ಬೆಂಗಳೂರು: ಕಳೆದ ನಾಲ್ಕು ವರ್ಷದಿಂದ ಸೆರೆವಾಸ ಅನುಭವಿಸಿ ಚೆನ್ನೈಗೆ ತೆರಳುತ್ತಿರುವ ಶಶಿಕಲಾ ನಟರಾಜನ್ ಮಾರ್ಗ ಮಧ್ಯೆ ಅಭಿಮಾನಿಗಳನ್ನು ಕಂಡು ಭಾವುಕರಾದರು. ಬೆಳಗ್ಗೆ ರೆಸಾರ್ಟ್ನಿಂದ ಹೊರಟ ಶಶಿಕಲಾಗೆ 8 ಕ್ಕು ಹೆಚ್ಚು ವಾಹನಗಳಲ್ಲಿ ಅಂಗ ರಕ್ಷಕರನ್ನು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ 50ಕ್ಕು ಹೆಚ್ಚು ವಾಹನಗಳಲ್ಲಿ ಬೆಂಬಲಿಗರು ಅಗಮಿಸಿದ್ದರು. ದೃಷ್ಟಿ ತೆಗೆದು ಚಿನ್ನಮ್ಮಳನ್ನ ಸ್ವಾಗತಿಸಲು ಅಭಿಮಾನಿಗಳು ತೆಂಗಿನಕಾಯಿ, ಪೂಜಾ ಸಾಮಾನುಗಳನ್ನು ತಂದಿದ್ದರು. ಜೊತೆಗೆ ತಿರುಪತಿ ಸೇರಿದಂತೆ ಹಲವು ದೇವಸ್ಥಾನಗಳಿಂದ ಅರ್ಚಕರು ಪ್ರಸಾದವನ್ನು ತಂದಿದ್ದರು.
ಶಶಿಕಲಾ ಆಗಮನದ ಹಿನ್ನೆಲೆಯಲ್ಲಿ ಜಯಲಲಿತ ಮತ್ತು ಚಿನ್ನಮ್ಮರ ಪೋಟೋ ಹಿಡಿದು ಅಭಿಮಾನಿಗಳು ಭರ್ಜರಿ ಡ್ಯಾನ್ಸ್ ಮಾಡಿದರು. ನಜೀರ್ ಅಹ್ಮದ್ ಎಂಬ ಅಂಗವಿಕಲ ಅಭಿಮಾನಿ ಒಂದೇ ಕೈಯಲ್ಲಿ ಪೋಟೋ ಹಿಡಿದು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಸಂಭ್ರಮಿಸಿದರು.
ಮತ್ತೊಂದು ಶಾಕ್
ಸುಪ್ರೀಂ ಕೋರ್ಟ್ ಆದೇಶದಂತೆ ಜಯಲಲಿತಾ ದತ್ತು ಪುತ್ರ ಸುಧಾಕರನ್ ಅಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ. ಶಶಿಕಲಾ ಜೊತೆಯಲ್ಲಿ 4 ವರ್ಷಗಳ ಕಾಲ ಜೈಲಿನಲ್ಲಿದ್ದ ಸುಧಾಕರನ್ ದಂಡವನ್ನು ಭರಿಸದ ಕಾರಣ ಇನ್ನೂ ಜೈಲುವಾಸ ಅನುಭವಿಸುತ್ತಿದ್ದಾರೆ.
ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ
ತಮಿಳುನಾಡಿಗೆ ಗ್ರ್ಯಾಂಡ್ ವೆಲ್ಕಮ್ ಮಾಡಲು ಚಿನ್ನಮ್ಮ ಬೆಂಬಲಿಗರು ಪ್ಲಾನ್ ಮಾಡಿಕೊಂಡಿದ್ದಾರೆ. ಜಯಲಲಿತಾ ಱಲಿಯ ರೀತಿಯಲ್ಲಿ ಶಶಿಕಲಾ ಱಲಿ ಮಾಡಲು ಸಿದ್ಧತೆ ಮಾಡಿಕೊಂದಿದ್ದಾರೆ. ಜೊತೆಗೆ ಹೊಸೂರು ಬಳಿಯಿರುವ ತಮಿಳುನಾಡು ಕರ್ನಾಟಕ ಗಡಿಯಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.
Heavy security deployed at Karnataka – Tamil Nadu border in Hosur ahead of the arrival of expelled AIADMK leader VK Sasikala in Tamil Nadu, from Bengaluru. pic.twitter.com/ymY2DLnwrq
— ANI (@ANI) February 8, 2021
ಅಭಿಮಾನಿಗಳ ಆಕ್ರೋಶ
ತಮಿಳುನಾಡು ಜನ ಚಿನ್ನಮ್ಮ ಜೊತೆ ಇದ್ದಾರೆ. ರಾಜ್ಯದಲ್ಲಿ ಮುಂದೆ ಜಯಲಲಿತಾ ಅಮ್ಮ ಕೆಲಸವನ್ನು ಚಿನ್ನಮ್ಮ ಮಾಡುತ್ತಾರೆ. ನಮ್ಮ ಮತ ವಿಭಜನೆ ಆಗಲ್ಲ. ಚಿನ್ನಮ್ಮ ಎಲ್ಲಿ ಇರುತ್ತಾರೋ ಎಐಎಡಿಎಂಕೆ ಮತ ಅಲ್ಲಿ ಇರುತ್ತೆ ಎಂದು ಪಳನಿಸ್ವಾಮಿ ಮತ್ತು ಪನ್ನಿರ್ ಸೆಳ್ವಾಂ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ತಮಿಳುನಾಡಿಗೆ ಎಂಟ್ರಿ ಬೆನ್ನಲ್ಲೇ ಶಶಿಕಲಾಗೆ ಬಿಗ್ ಶಾಕ್: ನಾಯಕಿ ಆಪ್ತೆ ಇಳವರಸಿ, ಸುಧಾಕರನ್ ಆಸ್ತಿ ಮುಟ್ಟುಗೋಲು
Published On - 10:21 am, Mon, 8 February 21