Uttrakhand: ನದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಕಾಪಾಡಿದ ಎಸ್‌ಡಿಆರ್‌ಎಫ್, ಇಲ್ಲಿದೆ ಆ ಸಾಹಸದ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 08, 2022 | 10:41 AM

ಕಾರೊಂದು ನದಿಗೆ ಬಿದ್ದು ನದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಾಜ್ಯ ವಿಪತ್ತು ಸ್ಪಂದನಾ ತಂಡ ತಡರಾತ್ರಿ ಕಾರ್ಯಾಚರಣೆಯಲ್ಲಿ ರಕ್ಷಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅವರನ್ನು ರಕ್ಷಿಸುವ ಮೊದಲು ಪೌರಿ ಗಡ್ವಾಲ್ ಜಿಲ್ಲೆಯ ಶ್ರೀಯಂತ್ರ ತಪೂ ಬಳಿ ನದಿಯ ಮಧ್ಯದಲ್ಲಿ ಆ ವ್ಯಕ್ತಿ ಸಿಲುಕಿಕೊಂಡಿದ್ದ.

Uttrakhand: ನದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಕಾಪಾಡಿದ ಎಸ್‌ಡಿಆರ್‌ಎಫ್, ಇಲ್ಲಿದೆ ಆ ಸಾಹಸದ ವಿಡಿಯೋ
SDRF rescued a man stuck in the river, here is the video of that adventure
Follow us on

ಪೌರಿ ಗಡ್ವಾಲ್ : ಉತ್ತರಾಖಂಡದಲ್ಲಿ (Uttrakhand) ಕಾರೊಂದು ನದಿಗೆ ಬಿದ್ದು ನದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಾಜ್ಯ ವಿಪತ್ತು ಸ್ಪಂದನಾ ತಂಡ ತಡರಾತ್ರಿ ಕಾರ್ಯಾಚರಣೆಯಲ್ಲಿ ರಕ್ಷಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅವರನ್ನು ರಕ್ಷಿಸುವ ಮೊದಲು ಪೌರಿ ಗಡ್ವಾಲ್ ಜಿಲ್ಲೆಯ ಶ್ರೀಯಂತ್ರ ತಪೂ ಬಳಿ ನದಿಯ ಮಧ್ಯದಲ್ಲಿ ಆ ವ್ಯಕ್ತಿ ಸಿಲುಕಿಕೊಂಡಿದ್ದ.

ಈ 55 ಸೆಕೆಂಡುಗಳ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ತನ್ನ ಕಾರಿನ ಛಾವಣಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಎಸ್‌ಡಿಆರ್‌ಎಫ್ ತಂಡ ಆ ವ್ಯಕ್ತಿಯನ್ನು ರಕ್ಷಿಸಲು ನೀರಿನಲ್ಲಿ ಹಗ್ಗಗಳನ್ನು ಬಳಸಿ ಇಳಿಜಾರಿನ ಕೆಳಗೆ ಏರುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಕೊನೆಗೂ ಆ ವ್ಯಕ್ತಿಯನ್ನು ಎಸ್‌ಡಿಆರ್‌ಎಫ್ ತಂಡ ಕಾಪಾಡಿದೆ. ರಕ್ಷಿಸಲ್ಪಟ್ಟ ವ್ಯಕ್ತಿ ಸ್ಥಳೀಯ ನಿವಾಸಿಯಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

Published On - 10:41 am, Sat, 8 October 22