
ನವದೆಹಲಿ, ಮೇ 3: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಗೆ (Pahalgam Attack) ಸಂಬಂಧಿಸಿದಂತೆ ಭಾರತೀಯ ಗಉಪ್ತಚರ ಇಲಾಖೆ ಮಾಹಿತಿ ನೀಡಿದ ನಂತರ ಚೆನ್ನೈನಿಂದ ಬಂದ ವಿಮಾನವನ್ನು ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ (Sri Lanka Airport) ಶೋಧಿಸಲಾಗಿದೆ. ಈ ವಿಮಾನದಲ್ಲಿ ಪಹಲ್ಗಾಮ್ ದಾಳಿಯ ಉಗ್ರನೊಬ್ಬ ಭಾರತ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಚೆನ್ನೈನಿಂದ ಬಂದ ಶ್ರೀಲಂಕಾ ಏರ್ಲೈನ್ಸ್ ವಿಮಾನವು ಇಂದು ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎ) ವಿಶೇಷ ಭದ್ರತಾ ಕಾರ್ಯಾಚರಣೆಗೆ ಒಳಗಾಯಿತು.
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಸಂಭಾವ್ಯ ಶಂಕಿತರನ್ನು ಭಾರತೀಯ ಗುಪ್ತಚರ ಇಲಾಖೆ ಗುರುತಿಸಿದ ನಂತರ ಚೆನ್ನೈನಿಂದ ಬಂದ ಶ್ರೀಲಂಕಾ ಏರ್ಲೈನ್ಸ್ ವಿಮಾನವನ್ನು ಇಂದು ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎ) ವಿಶೇಷ ಭದ್ರತಾ ಕಾರ್ಯಾಚರಣೆಗೆ ಒಳಪಡಿಸಲಾಯಿತು. ಚೆನ್ನೈನಿಂದ ಬಂದ ವಿಮಾನದಲ್ಲಿ 6 ಶಂಕಿತ ಭಯೋತ್ಪಾದಕರು ಇರುವ ಬಗ್ಗೆ ಭಾರತದಿಂದ ಬಂದ ಎಚ್ಚರಿಕೆ ಬಂದ ನಂತರ ಶ್ರೀಲಂಕಾದ ಅಧಿಕಾರಿಗಳು ಆ ವಿಮಾನದ ಆಗಮನದ ನಂತರ ಶೋಧ ನಡೆಸಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಆ 6 ಜನರಲ್ಲಿ ಪಹಲ್ಗಾಮ್ ದಾಳಿಯ ಉಗ್ರನೂ ಇದ್ದಾನೆ ಎಂಬ ಮಾಹಿತಿ ಬಂದಿತ್ತು.
#BREAKING: Srilankan Airlines says that its flight from Chennai in India to Colombo was subjected to comprehensive security search upon arrival. This was done following an alert from Chennai Area Control Centre regarding a suspect wanted in India believed to be onboard. pic.twitter.com/Uu0gKAdukM
— Aditya Raj Kaul (@AdityaRajKaul) May 3, 2025
ಇದನ್ನೂ ಓದಿ: ಪಹಲ್ಗಾಮ್ ದಾಳಿಕೋರರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಅಡಗಿಸಿಟ್ಟಿದ್ರು? ಎನ್ಐಎಯಿಂದ ಮಾಹಿತಿ
ಅಧಿಕೃತ ಹೇಳಿಕೆಯಲ್ಲಿ, 4R-ALS ವಿಮಾನದಿಂದ ನಿರ್ವಹಿಸಲ್ಪಡುವ UL 122 ವಿಮಾನವನ್ನು ಚೆನ್ನೈನಿಂದ ಕೊಲಂಬೊಗೆ ಬಂದ ನಂತರ ಭದ್ರತಾ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು ಎಂದು ಶ್ರೀಲಂಕಾ ಏರ್ಲೈನ್ಸ್ ತಿಳಿಸಿದೆ. “ಇಂದು (ಮೇ 3) ಬೆಳಿಗ್ಗೆ 11.59 ಗಂಟೆಗೆ ಚೆನ್ನೈನಿಂದ ಕೊಲಂಬೊಗೆ ಬಂದಿಳಿದ 4R-ALS ವಿಮಾನದಿಂದ ನಿರ್ವಹಿಸಲ್ಪಡುವ UL 122 ವಿಮಾನವನ್ನು ಸಮಗ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಶ್ರೀಲಂಕನ್ ಏರ್ಲೈನ್ಸ್ ಸಾರ್ವಜನಿಕರಿಗೆ ತಿಳಿಸಲು ಬಯಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪಾಕ್ ಮೇಲೆ ಭಾರತ ದಾಳಿ ಮಾಡಿದರೆ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಲು ಚೀನಾದೊಂದಿಗೆ ಕೈಜೋಡಿಸಿ; ಬಾಂಗ್ಲಾ ಮಾಜಿ ಜನರಲ್
“ಭಾರತಕ್ಕೆ ಬೇಕಾಗಿರುವ ಶಂಕಿತನೊಬ್ಬ ವಿಮಾನದಲ್ಲಿದ್ದಾನೆ ಎಂದು ಚೆನ್ನೈ ಪ್ರದೇಶ ನಿಯಂತ್ರಣ ಕೇಂದ್ರದಿಂದ ಬಂದ ಎಚ್ಚರಿಕೆಯ ನಂತರ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಈ ಶೋಧ ನಡೆಸಲಾಯಿತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ ವಿಮಾನವನ್ನು ಪರಿಶೀಲಿಸಲಾಯಿತು. ನಂತರ ಮುಂದಿನ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಯಿತು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಕಡ್ಡಾಯ ಭದ್ರತಾ ಕಾರ್ಯವಿಧಾನದಿಂದಾಗಿ ಮುಂದಿನ ನಿಗದಿತ ಸೇವೆ ಅಂದರೆ ಸಿಂಗಾಪುರಕ್ಕೆ ತೆರಳುವ UL308 ವಿಮಾನ ವಿಳಂಬವಾಯಿತು ಎಂದು ತಿಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ