AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಲಾರೆ ಭಲಾ… ಇದು ಹೈದರಾಬಾದ್ ಬಿರಿಯಾನಿ ಜೋಷ್.. ಒಬ್ಬನೆ 1,633 ಆರ್ಡರ್ ಮಾಡಿದ್ದ!

Swiggy Food statistics: ಈ ವರ್ಷದ ಮೊದಲ ಆರು ತಿಂಗಳಲ್ಲಿ, ಹೈದರಾಬಾದ್‌ನ ಜನರು 72 ಲಕ್ಷಕ್ಕೂ ಹೆಚ್ಚು ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಕಂಪನಿ ಇತ್ತೀಚೆಗೆ ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿ ಒಂದೇ ಬಾರಿಗೆ ವರ್ಷಕ್ಕೆ ಸಾಕಾಗುವಷ್ಟು ಬಿರಿಯಾನಿ ಆರ್ಡರ್ ಮಾಡಿದ್ದಾನೆ ಎನ್ನಲಾಗಿದೆ.

ಭಲಾರೆ ಭಲಾ... ಇದು ಹೈದರಾಬಾದ್ ಬಿರಿಯಾನಿ ಜೋಷ್.. ಒಬ್ಬನೆ 1,633 ಆರ್ಡರ್ ಮಾಡಿದ್ದ!
ಇದು ಹೈದರಾಬಾದ್ ಬಿರಿಯಾನಿ ಜೋಷ್
ಸಾಧು ಶ್ರೀನಾಥ್​
|

Updated on: Dec 15, 2023 | 3:38 PM

Share

ಭಾರತದಲ್ಲಿ ಎಲ್ಲಿಯೂ ಇಲ್ಲದಷ್ಟು ರುಚಿಕರವಾದ ಬಿರಿಯಾನಿಯನ್ನು ನೀಡುವ ನಗರವೆಂದರೆ ಅದು ಹೈದರಾಬಾದ್‌. ಡಿಜಿಟಲ್ ಯುಗದಲ್ಲಿ ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲಿ ಹೆಚ್ಚಿನ ಜನರು ಬಿರಿಯಾನಿ ಆರ್ಡರ್ ಮಾಡುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಸಮೀಕ್ಷೆಯಲ್ಲಿ ಕೆಲವು ಲಕ್ಷ ಬಿರಿಯಾನಿಗಳನ್ನು ಸ್ವಿಗ್ಗಿ (Swiggy) ಡೆಲಿವರಿ ಮಾಡಿರುವುದು ಕಂಡುಬಂದಿದೆ. Swiggy 2023 ಬಿಡುಗಡೆ ಮಾಡಿದ ಟ್ರೆಂಡ್‌ಗಳ ಪ್ರಕಾರ ಹೈದರಾಬಾದ್ ಬಿರಿಯಾನಿ ಎಂಟನೇ ಬಾರಿಗೆ ಪ್ರಸಿದ್ಧ ಆಹಾರವಾಗಿ (Food) ಮೊದಲ ಸ್ಥಾನದಲ್ಲಿದೆ. ಆಹಾರ ವಿತರಣಾ ಆಪ್​​ನಲ್ಲಿ ಬಿರಿಯಾನಿ ಖಾದ್ಯವನ್ನು 40,30,827 ಬಾರಿ ಹುಡುಕಲಾಗಿದೆ. 2023 ರಲ್ಲಿ ಸ್ವಿಗ್ಗಿ ನೀಡುವ ಪ್ರತಿ ಆರನೇ ಆರ್ಡರ್‌ನಲ್ಲಿ ಬಿರಿಯಾನಿ ( Hyderabad Biryani) ಇರುತ್ತದೆ. ಹೆಚ್ಚಿನವರು ಹೈದರಾಬಾದ್‌ನಿಂದ ಆರ್ಡರ್ ಮಾಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಈ ವರ್ಷದ ಮೊದಲ ಆರು ತಿಂಗಳಲ್ಲಿ, ಹೈದರಾಬಾದ್‌ನ ಜನರು 72 ಲಕ್ಷಕ್ಕೂ ಹೆಚ್ಚು ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಕಂಪನಿ ಇತ್ತೀಚೆಗೆ ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿ ಒಂದೇ ಬಾರಿಗೆ ವರ್ಷಕ್ಕೆ ಸಾಕಾಗುವಷ್ಟು ಬಿರಿಯಾನಿ ಆರ್ಡರ್ ಮಾಡಿದ್ದಾನೆ ಎನ್ನಲಾಗಿದೆ.

ಅವರು ಒಂದು ವರ್ಷದಲ್ಲಿ 1,633 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆಂದು ತೋರುತ್ತದೆ. ಹಾಗೆ ನೋಡಿದರೆ ಒಬ್ಬರೇ ದಿನಕ್ಕೆ ನಾಲ್ಕೈದು ಬಿರಿಯಾನಿಗಳನ್ನು ಖರೀದಿಸುತ್ತಾರೆ. ಜನರು ಸ್ವಿಗ್ಗಿ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಆಹಾರ ವಿತರಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

Also Read:  ಹೈದರಾಬಾದ್ – ಆನ್​ಲೈನ್​ ಮೂಲಕ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ

ಇದರ ಭಾಗವಾಗಿ, ಚೆನ್ನೈ ಮತ್ತು ಹೈದರಾಬಾದ್ ನಿವಾಸಿಗಳಿಂದ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಇರಿಸಲಾಗಿದೆ. ಮುಂಬೈನಲ್ಲಿ ವ್ಯಕ್ತಿಯೊಬ್ಬರು ರೂ. 42.3 ಲಕ್ಷ ಮೌಲ್ಯದ ಆರ್ಡರ್ ಮಾಡಿದ್ದರಂತೆ. ಹೈದರಾಬಾದ್ ಚಿಕನ್ ಬಿರಿಯಾನಿಗೆ ವರ್ಷವಿಡೀ ಉತ್ತಮ ಬೇಡಿಕೆ ಇದೆ ಎಂದು ಸ್ವಿಗ್ಗಿ ಹೇಳಿದೆ. ಪ್ರತಿ ಸೆಕೆಂಡಿಗೆ 2.5 ಮಂದಿ ಸ್ವಿಗ್ಗಿ ಆಪ್ ಮೂಲಕ ಬಿರಿಯಾನಿ ಆರ್ಡರ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಹೈದರಾಬಾದ್‌ನಲ್ಲಿ 6 ಲಕ್ಷ ರೂಪಾಯಿ ಮೌಲ್ಯದ ಇಡ್ಲಿಗಳನ್ನು ಒಬ್ಬರೇ ಆರ್ಡರ್ ಮಾಡಿದ್ದು ಸುದ್ದಿಯಾಗಿದೆ. ಜತೆಗೆ ವಿಶೇಷ ರಿಯಾಯಿತಿ, ಆಫರ್, ಕೂಪನ್ ಗಳ ಮೂಲಕ ಗ್ರಾಹಕರಿಗೆ ಲಕ್ಷಗಟ್ಟಲೆ ಹಣ ಉಳಿತಾಯವಾಗಿದೆಯಂತೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ