ಅನ್ಲಾಕ್ 3.0: ಶಾಲಾ ಕಾಲೇಜುಗಳನ್ನು ಆಗಸ್ಟ್ 31ರವರೆಗೆ ತೆರೆಯುವಂತಿಲ್ಲ

| Updated By: ಸಾಧು ಶ್ರೀನಾಥ್​

Updated on: Jul 30, 2020 | 11:03 AM

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಕೊವಿಡ್-19 ಸ್ಥಿತಿಗತಿಯ ಬಗ್ಗೆ ಇಂದು ಸಂಪುಟ ಸಭೆ ನಡೆಸಿದ ನಂತರ ಕೇಂದ್ರ ಗೃಹ ಸಚಿವಾಲಯವು ಅನ್ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಮಾಡಿತು. ಮಾರ್ಗಸೂಚಿಯ ಪ್ರಕಾರ, ಅನ್ಲಾಕ್ 3.0 ನಲ್ಲಿ ರಾತ್ರಿ ಕರ್ಫ್ಯೂ ಇರುವುದಿಲ್ಲ. ಶಾಲಾ ಕಾಲೇಜುಗಳನ್ನು ಆಗಸ್ಟ್ 31ರ ವರೆಗೆ ತೆರೆಯದಂತೆ ಸೂಚಿಸಲಾಗಿದೆ. ಆದರೆ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಬಹುದಾಗಿದೆ. ಕ್ರೀಡಾಪಟು ಮತ್ತು ಕ್ರೀಡಾಸಕ್ತರಿಗೆ ಒಳ್ಳೆಯ ಸುದ್ದಿ ಇಲ್ಲ. ಕ್ರೀಡಾ ಚಟುವಟಿಕೆಗಳನ್ನು ಇನ್ನೂ ಸ್ವಲ್ಪ ಸಮಯದವರೆಗೆ […]

ಅನ್ಲಾಕ್ 3.0: ಶಾಲಾ ಕಾಲೇಜುಗಳನ್ನು ಆಗಸ್ಟ್ 31ರವರೆಗೆ ತೆರೆಯುವಂತಿಲ್ಲ
Follow us on

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಕೊವಿಡ್-19 ಸ್ಥಿತಿಗತಿಯ ಬಗ್ಗೆ ಇಂದು ಸಂಪುಟ ಸಭೆ ನಡೆಸಿದ ನಂತರ ಕೇಂದ್ರ ಗೃಹ ಸಚಿವಾಲಯವು ಅನ್ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಮಾಡಿತು.

ಮಾರ್ಗಸೂಚಿಯ ಪ್ರಕಾರ, ಅನ್ಲಾಕ್ 3.0 ನಲ್ಲಿ ರಾತ್ರಿ ಕರ್ಫ್ಯೂ ಇರುವುದಿಲ್ಲ. ಶಾಲಾ ಕಾಲೇಜುಗಳನ್ನು ಆಗಸ್ಟ್ 31ರ ವರೆಗೆ ತೆರೆಯದಂತೆ ಸೂಚಿಸಲಾಗಿದೆ. ಆದರೆ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಬಹುದಾಗಿದೆ.

ಕ್ರೀಡಾಪಟು ಮತ್ತು ಕ್ರೀಡಾಸಕ್ತರಿಗೆ ಒಳ್ಳೆಯ ಸುದ್ದಿ ಇಲ್ಲ. ಕ್ರೀಡಾ ಚಟುವಟಿಕೆಗಳನ್ನು ಇನ್ನೂ ಸ್ವಲ್ಪ ಸಮಯದವರೆಗೆ ನಿರ್ಭಂಧಿಸಲು ಗೃಹ ಇಲಾಖೆ ನಿರ್ಧರಿಸಿದೆ. ಜೊತೆಗೆ ಸಿನಿಮಾ ಪ್ರಿಯರಿಗೂ ನಿರಾಶೆ ಕಾದಿದೆ. ಥಿಯೇಟರ್, ಈಜುಕೊಳ ಮತ್ತು ಮೆಟ್ರೊ ರೈಲು ಸೇವೆಯನ್ನು ಆರಂಭಿಸದಿರಲು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಬಾರ್, ಮನರಂಜನಾ ಪಾರ್ಕ್, ಅಸೆಂಬ್ಲಿ ಹಾಲ್ಗಳು ಮತ್ತಷ್ಟು ಸಮಯದವರೆಗೆ ಮುಚ್ಚಿರುತ್ತವೆ.

ಹಾಗೆಯೇ, ರಾಜಕೀಯ ಹಾಗೂ ಧಾರ್ಮಿಕ ಸಭೆ-ಸಮಾರಂಭಗಳಿಗೆ ನಿಷೇಧ ಮುಂದುವರಿದಿದೆ. ಆದರೆ ಕ್ರಮೇಣವಾಗಿ ವಿಮಾನಯಾನ ಪುನಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆಗಸ್ಟ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆಚರಣೆಯಲ್ಲಿ ಭಾಗವಹಿಸುವವರು ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

Published On - 9:20 am, Thu, 30 July 20