ಜಮ್ಮು ಮತ್ತು ಕಾಶ್ಮೀರದಲ್ಲಿ( Jammu and Kashmir) ನಡೆದ ಜಿ20 (G20 )ಸಮ್ಮೇಳನಕ್ಕೆ ವಿದೇಶಿ ಪ್ರತಿನಿಧಿಗಳು ತಂಗುವ ಹೋಟೆಲ್ಗಳು ಹಾಗೂ ಅವರು ಭೇಟಿ ನೀಡುವ ಸ್ಥಳಗಳ ಬಳಿ ಹೆಚ್ಚಿನ ಭದ್ರತೆ ನೀಡಲಾಗಿತ್ತು.ಜಿ 20 ಪ್ರವಾಸೋದ್ಯಮ ಸಮ್ಮೇಳನಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಚು (Terror Plot) ಬಯಲಾಗಿದ ಹಿನ್ನಲೆಯಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಚೀನಾ ಮತ್ತು ಪಾಕಿಸ್ತಾನದ ಷಡ್ಯಂತ್ರವನ್ನು ಗ್ರಹಿಸಿದ ಗುಪ್ತಚರರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರು. ಎನ್ಎಸ್ಜಿ ಮತ್ತು ಮಾರ್ಕೋಸ್ನಂತಹ ಬಲಿಷ್ಠ ಭದ್ರತಾ ಪಡೆಗಳನ್ನು ಇಲ್ಲಿ ನಿಯೋಜಿಸಿದ್ದು ಶ್ರೀನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
ಮುಂಬೈ ಮಾದರಿಯ ಭಯೋತ್ಪಾದಕ ದಾಳಿ ನಡೆಸುವ ಭಯೋತ್ಪಾದಕರ ಯೋಜನೆಯನ್ನು ವಿಫಲಗೊಳಿಸಿದ ಭದ್ರತಾ ಪಡೆಗಳು ಜಿ20 ಶೃಂಗಸಭೆಯನ್ನು ಯಶಸ್ವಿಗೊಳಿಸಿವೆ. ಪ್ರತಿ ಚಲನೆಯನ್ನು ಗ್ರಹಿಸಿದ NSG ಮತ್ತು ಮಾರ್ಕೋಸ್ (ಜಲ ಯುದ್ಧ ವೀರರು) ಪ್ರಸ್ತುತ ಪ್ರದೇಶದ ಮೇಲೆ ಹಿಡಿತ ಸಾಧಿಸಿದರು.
ಗುಲ್ಮಾರ್ಗ್ನಲ್ಲಿ ವಿದೇಶಿ ಪ್ರತಿನಿಧಿಗಳು ತಂಗಿದ್ದ ಹೋಟೆಲ್ ಮೇಲೆ ಉಗ್ರರು ದಾಳಿ ಸಂಚು ಹೂಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಲಭಿಸಿದ ಕೂಡಲೇ ಜಿ20 ಪ್ರವಾಸೋದ್ಯಮ ಪ್ರತಿನಿಧಿಗಳು ತಂಗಿರುವ ಹೋಟೆಲ್ನ ಸ್ಥಳವನ್ನು ಬದಲಾಯಿಸಲಾಗಿದೆ.
ಇದನ್ನೂ ಓದಿ: G20 Meeting: ಶ್ರೀನಗರದಲ್ಲಿ ಜಿ20 ಸಭೆ, ಉಗ್ರರ ದಾಳಿಯ ಎಚ್ಚರಿಕೆ ಹಿನ್ನೆಲೆ ಗಡಿಯಲ್ಲಿ ಬಿಗಿ ಬಂದೋಬಸ್ತ್
ಪಾಕಿಸ್ತಾನದಿಂದ ಭಯೋತ್ಪಾದನಾ ಸಂಚು
ಗುಲ್ಮಾರ್ಗ್ನಲ್ಲಿ ಮುಂಬೈ ಮಾದರಿಯ ದಾಳಿ ನಡೆಸಲು ಪಾಕಿಸ್ತಾನದ ಭಯೋತ್ಪಾದಕರು ಸಂಚು ರೂಪಿಸಿದ್ದರು. ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮೇ 22- 24ರವರೆಗೆ ಶ್ರೀನಗರದಲ್ಲಿ ಜಿ20 ಶೃಂಗಸಭೆ ನಡೆದಿದೆ. ಸುಮಾರು 60 ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ