಡು ದಿನಗಳ ಮುಷ್ಕರ ಅನಗತ್ಯ, ಇದು ವ್ಯವಹಾರಗಳಿಗೆ ಭಾರಿ ನಷ್ಟವುಂಟುಮಾಡಬಹುದು: ವ್ಯಾಪಾರ ಮತ್ತು ಕೈಗಾರಿಕೆ ತಜ್ಞರು