ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ 2 ನಕ್ಸಲರನ್ನು ಎನ್‌ಕೌಂಟರ್ ಮಾಡಿದ ಭದ್ರತಾ ಪಡೆ
ಮಹಾರಾಷ್ಟ್ರದ ಗಡ್‌ಚಿರೋಲಿ ಪೊಲೀಸರು ಮತ್ತು ಛತ್ತೀಸ್‌ಗಢದ ಬಿಜಾಪುರ ಪೊಲೀಸರು ಎರಡು ರಾಜ್ಯಗಳ ಗಡಿಯ ಕಾಡಿನಲ್ಲಿ ಇಂದು ಬೆಳಿಗ್ಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದೆ.
ದಮ್ರಾಂಚ: ಮಹಾರಾಷ್ಟ್ರದ (Maharashtra) ಗಡ್‌ಚಿರೋಲಿ(Gadchiroli) ಪೊಲೀಸರು ಮತ್ತು ಛತ್ತೀಸ್‌ಗಢದ (Chhattisgarh) ಬಿಜಾಪುರ (Bijapur) ಪೊಲೀಸರು ಎರಡು ರಾಜ್ಯಗಳ ಗಡಿಯ ಕಾಡಿನಲ್ಲಿ ಇಂದು ಬೆಳಿಗ್ಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಇನ್ನುಳಿದವರು ಕಾಡಿಗೆ ಓಡಿ ಹೋಗಿದ್ದು, ಹೆಚ್ಚಿನ ಸಾವು ನೋವು ಸಂಭವಿಸಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಗಡ್ಚಿರೋಲಿ ಪೊಲೀಸ್‌ನ ಸಿ-60 ಘಟಕದ ಅಧಿಕಾರಿಗಳು ಮತ್ತು ಬಿಜಾಪುರ ಪೊಲೀಸ್‌ನ ಡಿಆರ್‌ಜಿ ದಮ್ರಾಂಚ ಅರಣ್ಯ ಪ್ರದೇಶದಲ್ಲಿ ದಟ್ಟವಾದ ಹೊದಿಕೆಯೊಂದಿಗೆ ಗಸ್ತು ತಿರುಗುತ್ತಿದ್ದಾಗ ನಕ್ಸಲರು ಗುಂಡಿನ ದಾಳಿ ನಡೆಸಿದರು. ಅವರು ಸ್ವಯಂಚಾಲಿತ ರೈಫಲ್‌ಗಳನ್ನು ಬಳಸಿದರು ಮತ್ತು ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು.
ಇದನ್ನು ಓದಿ:Indian Army: ಸಿಕ್ಕಿಂನಲ್ಲಿ ಸೇನಾ ಟ್ರಕ್ ಕಮರಿಗೆ ಬಿದ್ದು 16 ಮಂದಿ ಯೋಧರು ಸಾವು
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಇಬ್ಬರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಗಡ್‌ಚಿರೋಲಿಯ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ. ದಮ್ರಾಂಚ ಅರಣ್ಯದಲ್ಲಿ ಗಡ್ಚಿರೋಲಿ ಪೊಲೀಸರು ಮತ್ತು ಬಿಜಾಪುರ ಪೊಲೀಸರ ತಂಡಗಳ ಗಸ್ತು ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Fri, 23 December 22