- Kannada News Photo gallery Kannada News | Game Changer actor Ram Charan photos from G20 Summit Srinagar mdn
Ram Charan: ಜಿ20 ಸಭೆಯಲ್ಲಿ ಮಿಂಚಿದ ರಾಮ್ ಚರಣ್; ‘ಗೇಮ್ ಚೇಂಜರ್’ ನಟನ ಫೋಟೋಸ್ ವೈರಲ್
G20 Summit: ಶ್ರೀನಗರದಲ್ಲಿ ನಡೆದ ಜಿ20 ಸಭೆಯಲ್ಲಿ ರಾಮ್ ಚರಣ್ ಅವರು ಭಾಗವಹಿಸಿದ್ದಾರೆ. ಭಾರತದ ಸಿನಿಮಾ ಮತ್ತು ಸಂಸ್ಕೃತಿ ಬಗ್ಗೆ ಅವರು ಮಾತನಾಡಿದ್ದಾರೆ.
Updated on: May 25, 2023 | 10:55 AM

ನಟ ರಾಮ್ ಚರಣ್ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಅವರು ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ.

ಶ್ರೀನಗರದಲ್ಲಿ ನಡೆದ ಜಿ20 ಸಭೆಯಲ್ಲಿ ರಾಮ್ ಚರಣ್ ಅವರು ಭಾಗವಹಿಸಿದ್ದಾರೆ. ಭಾರತದ ಸಿನಿಮಾ ಮತ್ತು ಸಂಸ್ಕೃತಿ ಬಗ್ಗೆ ಅವರು ಮಾತನಾಡಿದ್ದಾರೆ.

ಜಿ20 ವೇದಿಕೆಯಲ್ಲಿ ರಾಮ್ ಚರಣ್ ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಫ್ಯಾನ್ಸ್ ಕಮೆಂಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.

‘ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ’ ಎಂದು ರಾಮ್ ಚರಣ್ ಅವರ ಅಭಿಮಾನಿಗಳು ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅವರ ಮುಂದಿನ ಸಿನಿಮಾಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

‘ಆರ್ಆರ್ಆರ್’ ಯಶಸ್ಸಿನ ಬಳಿಕ ರಾಮ್ ಚರಣ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ಅವರು ‘ಗೇಮ್ ಚೇಂಜರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ.



















