ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ: ಆರೋಪಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ; ದೆಹಲಿ ಕೋರ್ಟ್

ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಪಿ ಲಲಿತ್ ಝಾಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ: ಆರೋಪಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ; ದೆಹಲಿ ಕೋರ್ಟ್
ಸಾಂದರ್ಭಿಕ ಚಿತ್ರ

Updated on: Dec 15, 2023 | 5:53 PM

ದೆಹಲಿ, ಡಿ.15: ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಪಿ ಲಲಿತ್ ಝಾಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಇಂದು ದೆಹಲಿ ಪೊಲೀಸರು ಲಲಿತ್ ಝಾನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಹಾಜರುಪಡಿಸಿದ್ದರು. ಕೋರ್ಟ್​​​ ಮುಂದೆ ಇಂದು ಆರೋಪಿ ಲಲಿತ್ ಝಾನ್ನು ಹಾಜರುಪಡಿಸಲಾಗಿದೆ. ಸಂಸತ್​​​​​​​ ಭದ್ರತಾ ಲೋಪದ ಬಗ್ಗೆ ಆತನನ್ನು ಇನ್ನು ಹೆಚ್ಚಿನ ತನಿಖೆ ನಡೆಸಬೇಕಿದೆ. ಇದಕ್ಕಾಗಿ ಆರೋಪಿಯನ್ನು 15 ದಿನಗಳ ಪೊಲೀಸ್​​​​ ಕಸ್ಟಡಿಗೆ ನೀಡಬೇಕು ಎಂದು ದೆಹಲಿ ಪೊಲೀಸರು ಹೇಳಿದರು. ಆದರೆ ಕೋರ್ಟ್​​​ ಆರೋಪಿಯ ಎಲ್ಲ ಮಾಹಿತಿಯನ್ನು ಅಂದರೆ ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಏಳು ದಿನದೊಳಗೆ ಮುಗಿಸುವಂತೆ ಹೇಳಿದೆ. ಆ ಕಾರಣದಿಂದ ಆರೋಪಿಯನ್ನು ಏಳು ದಿನಗಳ ಕಾಲ ಪೊಲೀಸ್​​​ ಕಸ್ಟಡಿಗೆ ನೀಡಲು ಆದೇಶಿಸಿದೆ.

ಸಾಗರ್​​​ ಶರ್ಮ ಮತ್ತು ಮನೋರಂಜನ್​​​​ ಸಂಸತ್​​​ ಒಳಗೆ ಬರಲು ಹಾಗೂ ಈ ಪಿತ್ತೂರಿಗೆ ಲಲಿತ್ ಝಾಯೇ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಹಾಗಾಗಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಹೆಚ್ಚಿನ ಕಾಲವಕಾಶಬೇಕು ಎಂದು ದೆಹಲಿ ಪೊಲೀಸರು ಕೋರ್ಟ್​​​ ಮುಂದೆ ಮನವಿ ಮಾಡಿದ್ದಾರೆ. ಲಲಿತ್ ಝಾ ಮತ್ತು ಆತನ ತಂಡದ ಪ್ರಮುಖ ಉದ್ದೇಶವೇನು? ಯಾವ ಕಾರಣಕ್ಕೆ ಸಂಸತ್​​​ನ ಒಳಗೆ ಅಶ್ರುವಾಯು ಸಿಡಿಸಿದ್ದಾರೆ? ಇದರ ಹಿಂದೆ ಇನ್ನು ಯಾರೆಲ್ಲ ಇದ್ದರೆ. ಹಾಗೂ ಇತನನ್ನು ಕೆಲವೊಂದು ಪ್ರದೇಶಗಳಿಗೆ ಕರೆದೊಯ್ಯಬೇಕು, ಆತನ ಮೊಬೈಲ್​​​​​ ಸಾಧನಗಳನ್ನು ಪರಿಶೀಲನೆ ಮಾಡಬೇಕು ಎಂದು ದೆಹಲಿ ಪೊಲೀಸರು ಕೋರ್ಟ್​​​​ ಮುಂದೆ ಹೇಳಿದ್ದಾರೆ.
 

ಈ ಘಟನೆಯಲ್ಲಿ ಲಲಿತ್ ಝಾ ಪಾತ್ರವೇನು?

ಈ ಎಲ್ಲ ಘಟನೆಗಳಿಗೆ ಮಾಸ್ಟರ್ ಮೈಂಡ್ ಲಲಿತ್ ಝಾ. ಎಲ್ಲವನ್ನು ಪ್ಲಾನ್​​ ಮಾಡಿದ್ದು ಈ ಆರೋಪಿ. ಸಂಸತ್​​​ ಒಳಗೆ ಹೋಗುವುದರಿಂದ ಹಿಡಿದು, ಅಲ್ಲಿಯ ಎಲ್ಲ ವಿಚಾರಗಳನ್ನು ಗಮನಿಸಿಕೊಂಡು, ಪ್ಲಾನ್​​ ಪ್ರಕಾರವೆ ಎಲ್ಲವೂ ನಡೆಸಿದ್ದಾರೆ. ಇನ್ನು ಇತನನ್ನು ಹಿಡಿಯಲು ದೆಹಲಿ ಪೊಲೀಸರ ತಂಡವು ರಾಜಸ್ಥಾನದ ನಗೌರ್‌ನಲ್ಲಿಯೂ ಬೀಡುಬಿಟ್ಟಿತ್ತು. ಅಲ್ಲಿಂದಲ್ಲೇ ಪ್ಲಾನ್​​ ಬಗ್ಗೆ ಉಳಿದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ. ನಿರಂತರ ಅವರ ಸಂಪರ್ಕದಲ್ಲಿದ್ದ. ಇತನ ಆದೇಶದಂತೆ ಉಳಿದ ಆರೋಪಿಗಳು ಕೆಲಸ ಮಾಡುತ್ತಿದ್ದರು. ಇನ್ನು ಸಂಸತ್ತಿನ ಹೊರಗೆ ಪ್ರತಿಭಟನೆ ಮಾಡುತ್ತಿದ್ದವರ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ. ಘಟನೆಯ ನಂತರ ಆರೋಪಿಗಳ ಫೋನ್​​​ ಜತೆಗೆ  ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಸಂಸತ್​​ನ ಒಳಗೆ ನುಗ್ಗಿದ ಯುವಕರ ಉದ್ದೇಶವೇನಿತ್ತು? ಪೊಲೀಸ್ ವಿಚಾರಣೆ ವೇಳೆ ಅವರು ಹೇಳಿದ್ದು ಹೀಗೆ

ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ ಎಂದು ಗುರುವಾರ (ಡಿ.14) ಹೇಳಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮತ್ತು ಉಭಯ ಸದನಗಳಲ್ಲಿ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಇನ್ನು ಎರಡೂ ಸಂಸತ್ ಕಟ್ಟಡಗಳು ಲೋಕಸಭಾ ಸ್ಪೀಕರ್ ಅವರ ವ್ಯಾಪ್ತಿಗೆ ಬರುತ್ತವೆ ಎಂದು ಜೋಶಿ ಹೇಳಿದರು. ಎರಡೂ ಕಟ್ಟಡಗಳು ಸ್ಪೀಕರ್‌ನ ವ್ಯಾಪ್ತಿಯಲ್ಲಿವೆ. ನಾವು ಸ್ಪೀಕರ್ ಆದೇಶವನ್ನು ಪಾಲಿಸುತ್ತೇವೆ. ಉನ್ನತ ಮಟ್ಟದ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Fri, 15 December 23