ಸೆಲ್ಫಿ ತೆಗೆಯುತ್ತಿದ್ದ ಯುವಕನ ಮೇಲೆ ಹರಿದ ರೈಲು, ಸ್ಥಳದಲ್ಲೇ ಸಾವು

ಸೆಲ್ಫಿ(Selfie) ತೆಗೆದುಕೊಳ್ಳುತ್ತಿದ್ದ ಯುವಕನ ಮೇಲೆ ರೈಲು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಸೆಲ್ಫಿ ತೆಗೆಯುತ್ತಿದ್ದ ಯುವಕನ ಮೇಲೆ ಹರಿದ ರೈಲು, ಸ್ಥಳದಲ್ಲೇ ಸಾವು
ಸಾವು
Image Credit source: The Statesman
Edited By:

Updated on: Jul 31, 2023 | 10:47 AM

ಸೆಲ್ಫಿ(Selfie) ತೆಗೆದುಕೊಳ್ಳುತ್ತಿದ್ದ ಯುವಕನ ಮೇಲೆ ರೈಲು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವಂಶ್ ಎಂದು ಗುರುತಿಸಲಾಗಿದ್ದು, ಬೆಳಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ದ್ವಾರಕಾ ಧೀಶ್ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ ತಿವಾರಿಪುರಂ ರೈಲ್ವೆ ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಹೋಲಿ ಗೇಟ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ಮೂವರು ಜಮುನಾ  ಪ್ರದೇಶದ ತಿವಾರಿಪುರಂ ಕಡೆಗೆ ತೆರಳಿದರು. ಅಲ್ಲಿ ಸ್ಕೂಟರ್ ನಿಲ್ಲಿಸಿ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು.

ಮತ್ತಷ್ಟು ಓದಿ: Udupi News: ಸೆಲ್ಫೀ ಗೀಳಿಗಾಗಿ ಸಮುದ್ರಕ್ಕಳಿಯದಂತೆ ಪ್ರವಾಸಿಗರನ್ನು ಎಚ್ಚರಿಸುತ್ತಾ ಸಲಹೆ ನೀಡಿದ ಉಡುಪಿಯ ಒಬ್ಬ ಪೊಲೀಸ್ ಇನ್ಸ್​ಪೆಕ್ಟರ್

ಬಳಿಕ ರೈಲು ಸಮೀಪಿಸುತ್ತಿದ್ದಂತೆ, ಅದನ್ನು ತಪ್ಪಿಸಲು ಸ್ನೇಹಿತರು ತಕ್ಷಣವೇ ಸೇತುವೆಯ ಒಂದು ಬದಿಗೆ ತೆರಳಿದರು, ಆದರೆ ವಂಶ್ ಮಾತ್ರ ಟ್ರ್ಯಾಕ್ ಬಳಿ ಹೆಜ್ಜೆ ಹಾಕಿದ್ದಾನೆ, ಬಲವಾದ ಗಾಳಿಯನ್ನು ತಡೆಯಲಾಗಲಿಲ್ಲ. ಈ ವೇಳೆ ರೈಲಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಎಸ್‌ಪಿ ಶೈಲೇಶ್‌ ಕುಮಾರ್‌ ಪಾಂಡೆ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ನದಿ ದಡಗಳು ಮತ್ತು ರೈಲ್ವೆ ಹಳಿಗಳಂತಹ ಅಪಾಯಕಾರಿ ಸ್ಥಳಗಳ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:07 am, Mon, 31 July 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us